ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಟೀಕೆಗಳಿಗೆ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು?

ವಿರಾಟ್ ಕೊಹ್ಲಿ ಶತಕ ಗಳಿಸಿದ್ದರೂ ಕೂಡ ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಗಳಿಸಿರುವುದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಕೇಳಿಬರುತ್ತಿದೆ. ಕೊಹ್ಲಿ ಇನ್ನಷ್ಟು ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಆಡಬಹುದಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ.
ವಿರಾಟ್ ಕೊಹ್ಲಿ - ವೀರೇಂದ್ರ ಸೆಹ್ವಾಗ್
ವಿರಾಟ್ ಕೊಹ್ಲಿ - ವೀರೇಂದ್ರ ಸೆಹ್ವಾಗ್

ಜೈಪುರ: ಶನಿವಾರ ಜೈಪುರದ ಸವಾಯ್ ಮಾನ್‌ಸಿಂಗ್ ಕ್ರಿಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ. ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು. ಈ ಮೂಲಕ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು.

ವಿರಾಟ್ ಕೊಹ್ಲಿ ಶತಕ ಗಳಿಸಿದ್ದರೂ ಕೂಡ ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಗಳಿಸಿರುವುದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಕೇಳಿಬರುತ್ತಿದೆ. ಕೊಹ್ಲಿ ಇನ್ನಷ್ಟು ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಆಡಬಹುದಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ.

ವಿರಾಟ್ ಕೊಹ್ಲಿ ಇನಿಂಗ್ಸ್‌ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಬ್ಯಾಟರ್ ವೀರೇಂದ್ರ ಸೆಹ್ವಾಗ್, ನನ್ನ ಪ್ರಕಾರ ಆರ್‌ಸಿಬಿಗೆ 20 ರನ್ ಕಡಿಮೆಯಾಗಿತ್ತು. ವಿರಾಟ್ ಕೊಹ್ಲಿ ಬಗ್ಗೆ ಹೇಳುವುದಾದರೆ, ಅವರ ಇನಿಂಗ್ಸ್ ತುಂಬಾ ಚೆನ್ನಾಗಿತ್ತು. ಆದರೆ, ತಂಡದ ಇತರ ಬ್ಯಾಟರ್‌ಗಳು ಅವರಿಗೆ ಸಾಥ್ ನೀಡಲಿಲ್ಲ ಎಂದಿದ್ದಾರೆ.

ವಿರಾಟ್ ಕೊಹ್ಲಿ - ವೀರೇಂದ್ರ ಸೆಹ್ವಾಗ್
IPL 2024: ಐಪಿಎಲ್ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ!

'ಗ್ಲೆನ್ ಮ್ಯಾಕ್ಸ್‌ವೆಲ್ ಮೂರು ಎಸೆತಗಳಿಗೆ ಔಟ್ ಆದರು. ಕ್ಯಾಮರೂನ್ ಗ್ರೀನ್ 6 ಎಸೆತಗಳಿಗೆ 5 ರನ್ ಗಳಿಸಿ ಅಜೇಯರಾಗಿ ಉಳಿದರು. ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ಗೆ ಬರಲೇ ಇಲ್ಲ. ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಹಿಪಾಲ್ ಲೊಮ್ರೋರ್ ಇರಲಿಲ್ಲ. ಕೊನೆಗೆ ಯಾರೂ ತಂಡಕ್ಕೆ ಆಸರೆಯಾಗಿ ನಿಲ್ಲಲಿಲ್ಲ. ಆದರೆ, ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಹೆಚ್ಚಾಗಬಹುದಿತ್ತು. 39 ಎಸೆತಗಳಲ್ಲಿ 50 ರನ್ ಹೊಡೆದಾಗ, ಅವರ ಸ್ಟ್ರೈಕ್ ರೇಟ್ 200ರ ಆಸುಪಾಸಿತ್ತು. ಆದರೆ, ಇತರ ಬ್ಯಾಟರ್‌ಗಳು ಅವರಿಗೆ ಸಾಥ್ ನೀಡಲಿಲ್ಲ. ಆಗ ಎಲ್ಲಾ ಒತ್ತಡವೂ ಕೊಹ್ಲಿ ಮೇಲೆ ಬಿತ್ತು' ಎಂದು ಸೆಹ್ವಾಗ್ ಕ್ರಿಕ್‌ಬಜ್‌ನಲ್ಲಿ ಹೇಳಿದ್ದಾರೆ.

'ವಿರಾಟ್ ಕೊಹ್ಲಿ ಫಾರ್ಮ್‌ನಲ್ಲಿದ್ದಾರೆ. ವಿಕೆಟ್ ಕೈಚೆಲ್ಲದೆ ಕೊನೆಯವರೆಗೂ ಉಳಿಯುವುದು ಅವರಿಗೆ ಮುಖ್ಯವಾಗಿತ್ತು. ಅಷ್ಟೊಂದು ಹಣ ಕೊಟ್ಟು ಖರೀದಿಸಿದ ಇತರ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಆದರೆ, ತಂಡದಲ್ಲಿ ಬೇರೆ ಯಾವುದೇ ಬ್ಯಾಟರ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ' ಎಂದರು

ವಿರಾಟ್ ಕೊಹ್ಲಿ - ವೀರೇಂದ್ರ ಸೆಹ್ವಾಗ್
IPL 2024: ಕೊಹ್ಲಿ ಶತಕ ವ್ಯರ್ಥ, ರಾಜಸ್ಥಾನ ವಿರುದ್ಧ ಆರ್​ಸಿಬಿಗೆ ಹೀನಾಯ ಸೋಲು

ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, 72 ಎಸೆತಗಳಲ್ಲಿ 113 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ನಾಯಕ ಫಾಫ್ ಡು ಪ್ಲೆಸಿಸ್ (33 ಎಸೆತಗಳಲ್ಲಿ 44 ರನ್) ಹೊರತುಪಡಿಸಿ, ಕೊಹ್ಲಿಗೆ ಇತರ ಯಾವುದೇ ಬ್ಯಾಟರ್‌ಗಳಿಂದ ಬೆಂಬಲ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com