IPL 2024: 'Hardik Pandya ಭಾರತ ತಂಡದ ಆಟಗಾರ ನೆನಪಿರಲಿ'; Booing ಮಾಡುತ್ತಿದ್ದ ಅಭಿಮಾನಿಗಳಿಗೆ Virat Kohli ಫುಲ್ ಕ್ಲಾಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಮುಂಬೈ ನಾಯಕ ಪಾಂಡ್ಯಾ ಬೆನ್ನಿಗೆ ನಿಲ್ಲುವ ಮೂಲಕ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ ಅವರಿಂದಲೇ ಪಾಂಡ್ಯಾಗೆ ಚಿಯರ್ ಅಪ್ ಮಾಡಿಸಿದ್ದಾರೆ.
ಅಭಿಮಾನಿಗಳಿಗೆ ಕೊಹ್ಲಿ ಫುಲ್ ಕ್ಲಾಸ್
ಅಭಿಮಾನಿಗಳಿಗೆ ಕೊಹ್ಲಿ ಫುಲ್ ಕ್ಲಾಸ್

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಾಗೆ ಮತ್ತೆ ತವರಿನಲ್ಲೇ ಅಪಮಾನವಾಗಿದ್ದು, ಆದರೆ ಈ ಬಾರಿ ಪಾಂಡ್ಯಾ ಬೆನ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ನಿಲ್ಲುವ ಮೂಲಕ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ ಅವರಿಂದಲೇ ಪಾಂಡ್ಯಾಗೆ ಚಿಯರ್ ಅಪ್ ಮಾಡಿಸಿದ್ದಾರೆ.

ಹೌದು.. ಹಾಲಿ ಐಪಿಎಲ್ ಟೂರ್ನಿಯಲ್ಲಿ ಪದೇ ಪದೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಾಗೆ ಅಪಮಾನವಾಗುವ ರೀತಿಯಲ್ಲಿ ಅಭಿಮಾನಿಗಳು ನಡೆದುಕೊಳ್ಳುತ್ತಿದ್ದು, ಇದೇ ವಿಚಾರವಾಗಿ ಈ ಹಿಂದೆ ರೋಹಿತ್ ಶರ್ಮಾ ಅಭಿಮಾನಿಗಳ ವಿರುದ್ಧ ಅಸಮಾಧಾನಗೊಂಡಿದ್ದರು.

ಅಂತೆಯೇ ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಮತ್ತೆ ಅಭಿಮಾನಿಗು ಹಾರ್ದಿಕ್ ಪಾಂಡ್ಯಾಗೆ ಬೂಯಿಂಗ್ ಮಾಡಿದ್ದು ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಆರ್ ಸಿಬಿ ತಂಡದ ವಿರಾಟ್ ಕೊಹ್ಲಿ ಪಾಂಡ್ಯಾ ನೆರವಿಗೆ ಧಾವಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಹಾರ್ದಿಕ್ ಬ್ಯಾಟಿಂಗ್ ಗಾಗಿ ಕ್ರೀಸ್ ಗೆ ಬರುತ್ತಲೇ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಬೂ.. ಬೂ ಎನ್ನುತ್ತಿದ್ದರು. ಈ ವೇಳೆ ಹಾರ್ದಿಕ್ ಕೊಂಚ ಇರುಸು-ಮುರುಸಿಗೆ ಒಳಗಾದರು. ಇದನ್ನು ಕಂಡ ಕೊಹ್ಲಿ ಪ್ರೇಕ್ಷಕನ್ನು ಉದ್ದೇಶಿಸಿ 'ಭಾರತದ ಆಟಗಾರ ಎಂಬುದು ನೆನಪಿರಲಿ.. ಇಂತಹ ವರ್ತನೆ ತೋರಬೇಡಿ ಎಂದು ಅಭಿಮಾನಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬೂಯಿಂಗ್ ಮಾಡುತ್ತಿದ್ದವರಿಂದಲೇ ಚಿಯರ್ ಅಪ್ ಮಾಡಿಸಿದ ಕಿಂಗ್ ಕೊಹ್ಲಿ

ಇನ್ನು ಕೊಹ್ಲಿ ಅಭಿಮಾನಿಗಳಿಗೆ ಕ್ಲಾಸ್ ತೆಗೆದುಕೊಂಡ ಬೆನ್ನಲ್ಲೇ ಪ್ರೇಕ್ಷಕರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಕೂಡಲೇ ಪಾಂಡ್ಯಾ ಪರ ಚಿಯರ್ ಅಪ್ ಮಾಡಿದ್ದಾರೆ. ಇದಕ್ಕೆ ಕೊಹ್ಲಿ ಬೆಂಬಲ ಸೂಚಿಸಿದ್ದಾರೆ.

ಅಭಿಮಾನಿಗಳಿಗೆ ಕೊಹ್ಲಿ ಫುಲ್ ಕ್ಲಾಸ್
IPL 2024: ಟಾಸ್ ವೇಳೆ ಹಾರ್ದಿಕ್ ಪಾಂಡ್ಯಾ ಗುರಿಯಾಗಿಸಿ ಬೂ.. ಬೂ.. ಎಂದ ಪ್ರೇಕ್ಷಕರು, ಖಡಕ್ ತಿರುಗೇಟು ಕೊಟ್ಟ ಸಂಜಯ್ ಮಂಜ್ರೇಕರ್

ಮೈದಾನದಲ್ಲಿ ಯಾವುದಾದರೂ ಆಟಗಾರರನ್ನು ಪ್ರೇಕ್ಷರು ತೆಗಳಿದರೆ ವಿರಾಟ್ ಕೊಹ್ಲಿಗೆ ಅದು ಇಷ್ಟ ಆಗುವುದಿಲ್ಲ. ನೆರೆದಿರುವವರತ್ತ ತಿರುಗಿ ಅವರು ಚಿಯರ್​ಅಪ್​ ಮಾಡುವಂತೆ ಕೋರುತ್ತಾರೆ. ಈ ಮೊದಲು ಕೊಹ್ಲಿ ಅನೇಕ ಬಾರಿ ಇದನ್ನು ಮಾಡಿದ್ದಾರೆ. ಗುರುವಾರದ (ಏಪ್ರಿಲ್ 11) ಮ್ಯಾಚ್​ನಲ್ಲೂ ಕೊಹ್ಲಿ ಹಿಗೆಯೇ ಮಾಡಿದ್ದಾರೆ. ಇದನ್ನು ನೋಡಿ ಅನೇಕರಿಗೆ ಖುಷಿ ಆಗಿದೆ. ಕೊಹ್ಲಿ ಕ್ರೀಡಾ ಸ್ಫೂರ್ತಿ ನೋಡಿ ಮುಂಬೈ ಮಂದಿಗೂ ಖುಷಿ ಆಗಿದೆ.

ಸ್ಟೀವನ್ ಸ್ಮಿತ್, ನವೀನ್ ಉಲ್ ಹಕ್ ರನ್ನೂ ಬಚಾವ್ ಮಾಡಿದ್ದ ಕೊಹ್ಲಿ

ಈ ಹಿಂದೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಶಿಕ್ಷೆ ಬಳಿಕ ಆಸ್ಟ್ರೇಲಿಯಾದ ಸ್ಟೀವೆನ್ ಸ್ಮಿತ್ ರನ್ನೂ ಅಭಿಮಾನಿಗಳು ಬೂಯಿಂಗ್ ಮಾಡಿದ್ದರು. ಈ ವೇಳೆ ಮೈದಾನದಲ್ಲೇ ಕೊಹ್ಲಿ ಸ್ಮಿತ್ ಬೆನ್ನಿಗೆ ನಿಂತು ಹಾಗೆ ಮಾಡಬೇಡಿ ಎಂದು ಹೇಳಿದ್ದರು. ಕೊಹ್ಲಿ ನಡೆಗೆ ಭಾರತ ಮಾತ್ರವಲ್ಲದೇ ಆಸಿಸ್ ಅಭಿಮಾನಿಗಳು ಕೂಡ ಬೇಷ್ ಎಂದಿದ್ದರು.

ಅಂತೆಯೇ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಜಗಳ ತಾರಕಕ್ಕೇರಿದ್ದ ಸಂದರ್ಭದಲ್ಲಿ ಆರ್ ಸಿಬಿ ಅಭಿಮಾನಿಗಳು ನವೀನ್ ಉಲ್ ಹಕ್ ಗೂ ಇದೇ ರೀತಿಯ ಮುಜುಗರ ತಂದಿತ್ತಿದ್ದರು. ಆಗಲೂ ಕೊಹ್ಲಿ ನವೀನ್ ಬೆನ್ನಿಗೆ ನಿಂತು ಪ್ರೇಕ್ಷಕರನ್ನು ಸಮಾಧಾನಗೊಳಿಸಿದ್ದರು.

ಅಭಿಮಾನಿಗಳಿಗೆ ಕೊಹ್ಲಿ ಫುಲ್ ಕ್ಲಾಸ್
ಕೊಹ್ಲಿ ಹೊರತುಪಡಿಸಿ, ಫಾರ್ಮ್ ಗೆ ಮರಳಲು RCB ಬ್ಯಾಟರ್ ಗಳು ಹೆಣಗಾಟ: ಆಂಡಿ ಫ್ಲವರ್

ಬೂಯಿಂಗ್ ಗೆ ಕಾರಣ ಏನು?

ಇಷ್ಟು ವರ್ಷ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿದ್ದರು. ಆದರೆ, ಈ ಬಾರಿ MI ಫ್ರಾಂಚೈಸಿ ಹಾರ್ದಿಕ್ ಪಾಂಡ್ಯಾಗೆ ನಾಯಕ ಸ್ಥಾನ ನೀಡಿದೆ. ರೋಹಿತ್ ಅವರಿಂದ ನಾಯಕತ್ವವನ್ನು ಹಾರ್ದಿಕ್ ಕಿತ್ತುಕೊಂಡರು ಎಂಬುದು ಅನೇಕರ ಆರೋಪ. ಇದನ್ನು ರೋಹಿತ್ ಅಭಿಮಾನಿಗಳು ಸಹಿಸುತ್ತಿಲ್ಲ. ಹೀಗಾಗಿ, ಹಾರ್ದಿಕ್ ಮೈದಾನಕ್ಕೆ ಇಳಿದ ತಕ್ಷಣ ಅಸಮಾಧಾನ ಹೊರಹಾಕುತ್ತಾರೆ. ಹಾರ್ದಿಕ್ ವಿರುದ್ಧ ಧ್ವನಿ ಎತ್ತುತ್ತಾರೆ. ಗುರುವಾರದ ಪಂದ್ಯದಲ್ಲೂ ಇದೇ ಆಗಿದ್ದು ಆದರೆ ಕೊಹ್ಲಿ ಮಧ್ಯ ಪ್ರವೇಶದಿಂದ ಇದು ತಣ್ಣಗಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com