'ಭಾರತ ಮ್ಯಾಚ್ ಫಿಕ್ಸ್ ಮಾಡಿದೆ...', ಆಕ್ರೋಶಗೊಂಡ ಶೋಯೆಬ್ ಅಖ್ತರ್ ಹೇಳಿದ್ದೇನು? ವಿಡಿಯೋ ವೈರಲ್

ಏಷ್ಯಾಕಪ್‌ನ ಸೂಪರ್-4ರಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ತನ್ನ ಎರಡನೇ ಪಂದ್ಯದಲ್ಲಿ 41 ರನ್‌ಗಳಿಂದ ಗೆದ್ದಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಆದರೆ ಬೌಲರ್‌ಗಳು ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. 
ಶೋಯಬ್ ಅಖ್ತರ್
ಶೋಯಬ್ ಅಖ್ತರ್

ಇಸ್ಲಾಮಾಬಾದ್: ಏಷ್ಯಾಕಪ್‌ನ ಸೂಪರ್-4ರಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ತನ್ನ ಎರಡನೇ ಪಂದ್ಯದಲ್ಲಿ 41 ರನ್‌ಗಳಿಂದ ಗೆದ್ದಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಆದರೆ ಬೌಲರ್‌ಗಳು ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. 

ಇದೀಗ ಈ ಪಂದ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, 'ಭಾರತ ಪಂದ್ಯವನ್ನು ಫಿಕ್ಸ್ ಮಾಡಿದೆ' ಎಂದು ಕೋಪದಿಂದ ಹೇಳುತ್ತಿರುವುದು ಕಂಡುಬಂದಿದೆ.

ವಾಸ್ತವವಾಗಿ, ಶೋಯೆಬ್ ಅಖ್ತರ್ ಅವರ ಈ ವೀಡಿಯೊ ಸೆಪ್ಟೆಂಬರ್ 12 ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ್ದಾಗಿದೆ. ಶ್ರೀಲಂಕಾ ವಿರುದ್ಧದ ಗೆಲುವಿನೊಂದಿಗೆ ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ ಪಾಕಿಸ್ತಾನಕ್ಕೆ ಫೈನಲ್ ಹಾದಿಯನ್ನು ಸುಲಭಗೊಳಿಸಿದೆ. ಶ್ರೀಲಂಕಾ ವಿರುದ್ಧ ಭಾರತದ ಕಳಪೆ ಬ್ಯಾಟಿಂಗ್ ನೋಡಿ, ಏಷ್ಯಾಕಪ್‌ನ ಫೈನಲ್‌ನಿಂದ ಪಾಕಿಸ್ತಾನವನ್ನು ಹೊರಹಾಕಲು ಟೀಂ ಇಂಡಿಯಾ ಕಳಪೆಯಾಗಿ ಆಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳು ಬರುತ್ತಿವೆ. ಆದರೆ, ಇದು ಸಂಪೂರ್ಣ ತಪ್ಪು ಆರೋಪ ಎಂದು ಅಖ್ತರ್ ತಮ್ಮ ವಿಡಿಯೋ ಮೂಲಕ ತಿಳಿಸಿದ್ದಾರೆ.

ವೀಡಿಯೊದಲ್ಲಿ ಅಖ್ತರ್, ನೀವು ಏನು ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ. 'ಭಾರತ ಮ್ಯಾಚ್ ಫಿಕ್ಸ್ ಮಾಡಿದೆ' ಎಂಬ ಮೀಮ್ ಗಳು, ಸಂದೇಶಗಳು ಬರುತ್ತಿವೆ. ಭಾರತ ಮತ್ತು ಇತರ ದೇಶಗಳಿಂದ ನನಗೆ ಫೋನ್ ಕರೆಗಳು ಬರುತ್ತಿವೆ. ಪಾಕಿಸ್ತಾನವನ್ನು ಹೊರಹಾಕಲು ಉದ್ದೇಶಪೂರ್ವಕವಾಗಿ ಸೋಲುತ್ತಿದೆ ಎಂದು ಹೇಳುತ್ತಿದ್ದಾರೆ. ಇದು ಎಷ್ಟು ಸರಿ, ಲಂಕಾದವರು ಚೆನ್ನಾಗಿ ಬೌಲಿಂಗ್ ಮಾಡಿದ್ದರು. ವೆಳ್ಳಾಲಘೆ ಮತ್ತು ಅಸಲಂಕಾ ಉತ್ತಮ ಬೌಲಿಂಗ್ ಮಾಡಿದ್ದರು. ನೀವು ಆ 20 ವರ್ಷದ ಹುಡುಗ ವೆಳ್ಳಾವಘೆಯನ್ನು ನೋಡಿದ್ದೀರಾ? ವಿಕೆಟ್ ಅಲ್ಲದೆ ರನ್ ಸಹ ಗಳಿಸಿದ್ದನು. ಭಾರತ ಉದ್ದೇಶಪೂರ್ವಕವಾಗಿ ಸೋಲಲು ಬಯಸುತ್ತಿದೆ. ಎಂಬ ಮಾತಿನಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಈ ಪಂದ್ಯದಲ್ಲಿ ಭಾರತ ಯಾಕೆ ಸೋಲಲು ಬಯಸುತ್ತೇ ಹೇಳಿ? ಗೆದ್ದರೆ ಅವರು ಫೈನಲ್‌ಗೆ ಹೋಗುತ್ತಾರೆ. ವಿನಾಕಾರಣ ಮೀಮ್ಸ್ ಮಾಡುತ್ತಿದ್ದೀರಿ. ಇದು ಭಾರತದಿಂದ ಉತ್ತಮ ಹೋರಾಟವಾಗಿತ್ತು. ಕುಲದೀಪ್ ಆಡಿದ ರೀತಿ ಅದ್ಭುತವಾಗಿತ್ತು. ಜಸ್ಪ್ರೀತ್ ಬುಮ್ರಾ ಅವರನ್ನು ನೋಡಿ, ಸಣ್ಣ ಮೊತ್ತವನ್ನು ರಕ್ಷಿಸುವಾಗ ಅವರ ಹೋರಾಟವನ್ನು ನೋಡಿ ಎಂದು ಮರುಸವಾಲು ಹಾಕಿದ್ದಾರೆ.

ಅತ್ಯುತ್ತಮ ಬೌಲಿಂಗ್‌ನಿಂದಾಗಿ ಭಾರತ ಪಂದ್ಯವನ್ನು ಗೆದ್ದಿದೆ
ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಅಮೋಘ ಬೌಲಿಂಗ್‌ನಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 49.1 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಯಿತು. ನಾಯಕ ರೋಹಿತ್ ಶರ್ಮಾ 53 ​​ರನ್‌ಗಳ ಮಹತ್ವದ ಇನಿಂಗ್ಸ್‌ ಆಡಿದರು. ರನ್ ಬೆನ್ನತ್ತಿದ್ದ ಶ್ರೀಲಂಕಾ ತಂಡ 41.3 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟಾಯಿತು.

ಭಾರತ-ಪಾಕ್ ತಂಡಕ್ಕೆ ಮೀಸಲು ದಿನ ಕೊಟ್ಟಿದ್ದೇಕೆ: ಲಂಕಾ ಮಾಜಿ ಆಟಗಾರ
ಏಷ್ಯಾಕಪ್ 2023ರ ಸೂಪರ್ ನಾಲ್ಕರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಕ್ಕೆ ಮಾತ್ರ ಮೀಸಲು ದಿನ ಕೊಟ್ಟಿದ್ದೇಕೆ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಚರಿತ್ ಸೇನಾನಾಯಕೆ ಆರೋಪಿಸಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಅವರ ಒತ್ತಾಯದ ಮೇರೆಗೆ ಮೀಸಲು ದಿನಕ್ಕೆ ಕೊಟ್ಟಿತ್ತು. ಈ ನಿರ್ಧಾರಕ್ಕಾಗಿ ಈಗಾಗಲೇ ಸಾಕಷ್ಟು ಟೀಕೆಗಳನ್ನು ಎದುರಾಗಿದೆ. ಪಾಕಿಸ್ತಾನ-ಶ್ರೀಲಂಕಾ ಪಂದ್ಯ ಮಳೆಯಿಂದ ರದ್ದಾದರೆ ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ. ಆಗ ಉತ್ತಮ ರನ್ ರೇಟ್ ಆಧಾರದ ಮೇಲೆ ಶ್ರೀಲಂಕಾ ಫೈನಲ್ ಗೆ ಹೋಗಬಹುದು. ಪಾಕಿಸ್ತಾನವು ಔಟ್ ಆಗುತ್ತದೆ. ಏಕೆಂದರೆ ಈ ಪಂದ್ಯಕ್ಕೆ ಹೆಚ್ಚುವರಿ ದಿನ ಅಥವಾ ಮೀಸಲು ದಿನ ಇಲ್ಲ. ಇದು ತುಂಬಾ ದುರದೃಷ್ಟಕರ. ಆದ್ದರಿಂದ ಪಿಸಿಬಿ ತೆಗೆದುಕೊಂಡ ನಿರ್ಧಾರವು ಅದರ ಮೇಲೆ ಬೂಮರಾಂಗ್ ಆಗಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com