IPL 2024: ಆರು ವಿಕೆಟ್ ಗಳಿಂದ ಲಕ್ನೋ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್!

ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ IPL 2024ರ ಆವೃತ್ತಿಯ 26 ನೇ ಪಂದ್ಯದಲ್ಲಿ ತವರಿನಲ್ಲಿಯೇ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಆರು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದೆ.
ಕುಲದೀಪ್ ಯಾದವ್
ಕುಲದೀಪ್ ಯಾದವ್

ಲಖನೌ: ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ IPL 2024ರ ಆವೃತ್ತಿಯ 26 ನೇ ಪಂದ್ಯದಲ್ಲಿ ತವರಿನಲ್ಲಿಯೇ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಆರು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ನಾಯಕ ಕೆಎಲ್ ರಾಹುಲ್ 39, ಕ್ವಿಂಟಾನ್ ಡಿ ಕಾಕ್ 19, ಅಯುಷ್ ಬಾದೊನಿ ಅಜೇಯ 55 ರನ್ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ 167 ರನ್ ಗಳಿಸಿದ ಲಕ್ನೋ, ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 168 ರನ್ ಗಳ ಗುರಿ ನೀಡಿತು.

ಕುಲದೀಪ್ ಯಾದವ್
IPL 2024: 'Hardik Pandya ಭಾರತ ತಂಡದ ಆಟಗಾರ ನೆನಪಿರಲಿ'; Booing ಮಾಡುತ್ತಿದ್ದ ಅಭಿಮಾನಿಗಳಿಗೆ Virat Kohli ಫುಲ್ ಕ್ಲಾಸ್!

ಈ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ 32, ಡೇವಿಡ್ ವಾರ್ನರ್ 8, ಜೆಕ್ ಫ್ರಾಸರ್ - ಮ್ಯಾಕ್ ಗುರ್ಕ್ 55,ನಾಯಕ ರಿಷಭ್ ಪಂತ್ 4, ತ್ರಿಸ್ತಾನ್ ಸ್ಟಬ್ಸ್ 15 ರನ್ ಗಳಿಸುವುದರೊಂದಿಗೆ ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ 170 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ 3 ವಿಕೆಟ್ ಪಡೆದ ಕುಲದೀಪ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com