IPL 2024: ಸಂದೀಪ್ 5 ವಿಕೆಟ್, ಜೈಸ್ವಾಲ್ ಬಿರುಸಿನ ಶತಕ, ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ!

IPL 2024ರ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: IPL 2024ರ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 179 ರನ್ ಪೇರಿಸಿತ್ತು. ಮುಂಬೈ ನೀಡಿದ 180 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ ಅಜೇಯ ಶತಕ ಸಿಡಿಸಿದ್ದರು. ಅಲ್ಲದೆ 19ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಮುಂಬೈ ಇಂಡಿಯನ್ಸ್ ಪರ ಓಪನಿಂಗ್ ಮಾಡಲು ಬಂದಿದ್ದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮತ್ತೆ ವಿಫಲರಾದರು. ರೋಹಿತ್ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರೇ ಕಿಶನ್ ಶೂನ್ಯಕ್ಕೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ ಯಾದವ್ 8 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ಇದಾದ ನಂತರ ತಿಲಕ್ ವರ್ಮಾ ಮತ್ತು ನೇಹಾಲ್ ವಧೇರಾ ಅವರ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಮುಂಬೈ ಪರ ತಿಲಕ್ ಅದ್ಭುತ ಬ್ಯಾಟಿಂಗ್ ನಡೆಸಿ 45 ಎಸೆತಗಳಲ್ಲಿ ಒಟ್ಟು 65 ರನ್ ಪೇರಿಸಿದರು.

ಮೊಹಮ್ಮದ್ ನಬಿ 17 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ಐಪಿಎಲ್ 2024ರ ತನ್ನ ಮೊದಲ ಪಂದ್ಯದಲ್ಲಿ ನೇಹಾಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ನೆಹಾಲ್ 24 ಎಸೆತಗಳಲ್ಲಿ 49 ರನ್ ಗಳಿಸಿ ಔಟಾದರು. ನೆಹಾಲ್ 4 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿದರು. ಈ ಮೂಲಕ ಮುಂಬೈ ತಂಡದ ಸ್ಕೋರ್ 20 ಓವರ್ ಗಳಲ್ಲಿ 179 ರನ್ ತಲುಪಿತು.

ಸಂಗ್ರಹ ಚಿತ್ರ
IPL 2024: RCB ಬೌಲಿಂಗ್ ಬಗ್ಗೆ ಗೇಲಿ ಮಾಡಿ ನಕ್ಕ KKR ಬ್ಯಾಟ್ಸಮನ್, ವಿಡಿಯೋ ವೈರಲ್

ರಾಜಸ್ಥಾನ್ ರಾಯಲ್ಸ್ ಪರ ಸಂದೀಪ್ ಶರ್ಮಾ ಅದ್ಭುತ ಬೌಲಿಂಗ್ ಮಾಡಿ ಒಟ್ಟು 5 ವಿಕೆಟ್ ಪಡೆದರು. ಸಂದೀಪ್ ಅವರ ಸ್ಪೆಲ್‌ನಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್ ಮತ್ತು ಜೆರಾಲ್ಡ್ ಕೋಟ್ಜಿ ಅವರ ವಿಕೆಟ್ ಪಡೆದರು. ಸಂದೀಪ್ ತಮ್ಮ 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿದರು ಸಂದೀಪ್ ಶರ್ಮಾ ಹೊರತುಪಡಿಸಿ, ಟ್ರೆಂಟ್ ಬೌಲ್ಟ್ 2 ವಿಕೆಟ್ ಮತ್ತು ಅವೇಶ್ ಖಾನ್ ಮತ್ತು ಯುಜ್ವೇಂದ್ರ ಚಾಹಲ್ ತಲಾ 1 ವಿಕೆಟ್ ಪಡೆದರು.

ರಾಜಸ್ಥಾನ ಪರ ಓಪನಿಂಗ್ ಮಾಡಲು ಬಂದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಬಟ್ಲರ್ 25 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಹಾಗಾಗಿ ಅದೇ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿ 60 ಎಸೆತಗಳಲ್ಲಿ 104 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಸ್ಯಾಮ್ಸನ್ ಜೈಸ್ವಾಲ್ ಗೆ ಬೆಂಬಲ ನೀಡಿ 38 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಪರ ಪಿಯೂಷ್ ಚಾವ್ಲಾ ಏಕೈಕ ವಿಕೆಟ್ ಪಡೆದರು. ಮುಂಬೈ ಈ ಋತುವಿನಲ್ಲಿ 5ನೇ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ 14 ಅಂಕ ಗಳಿಸಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com