ಐಪಿಎಲ್ 2024: ಕೋಲ್ಕತಾ-ಡೆಲ್ಲಿ ಪಂದ್ಯದಲ್ಲಿ ರನ್ ಗಳ ಸುರಿಮಳೆ, ಹಲವು ದಾಖಲೆ ನಿರ್ಮಾಣ

ಐಪಿಎಲ್ 2024 ಕ್ರಿಕೆಟ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದಿದ್ದು, ಹಲವು ದಾಖಲೆಗಳು ನಿರ್ಮಾಣವಾಗಿವೆ.
ಕೋಲ್ಕತಾ-ಡೆಲ್ಲಿ ಪಂದ್ಯದಲ್ಲಿ ರನ್ ಗಳ ಸುರಿಮಳೆ
ಕೋಲ್ಕತಾ-ಡೆಲ್ಲಿ ಪಂದ್ಯದಲ್ಲಿ ರನ್ ಗಳ ಸುರಿಮಳೆ

ವಿಶಾಖಪಟ್ಟಣಂ: ಐಪಿಎಲ್ 2024 ಕ್ರಿಕೆಟ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದಿದ್ದು, ಹಲವು ದಾಖಲೆಗಳು ನಿರ್ಮಾಣವಾಗಿವೆ.

ಅತೀ ಹೆಚ್ಚು ಪಂದ್ಯ ಶ್ರೇಷ್ಟ ಪ್ರಶಸ್ತಿ

ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದ ಸುನೀಲ್ ನರೈನ್ ಕೋಲ್ಕತಾ ಪರ ಅತೀ ಹೆಚ್ಚು ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ತಲಾ 14 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Most PoTM awards for KKR in IPL

  • 14 - Andre Russell

  • 14 - Sunil Narine*

  • 10 - Gautam Gambhir

  • 7 - Yusuf Pathan

ಕೋಲ್ಕತಾ-ಡೆಲ್ಲಿ ಪಂದ್ಯದಲ್ಲಿ ರನ್ ಗಳ ಸುರಿಮಳೆ
ಐಪಿಎಲ್ 2024: ಡೆಲ್ಲಿ ವಿರುದ್ಧ ಕೆಕೆಆರ್ ಗೆ 106 ರನ್ ಗಳ ಭರ್ಜರಿ ಜಯ

ಕೋಲ್ಕತಾ ಪರ ಅತೀ ದೊಡ್ಡ ಅಂತರದ ಗೆಲುವು

ಇನ್ನು ಈ ಪಂದ್ಯದಲ್ಲಿ ದಾಖಲಾದ 106 ರನ್ ಗಳ ಗೆಲುವು ಕೋಲ್ಕತಾಗೆ ಸಿಕ್ಕ 2ನೇ ಅತೀ ದೊಡ್ಡ (ರನ್ ಗಳ ಲೆಕ್ಕಾಚಾರ) ಅಂತರದ ಗೆಲುವಾಗಿದೆ. ಈ ಹಿಂದೆ ಇದೇ ಕೋಲ್ಕತಾ ತಂಡ 2008ರಲ್ಲಿ ಆರ್ ಸಿಬಿ ವಿರುದ್ಧ 140 ರನ್ ಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.

Biggest win margin for KKR in IPL (in runs)

  • 140 vs RCB, Bengaluru, 2008

  • 106 vs DC, Vizag, 2024*

  • 86 vs KKR, Eden Garden, 2017

  • 82 vs RCB, Eden Garden, 2023

ಡೆಲ್ಲಿಗೆ 2ನೇ ಅತೀ ದೊಡ್ಡ ಸೋಲು

ಅಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಇದು 2ನೇ ಅತೀ ದೊಡ್ಡ ಸೋಲಾಗಿದ್ದು, ಈ ಹಿಂದೆ ಡೆಲ್ಲಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 2017ರಲ್ಲಿ 146 ರನ್ ಗಳ ಅಂತರದ ಸೋಲು ಕಂಡಿತ್ತು.

Biggest defeat margin for DC in IPL (in runs)

  • 146 vs MI, Delhi, 2017

  • 106 vs KKR, Vizag, 2024*

  • 105 vs RR, Wankhede, 2008

  • 98 vs MI, Delhi, 2010

ಐಪಿಎಲ್ ಅತೀ ಹೆಚ್ಚು ಬಾರಿ 100ಕ್ಕೂ ಅಧಿಕ ರನ್ ಗಳ ಅಂತರದ ಜಯ

ಇನ್ನು ಇಂದಿನ ಪಂದ್ಯದ ಗೆಲುವೂ ಸೇರಿದಂತೆ ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ 100ಕ್ಕೂ ಅಧಿಕ ರನ್ ಗಳ ಅಂತರದ ಜಯ ಕಂಡ ತಂಡಗಳ ಪಟ್ಟಿಯಲ್ಲಿ ಕೋಲ್ಕತಾ ಜಂಟಿ 2ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಆರ್ ಸಿಬಿ ಅಗ್ರ ಸ್ಥಾನದಲ್ಲಿದ್ದು, 4 ಬಾರಿ 100ಕ್ಕೂ ಅಧಿಕ ರನ್ ಗಳ ಅಂತರದ ಜಯ ಕಂಡಿದೆ.

Most wins by 100+ runs margin in IPL

  • 4 - RCB

  • 2 - KKR*

  • 2 - MI

ಇವಿಷ್ಟು ಮಾತ್ರವಲ್ಲದೇ ಐಪಿಎಲ್ ಇತಿಹಾಸದಲ್ಲಿ ಕೋಲ್ಕತಾ ತಂಡ ಮೊದಲ ಬಾರಿಗೆ ಹ್ಯಾಟ್ರಿಕ್ ಗೆಲುವು ಕಂಡಿದೆ. ಅಂತೆಯೇ ವಿಶಾಖಪಟ್ಟಣದಲ್ಲಿ ಡೆಲ್ಲಿ ತಂಡ ಆಡಿದ 7 ಪಂದ್ಯಗಳ ಪೈಕಿ 4ರಲ್ಲಿ ಸೋಲುಕಂಡಿದ್ದು, 2022ರಿಂದ ಡೆಲ್ಲಿ ವಿರುದ್ಧ ಕೋಲ್ಕತಾಗೆ ಸಿಕ್ಕ ಮೊದಲ ಗೆಲುವು ಇದಾಗಿದೆ.

- First-time KKR has won their first three matches in an IPL season.

- DC have lost four of the seven IPL games they've played at Vizag.

- This is the first win for KKR against DC in four matches since 2022

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com