RCB vs LSG: ಗೆಲುವಿನ ಹಾದಿಗೆ ಮರಳಲು ಆರ್‌ಸಿಬಿ ತವಕ; ಅಭಿಮಾನಿಗಳಲ್ಲಿ ಉತ್ಸಾಹ

ಐಪಿಎಲ್‌ 2024 ಆವೃತ್ತಿಯ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಲಕ್ನೋ ಸೂಪರ್ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡದ ವಿರುದ್ಧ ಸೆಣಸಲಿದೆ.
ಆರ್‌ಸಿಬಿ vs ಎಲ್ಎಸ್‌ಜಿ
ಆರ್‌ಸಿಬಿ vs ಎಲ್ಎಸ್‌ಜಿ
Updated on

ಬೆಂಗಳೂರು: ಐಪಿಎಲ್‌ 2024 ಆವೃತ್ತಿಯ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಲಕ್ನೋ ಸೂಪರ್ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡದ ವಿರುದ್ಧ ಸೆಣಸಲಿದೆ.

ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭಾರಿ ಸೋಲಿನ ನಂತರ ತಂಡದ ನೆಟ್ ರನ್ ರೇಟ್ -0.71 ಕ್ಕೆ ಕುಸಿದಿದೆ.

ಎರಡು ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ಗೆಲುವಿನ ಹಾದಿಗೆ ಮರಳಲು ತವಕಿಸುತ್ತಿದೆ. ಇತ್ತ ಎಲ್ಎಸ್‌ಜಿ ಎರಡು ಪಂದ್ಯಗಳಲ್ಲಿ ಆಡಿದ್ದು, ಒಂದರಲ್ಲಿ ಗೆಲುವು ಕಂಡಿದೆ. ಇದೀಗ ತಮ್ಮ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಕಣ್ಣಿಟ್ಟಿದೆ.

ಆರ್‌ಸಿಬಿ vs ಎಲ್ಎಸ್‌ಜಿ
ಮುಂದಿನ ಪಂದ್ಯ ಗೆಲ್ಬೇಕು ಅಂದ್ರೆ RCB ಪ್ಲೇಯಿಂಗ್ XI ನಿಂದ ಇವರನ್ನು ಕೈಬಿಡಿ; ಮಾಜಿ ಆಟಗಾರನ ಸಲಹೆ

ಐಪಿಎಲ್‌ನಲ್ಲಿ ಬೆಂಗಳೂರು ಮತ್ತು ಲಕ್ನೋ ತಂಡಗಳು ನಾಲ್ಕು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಮೂರು ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಆದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಒಮ್ಮೆ ಮಾತ್ರ ಗೆದ್ದಿದೆ.

ಹೆಚ್ಚಿನ ರನ್‌ಗಳು

RCB ನಾಯಕ ಫಾಫ್ ಡು ಪ್ಲೆಸಿಸ್ ಅವರು ಲಕ್ನೋ ವಿರುದ್ಧ 219 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಆರ್‌ಸಿಬಿ ಮೇಲೆ 127 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ವಿರಾಟ್ ಕೊಹ್ಲಿ 117 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಹೆಚ್ಚಿನ ವಿಕೆಟ್‌ಗಳು

ಜೋಶ್ ಹ್ಯಾಜಲ್‌ವುಡ್ ಒಂಬತ್ತು ವಿಕೆಟ್‌ಗಳೊಂದಿಗೆ ಉಭಯ ತಂಡಗಳ ನಡುವೆ ಅತಿ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಭಾರತದ ವೇಗಿ ಮೊಹಮ್ಮದ್ ಸಿರಾಜ್ ಆರು ವಿಕೆಟ್‌ಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದು, ಹರ್ಷಲ್ ಪಟೇಲ್ ಆರು ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಆರ್‌ಸಿಬಿ vs ಎಲ್ಎಸ್‌ಜಿ
IPL 2024, RCB vs KKR: ವಿರಾಟ್ ಕೊಹ್ಲಿ ಒಬ್ಬರೇ ಆಡಿದ್ರೆ ಸಾಕಾ?; ಸುನೀಲ್ ಗವಾಸ್ಕರ್ ಕಿಡಿ!

ಅತ್ಯಧಿಕ ಸ್ಕೋರ್

2023ನೇ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ 213 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿತು. ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ಅವರು ಅರ್ಧಶತಕ ಸಿಡಿಸುವ ಮೂಲಕ ಅದ್ಭುತ ರನ್ ಚೇಸ್ ಮಾಡಿದರು. ಆ ದಿನವೇ ಆಯುಷ್ ಬದೋನಿ ಹಿಟ್ ವಿಕೆಟ್ ಪಡೆದರು. ಒಟ್ಟಾರೆಯಾಗಿ, ಲಕ್ನೋ ಒಂದು ವಿಕೆಟ್‌ನಿಂದ ಪಂದ್ಯವನ್ನು ಗೆದ್ದು ಗರಿಷ್ಠ ಸ್ಕೋರ್ ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರಣ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.

ಲಕ್ನೋ ಸೂಪರ್ ಜೈಂಟ್ಸ್ ತಂಡ

ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುಧ್ವೀರ್ ಸಿಂಗ್, ಪ್ರೇರಕ್ ಮಂಕದ್ ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್ ಜೋಸೆಫ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ.ಸಿದ್ಧಾರ್ಥ್, ಆಷ್ಟನ್ ಟರ್ನರ್, ಮ್ಯಾಟ್ ಹೆನ್ರಿ, ಮೊಹಮ್ಮದ್ ಅರ್ಷದ್ ಖಾನ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com