ಆಸಿಸ್ ವಿರುದ್ಧ ಮೊದಲ ಏಕದಿನ ಪಂದ್ಯ: ಅಗರ್ಕರ್ ದಾಖಲೆ ಮುರಿದ ಮಹಮದ್ ಶಮಿ

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮೂಲಕ 5 ವಿಕೆಟ್ ಗೊಂಚಲು ಪಡೆದ ಭಾರತ ತಂಡದ ಮಹಮದ್ ಶಮಿ ಈ ಮೂಲಕ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮಹಮದ್ ಶಮಿ
ಮಹಮದ್ ಶಮಿ
Updated on

ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮೂಲಕ 5 ವಿಕೆಟ್ ಗೊಂಚಲು ಪಡೆದ ಭಾರತ ತಂಡದ ಮಹಮದ್ ಶಮಿ ಈ ಮೂಲಕ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಹೌದು.. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಶಮಿ ಇದೀಗ 2ನೇ ಸ್ಥಾನಕ್ಕೇರಿದ್ದಾರೆ. ಶಮಿ ಇಂದಿನ ಐದು ವಿಕೆಟ್ ಗಳು ಸೇರಿದಂತೆ ಕಾಂಗರೂಗಳ ವಿರುದ್ಧ ತಮ್ಮ ವಿಕೆಟ್ ಗಳ ಸಂಖ್ಯೆಯನ್ನು 37ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಶಮಿ 2ನೇ ಸ್ಥಾನಕ್ಕೇರಿದ್ದು, ಈ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅಗ್ರಸ್ಥಾನಿಯಾಗಿದ್ದಾರೆ.

ಕಪಿಲ್ ದೇವ್ ಆಸ್ಟ್ರೇಲಿಯಾ ವಿರುದ್ಧ ಒಟ್ಟು 45 ವಿಕೆಟ್ ಕಬಳಿಸಿದ್ದಾರೆ. ಶಮಿಗೆ ಅವರ ಈ ದಾಖಲೆ ಸರಿಗಟ್ಟಲು ಇನ್ನು ಕೇವಲ 8 ವಿಕೆಟ್ ಗಳ ಅಗತ್ಯವಿದೆ. ಆಸ್ಚ್ರೇಲಿಯಾ ವಿರುದ್ಧ ಭಾರತ ತಂಡ ಇನ್ನೂ ಎರಡು ಏಕದಿನ ಪಂದ್ಯಗಳನ್ನಾಡಲಿದ್ದು ಇದೇ ಸರಣಿಯಲ್ಲೇ ಶಮಿ ಈ ಸಾಧನೆ ಮಾಡುವ ನಿರೀಕ್ಷೆ ಇದೆ.

ಉಳಿದಂತೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಅಜಿತ್ ಅಗರ್ಕರ್ 36 ವಿಕೆಟ್ ಪಡೆದಿದ್ದು, 33 ವಿಕೆಟ್ ಗಳೊಂದಿಗೆ ಜಾವಗಲ್ ಶ್ರೀನಾಥ್ 4 ಮತ್ತು 32 ವಿಕೆಟ್ ಗಳೊಂದಿಗೆ ಹರ್ಭಜನ್ ಸಿಂಗ್ 5ನೇ ಸ್ಥಾನದಲ್ಲಿದ್ದಾರೆ.

ಇಂದಿನ ಪಂದ್ಯದಲ್ಲಿ ಒಟ್ಟು 10 ಓವರ್ ಎಸೆದು 1 ಮೇಡಿನ್ ನೊಂದಿಗೆ 5.10 ಸರಾಸರಿಯಲ್ಲಿ 51 ರನ್ ಗಳನ್ನು ನೀಡಿ 5 ವಿಕೆಟ್ ಪಡೆದರು.

Most wickets for India vs Australia in ODIs
45 - Kapil Dev
37 - Mohammed Shami
36 - Ajit Agarkar
33 - Javagal Srinath
32 - Harbhajan Singh

 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com