IPL 2024: ಗುಜರಾತ್ ವಿರುದ್ಧ ಪಂಜಾಬ್ ಗೆ 3 ವಿಕೆಟ್ ರೋಚಕ ಜಯ

ಐಪಿಎಲ್ 2024 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಗುಜರಾತ್ ವಿರುದ್ಧ ಪಂಜಾಬ್ ಗೆ ಜಯ
ಗುಜರಾತ್ ವಿರುದ್ಧ ಪಂಜಾಬ್ ಗೆ ಜಯ

ಅಹ್ಮದಾಬಾದ್: ಐಪಿಎಲ್ 2024 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಗುಜರಾತ್ ಟೈಟನ್ಸ್ ನೀಡಿದ 200 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 19.5 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸುವ ಮೂಲಕ 3 ವಿಕೆಟ್ ಗಳ ಅಂತರದ ರೋಚಕ ಜಯ ದಾಖಲಿಸಿದೆ.

ಗುಜರಾತ್ ವಿರುದ್ಧ ಪಂಜಾಬ್ ಗೆ ಜಯ
TV ವೀಕ್ಷಣೆಯಲ್ಲಿ ದಾಖಲೆ ಬರೆದ IPL 2024: ಮೊದಲ 10 ಪಂದ್ಯಗಳಿಗೆ 35 ಕೋಟಿ ವೀಕ್ಷಣೆ ಪಡೆದ ಸ್ಟಾರ್ ಸ್ಪೋರ್ಟ್ಸ್!

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ (89 ರನ್) ಅಮೋಘ ಅರ್ಧಶತಕ ಮತ್ತು ಸಾಯಿ ಸುದರ್ಶನ್ (33 ರನ್) ಸಮಯೋಚಿತ ಬ್ಯಾಟಿಂಗ್ ನ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 199ರನ್ ಕಲೆಹಾಕಿತು. ಆ ಮೂಲಕ ಪಂಜಾಬ್ ಗೆ ಗೆಲ್ಲಲು 200 ರನ್ ಗಳ ಬೃಹತ್ ಗುರಿ ನೀಡಿತು.

ಈ ಮೊತ್ತವನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ ಆರಂಭಿಕ ಆಘಾತ ಎದುರಿಸಿತು. ನಾಯಕ ಶಿಖರ್ ಧವನ್ ಕೇವಲ 1 ರನ್ ಗಳಿಸಿ ಔಟಾದರೆ, ಮತ್ತೋರ್ವ ಆರಂಭಿಕ ಆಟಗಾರ ಜಾನಿ ಬೇರ್ ಸ್ಟೋ 22 ರನ್ ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕ್ರೀಸ್ ಗಿಳಿದ ಪ್ರಭಾಸಿಮ್ರಾನ್ ಸಿಂಗ್ 35 ರನ್ ಗಳಿಸಿ ಪಂಜಾಬ್ ತಂಡಕ್ಕೆ ಆಸರೆಯಾದರು.

ಆದರೆ ಈ ಹಂತದಲ್ಲಿ ಸ್ಯಾಮ್ ಕರ್ರನ್ 5 ರನ್ ವಿಕೆಟ್ ಕಳೆದುಕೊಂಡರೆ, ಸಿಖಂದರ್ ರಾಜಾ 15 ರನ್ ಗೆ ವಿಕೆಟ್ ಒಪ್ಪಿಸಿದರು. ಜಿತೇಶ್ ಶರ್ಮಾ 16 ರನ್ ಔಟಾಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಗೂಡಿದ ಶಶಾಂಕ್ ಸಿಂಗ್ (61 ರನ್) ಮತ್ತು ಆಷುತೋಶ್ ಶರ್ಮಾ (31 ರನ್) ತಂಡಕ್ಕೆ ಆಸರೆಯಾಗಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು.

ಗುಜರಾತ್ ವಿರುದ್ಧ ಪಂಜಾಬ್ ಗೆ ಜಯ
IPL 2024 ಹೊತ್ತಲ್ಲೇ ಟೀಂ ಇಂಡಿಯಾ ಕ್ರಿಕೆಟಿಗ Prithvi Shawಗೆ ಸಂಕಷ್ಟ: ಲೈಂಗಿಕ ಕಿರುಕುಳ ಪ್ರಕರಣದ ತನಿಖೆಗೆ ಕೋರ್ಟ್ ಆದೇಶ!

ಅಂತಿಮ ಹಂತದಲ್ಲಿ ತಂಡಕ್ಕೆ ಗೆಲ್ಲಲು 7 ರನ್ ಗಳ ಅವಶ್ಯಕತೆ ಇದ್ದಾಗ ಆಷುತೋಶ್ ಶರ್ಮಾ ದರ್ಶನ್ ನಲ್ಕಂಡೆಗೆ ವಿಕೆಟ್ ಒಪ್ಪಿಸಿದರು. ಬಳಿಕ ಹರಪ್ರೀತ್ ಬ್ರಾರ್ ಮತ್ತು ಶಶಾಂಕ್ ಸಿಂಗ್ ಗೆಲುವಿನ ಔಪಚಾರಿಕತೆ ಮುಕ್ತಾಯಗೊಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com