IPL 2024: GT ವಿರುದ್ಧ ಭರ್ಜರಿ ಗೆಲುವು; RCB ಪ್ಲೇಆಫ್ ಕನಸು ಇನ್ನೂ ಜೀವಂತ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ 2024ನೇ ಆವೃತ್ತಿಯ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ವಿಲ್ ಜಾಕ್ಸ್ - ವಿರಾಟ್ ಕೊಹ್ಲಿ
ವಿಲ್ ಜಾಕ್ಸ್ - ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ 2024ನೇ ಆವೃತ್ತಿಯ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ವಿರಾಟ್ ಕೊಹ್ಲಿ ಮತ್ತು ವಿಲ್ ಜಾಕ್ಸ್ ಅವರ ಅದ್ಭುತ ನಾಕ್‌ಗಳ ಮೂಲಕ ಆರ್‌ಸಿಬಿ ಈ ಆವೃತ್ತಿಯಲ್ಲಿ ತಮ್ಮ ಮೂರನೇ ಗೆಲುವನ್ನು ದಾಖಲಿಸಿತು. ಈ ಗೆಲುವಿನ ನಂತರವೂ ಐಪಿಎಲ್ 2024ರ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಆರ್‌ಸಿಬಿ ಇದ್ದು, ತಮ್ಮ ಮುಂದಿನ ಉಳಿದ ಎಲ್ಲ ಪಂದ್ಯಗಳನ್ನು ಗೆದ್ದರೆ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿರುವ 9 ಪಂದ್ಯಗಳಿಂದ 5ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮತ್ತು ವೇಗಿಗಳಾದ ತುಷಾರ್ ದೇಶಪಾಂಡೆ ಮತ್ತು ಮಥೀಶ ಪತಿರಾನ ಅವರ ಅತ್ಯುತ್ತಮ ಬೌಲಿಂಗ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸೋಲಿಗೆ ಕಾರಣವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ತಮ್ಮ ತವರಿನಲ್ಲಿ ನಡೆದ ಪಂದ್ಯವನ್ನು 78 ರನ್‌ಗಳಿಂದ ಗೆದ್ದುಕೊಂಡಿತು.

Kunal Patil

ದೇಶಪಾಂಡೆ ತಮ್ಮ ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ (15) ಮತ್ತು ನಾಯಕ ಪ್ಯಾಟ್ ಕಮಿನ್ಸ್ (5) ಅವರ ವಿಕೆಟ್ ಕೀಳುವ ಮುನ್ನ ಆರಂಭಿಕರಾದ ಟ್ರಾವಿಸ್ ಹೆಡ್ (13) ಮತ್ತು ಅನ್ಮೋಲ್‌ ಪ್ರೀತ್ ಸಿಂಗ್ (0) ಅವರ ವಿಕೆಟ್‌ಗಳನ್ನು ಪಡೆದರು. ಪತಿರಾನಾ ಅವರು ಅಪಾಯಕಾರಿ ಏಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ವಿಕೆಟ್ ಕಬಳಿಸಿದರು.

ವಿಲ್ ಜಾಕ್ಸ್ - ವಿರಾಟ್ ಕೊಹ್ಲಿ
IPL 2024: ಗುಜರಾತ್ ವಿರುದ್ಧ RCB ಗೆ 9 ವಿಕೆಟ್ ವೀರೋಚಿತ ಗೆಲುವು!

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು.

ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ 12 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 70 ರನ್ ಗಳಿಸಿದರು. ನಂತರ ಬಂದ ವಿಲ್ ಜಾಕ್ಸ್ ಮೊದಲ 16 ಎಸೆತಗಳಲ್ಲಿ ಕೇವಲ 16 ರನ್ ಮಾತ್ರ ಗಳಿಸಿದ್ದರು. ನಂತರ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ವಿಲ್ ಜಾಕ್ಸ್
ವಿಲ್ ಜಾಕ್ಸ್Kunal Patil

ಮೋಹಿತ್ ಶರ್ಮಾ ಅವರ ಓವರ್‌ನಲ್ಲಿ 29 ರನ್ ಗಳಿಸಿದ ಜಾಕ್ಸ್, ಬಳಿಕ ರಶೀದ್ ಖಾನ್ ಅವರ ಓವರ್‌ನಲ್ಲೂ 29 ರನ್ ಗಳಿಸಿದರು. ಅಂತಿಮವಾಗಿ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 10 ಭರ್ಜರಿ ಸಿಕ್ಸರ್ ಮೂಲಕ ಅಜೇಯ 100 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇನ್ನೂ 24 ಎಸೆತಗಳು ಬಾಕಿ ಇರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಮೋಘ 9 ವಿಕೆಟ್‌ಗಳ ಗೆಲುವು ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com