TV ವೀಕ್ಷಣೆಯಲ್ಲಿ IPL 2024 ದಾಖಲೆ: ಮೊದಲ 10 ಪಂದ್ಯಗಳಿಗೆ 35 ಕೋಟಿ ವೀಕ್ಷಣೆ ಪಡೆದ ಸ್ಟಾರ್ ಸ್ಪೋರ್ಟ್ಸ್!

ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ರಿಕೆಟ್ ಟೂರ್ನಿ ಮೊದಲ 10 ಪಂದ್ಯದಲ್ಲೇ ವೀಕ್ಷಣೆಯಲ್ಲಿ ದಾಖಲೆ ನಿರ್ಮಿಸಿದ್ದು, ಬರೊಬ್ಬರಿ 35 ಕೋಟಿ ಟಿವಿ ವೀಕ್ಷಣೆ ಕಂಡಿದೆ.
IPL 2024 smashes viewership record
ಐಪಿಎಲ್ 2024
Updated on

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ರಿಕೆಟ್ ಟೂರ್ನಿ ಮೊದಲ 10 ಪಂದ್ಯದಲ್ಲೇ ವೀಕ್ಷಣೆಯಲ್ಲಿ ದಾಖಲೆ ನಿರ್ಮಿಸಿದ್ದು, ಬರೊಬ್ಬರಿ 35 ಕೋಟಿ ಟಿವಿ ವೀಕ್ಷಣೆ ಕಂಡಿದೆ.

ಹಾಲಿ ನಡೆಯುತ್ತಿರುವ 17ನೇ ಆವೃತ್ತಿಯ ಟೂರ್ನಿಯ ಮೊದಲ ಹತ್ತು ಪಂದ್ಯಗಳ ವೀಕ್ಷಣೆಯ ಅವಧಿಯು ದಾಖಲೆ ಪುಟ ಸೇರಿದ್ದು, ಒಟ್ಟು 8028 ಕೋಟಿ ನಿಮಿಷಗಳ ದಾಖಲೆಯ ವೀಕ್ಷಣೆಯಾಗಿದೆ. ಕಳೆದ ಬಾರಿಯ ಟೂರ್ನಿಗಿಂತಲೂ ಶೇ.20ರಷ್ಟು ಹೆಚ್ಚಳವಾಗಿದೆ ಎಂದು ಟಿ.ವಿ. ನೇರಪ್ರಸಾರದ ಅಧಿಕೃತ ಸಂಸ್ಥೆಯಾದ ಡಿಸ್ನಿ ಸ್ಟಾರ್‌ ಸ್ಪೋರ್ಟ್ಸ್‌ ತಿಳಿಸಿದೆ.

IPL 2024 smashes viewership record
IPL 2024 ಹೊತ್ತಲ್ಲೇ ಟೀಂ ಇಂಡಿಯಾ ಕ್ರಿಕೆಟಿಗ Prithvi Shawಗೆ ಸಂಕಷ್ಟ: ಲೈಂಗಿಕ ಕಿರುಕುಳ ಪ್ರಕರಣದ ತನಿಖೆಗೆ ಕೋರ್ಟ್ ಆದೇಶ!

ಈ ಕುರಿತು ಟ್ವೀಟ್ ಮಾಡಿರುವ ಸಂಸ್ಥೆಯ ಮುಖ್ಯಸ್ಥ ಸಂಜೋಗ್ ಗುಪ್ತಾ, 'ಅಭಿಮಾನಿಗಳ ಅಪಾರ ಆಸಕ್ತಿಯನ್ನು ನೋಡಿ ನಾವು ಮೂಕವಿಸ್ಮಿತರಾಗಿದ್ದೇವೆ. ಹೋದ ಬಾರಿಯ ಆವೃತ್ತಿಗಿಂತಲೂ ಈ ಸಲ ವೀಕ್ಷಣೆಯ ಅವಧಿ ಮತ್ತು ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ’ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com