ಸುರೇಶ್ ರೈನಾ ಮತ್ತು ಕೊಹ್ಲಿ
ಸುರೇಶ್ ರೈನಾ ಮತ್ತು ಕೊಹ್ಲಿ

IPL 2024: ಮಿತಿ ಮೀರಿದ ಪಾರ್ಟಿಗಳೇ ಸೋಲಿಗೆ ಕಾರಣ: RCB ಕುರಿತು ಸುರೇಶ್ ರೈನಾ ಹೇಳಿಕೆ!

ಮಿತಿ ಮೀರಿದ ಪಾರ್ಟಿಗಳೇ ಸೋಲಿಗೆ ಕಾರಣ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಸೇರಿದಂತೆ ಐಪಿಎಲ್ ಟ್ರೋಫಿ ಗೆಲ್ಲದ ತಂಡಗಳು ಕುರಿತು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಹೇಳಿದ್ದಾರೆ.

ಬೆಂಗಳೂರು: ಮಿತಿ ಮೀರಿದ ಪಾರ್ಟಿಗಳೇ ಸೋಲಿಗೆ ಕಾರಣ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಸೇರಿದಂತೆ ಐಪಿಎಲ್ ಟ್ರೋಫಿ ಗೆಲ್ಲದ ತಂಡಗಳು ಕುರಿತು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಸುರೇಶ್ ರೈನಾ, 'ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೂ ಒಂದೇ ಒಂದು ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದು, ಮಾತ್ರವಲ್ಲದೇ ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

ಸುರೇಶ್ ರೈನಾ ಮತ್ತು ಕೊಹ್ಲಿ
IPL 2024: ಆರ್ ಸಿಬಿ ವಿರುದ್ಧದ ಪಂದ್ಯ, ಟಾಸ್ ಗೆದ್ದ ಮುಂಬೈ, ಬೌಲಿಂಗ್ ಆಯ್ಕೆ

ಐಪಿಎಲ್ ಪಂದ್ಯಾವಳಿಯ ಆರಂಭಿಕ ವರ್ಷಗಳಲ್ಲಿ ಕಷ್ಟಪಟ್ಟು ಆಡಿದ ತಂಡಗಳು ಇನ್ನೂ ಟ್ರೋಫಿರಹಿತವಾಗಿವೆ. ಈ ತಂಡಗಳು ಅತಿಯಾದ ಪಾರ್ಟಿಗಳಲ್ಲಿ ತೊಡಗಿದ್ದು, ಮೋಜು, ಮಸ್ತಿಗಳೇ ಅವುಗಳ ಸೋಲಿಗೆ ಕಾರಣ..ಐಪಿಎಲ್ 2024 ರಲ್ಲಿ (IPL 2024) ಈ ಮೂರು ಫ್ರಾಂಚೈಸಿಗಳು ನಿರಾಶಾದಾಯಕವಾಗಿವೆ. ಮೊದಲ ಕೆಲವು ಋತುಗಳಲ್ಲಿ, ಕ್ರಿಕೆಟಿಗರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಪಂದ್ಯಗಳ ನಂತರ ಮೋಜು ಮಾಡಲು ಒಟ್ಟಿಗೆ ಸೇರುತ್ತಿದ್ದರು. ಲೀಗ್ ಕ್ರಿಕೆಟ್ ಆಟಕ್ಕಿಂತ ಹೆಚ್ಚಾಗಿ ಮೋಜು ಮಸ್ತಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿತ್ತು ಎಂದಿದ್ದಾರೆ.

ಪಂದ್ಯದ ನಂತರದ ಈ ಫ್ರಾಂಚೈಸಿಗಳು ಆಯೋಜಿಸುವ ಪಾರ್ಟಿಗಳ ಬಗ್ಗೆ ಮಾತನಾಡಿರುವ ರೈನಾ, 'ಸಿಎಸ್ಕೆ ಎಂದಿಗೂ ಅಂತಹ ಪಾರ್ಟಿಗಳನ್ನು ಆಯೋಜಿಸಿಲ್ಲ ಮತ್ತು ಐದು ಬಾರಿ ಐಪಿಎಲ್ ಪ್ರಶಸ್ತಿ ಮತ್ತು ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ಚೆನ್ನೈ ಎಂದಿಗೂ ಪಾರ್ಟಿ ಮಾಡಲಿಲ್ಲ. ಹೀಗಾಗಿಯೇ ಅವರು ಯಶಸ್ವಿಯಾದರು. ಪಾರ್ಟಿ ಮಾಡಿಕೊಂಡೇ ಕಾಲಹರಣ ಮಾಡಿದ ತಂಡಗಳು ವಿಫಲವಾಗಿವೆ ಎಂದರು.

ಇದೇ ವೇಳ ಆರ್​ಸಿಬಿಯನ್ನು ಮಾತ್ರ ದೂಷಿಸಲು ನಿರಾಕರಿಸಿದ ರೈನಾ, 'ಇನ್ನೂ ಕೆಲವು ಫ್ರಾಂಚೈಸಿಗಳು ಕಷ್ಟಪಟ್ಟು ಪಾರ್ಟಿ ಮಾಡಿವೆ. ಆ ಫ್ರಾಂಚೈಸಿಗಳೂ ಟ್ರೋಫಿ ಗೆದ್ದಿಲ್ಲ. ತಡರಾತ್ರಿಯ ಪಾರ್ಟಿಯ ನಂತರ ಆಡುವುದು ಅಸಾಧ್ಯ. ಮೇ ಮತ್ತು ಜೂನ್ ನ ಸುಡುವ ಬಿಸಿಲಿನಲ್ಲಿ, ನೀವು ಪಾರ್ಟಿಗಳಿಗೆ ಹೋದರೆ ನೀವು ಹಗಲು ಹೇಗೆ ಆಡಬಹುದು.

ಸಿಎಸ್ಕೆ ಆಟಗಾರರು ಕ್ರಿಕೆಟ್ ಮತ್ತು ಪಂದ್ಯಗಳನ್ನು ಗೆಲ್ಲುವ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು ನಮ್ಮಲ್ಲಿ ಅನೇಕರು ಭಾರತಕ್ಕಾಗಿ ಆಡುತ್ತಿದ್ದೆವು. ನಾನು ಪ್ರದರ್ಶನ ನೀಡದಿದ್ದರೆ, ನನ್ನ ನಾಯಕ ನನ್ನನ್ನು ಏಕೆ ಆಯ್ಕೆ ಮಾಡುತ್ತಾರೆ? ನಾನು ಈಗ ನಿವೃತ್ತನಾಗಿದ್ದೇನೆ ಮತ್ತು ಪಾರ್ಟಿಗಳಿಗೆ ಹೋಗಲು ಮುಕ್ತನಾಗಿದ್ದೇನೆ ಎಂದು ನಗುತ್ತಾ ಉತ್ತರಿಸಿದರು.

Related Stories

No stories found.

Advertisement

X
Kannada Prabha
www.kannadaprabha.com