ಏಷ್ಯಾ ಕಪ್ 2023: ಭಾರತದ ವಿರುದ್ಧ ಗೆಲುವಿನ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಅಪರೂಪದ ದಾಖಲೆ!

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಬಾಂಗ್ಲಾದೇಶದ ಪರ ಶಕೀಬ್ ಅಲ್ ಹಸನ್ ಅಲ್ ಹಸನ್ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಬಾಂಗ್ಲಾದೇಶದ ಪರ ಶಕೀಬ್ ಅಲ್ ಹಸನ್ ಅಲ್ ಹಸನ್ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಭಾರತದ ವಿರುದ್ದ 1 ವಿಕೆಟ್ ಪಡೆದು ಅಪರೂಪದ ದಾಖಲೆ ಬರೆದಿದ್ದಾರೆ. ಈ ವಿಕೆಟ್ ನ ಮೂಲಕ ಶಕೀಬ್ ಅಲ್ ಹಸನ್ ಭಾರತದ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ತಮ್ಮ ವಿಕೆಟ್ ಗಳ ಸಂಖ್ಯೆಯನ್ನು 29ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಶಕೀಬ್ ಅಲ್ ಹಸನ್ ನಂತರದ ಸ್ಥಾನದಲ್ಲಿ ಬಾಂಗ್ಲಾದೇಶದ ಮುಸ್ತಫಿಜುರ್ ರೆಹ್ಮಾನ್ ಇದ್ದು ಅವರು 25 ವಿಕೆಟ್ ಗಳಿಸಿದ್ದು, ನಂತರ 23 ವಿಕೆಟ್ ಗಳಿಸಿರುವ ಮುಶ್ರಫೆ ಮೋರ್ತಾಜಾ, 18 ವಿಕೆಟ್ ಗಳಿಸಿರುವ ಮಹಮದ್ ರಫೀಕ್ ಮತ್ತು 16 ವಿಕೆಟ್ ಗಳಿಸಿರುವ ಅಜಿತ್ ಅಗರ್ಕರ್ ಇದ್ದಾರೆ.

Most wickets in India vs Bangladesh ODIs
29 - Shakib Al Hasan
25 - Mustafizur Rahman
23 - Mashrafe Mortaza
18 - Mohammad Rafique
16 - Ajit Agarkar

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com