ನನ್ನಿಂದ ದೊಡ್ಡ ತಪ್ಪಾಗಿದೆ: MS Dhoni ವಿಷಯವಾಗಿ ಸಾರ್ವಜನಿಕವಾಗಿ ದಿನೇಶ್ ಕಾರ್ತಿಕ್ ಕ್ಷಮೆಯಾಚನೆ; ಆಗಿದ್ದೇನು?

ಸಹೋದರರೇ, ನನ್ನಿಂದ ದೊಡ್ಡ ತಪ್ಪಾಗಿದೆ. ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಸಂಬಂಧಿಸಿದ ವಿಚಾರದಲ್ಲಿ ಕಾರ್ತಿಕ್ ಎಲ್ಲರ ಮುಂದೆ ಕ್ಷಮೆ ಕೇಳಬೇಕಾಯಿತು. ಕ್ಷಮೆ ಕೇಳಿದ ಕಾರ್ತಿಕ್, ನಂತರ ನನ್ನ ತಪ್ಪಿನ ಅರಿವಾಯಿತು ಎಂದು ಹೇಳಿದರು. ಹಾಗಾದರೆ ಕಾರ್ತಿಕ್ ಮಾಡಿದ ತಪ್ಪೇನು?
ದಿನೇಶ್ ಕಾರ್ತಿಕ್-ಎಂಎಸ್ ಧೋನಿ
ದಿನೇಶ್ ಕಾರ್ತಿಕ್-ಎಂಎಸ್ ಧೋನಿ
Updated on

ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik) ಇದ್ದಕ್ಕಿದ್ದಂತೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ವಿಚಾರವಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಸಹೋದರರೇ, ದೊಡ್ಡ ತಪ್ಪಾಗಿದೆ. ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಸಂಬಂಧಿಸಿದ ವಿಚಾರದಲ್ಲಿ ಕಾರ್ತಿಕ್ ಎಲ್ಲರ ಮುಂದೆ ಕ್ಷಮೆ ಕೇಳಬೇಕಾಯಿತು. ಕ್ಷಮೆ ಕೇಳಿದ ಕಾರ್ತಿಕ್, ನಂತರ ನನ್ನ ತಪ್ಪಿನ ಅರಿವಾಯಿತು ಎಂದು ಹೇಳಿದರು. ಹಾಗಾದರೆ ಕಾರ್ತಿಕ್ ಮಾಡಿದ ತಪ್ಪೇನು?.

ವಾಸ್ತವವಾಗಿ, ಕಾರ್ತಿಕ್ ಎಲ್ಲಾ ಮೂರು ಸ್ವರೂಪಗಳಿಗೆ ಭಾರತೀಯ ತಂಡದ ಸಾರ್ವಕಾಲಿಕ XI ಅನ್ನು ಆಯ್ಕೆ ಮಾಡಿದ್ದರು. ಕಾರ್ತಿಕ್ 'ಕ್ರಿಕ್‌ಬಜ್' ಕಾರ್ಯಕ್ರಮವೊಂದರಲ್ಲಿ ಈ ತಂಡವನ್ನು ಆಯ್ಕೆ ಮಾಡಿದ್ದರು. ಆದಾಗ್ಯೂ, ಕಾರ್ತಿಕ್ ತನ್ನ XI ನಲ್ಲಿ MS ಧೋನಿಯನ್ನು ಸೇರಿಸಿಕೊಳ್ಳಲಿಲ್ಲ, ನಂತರ ತಮ್ಮಪ್ಪಿನ ಅರಿವಾಗಿದ್ದು ಸಾರ್ವಕಾಲಿಕ ಭಾರತ XI ನಲ್ಲಿ ಧೋನಿಯನ್ನು ಆಯ್ಕೆ ಮಾಡದಿದ್ದಕ್ಕೆ ಎಲ್ಲರಲ್ಲೂ ಕ್ಷಮೆಯಾಚಿಸಿದರು.

ನಾನು ನನ್ನ ಆಡುವ ಹನ್ನೊಂದರಲ್ಲಿ ವಿಕೆಟ್ ಕೀಪರ್ ಅನ್ನು ಆಯ್ಕೆ ಮಾಡಲು ಮರೆತಿದ್ದೇನೆ. ರಾಹುಲ್ ದ್ರಾವಿಡ್ ತಂಡದಲ್ಲಿದ್ದರು. ನಾನು ಅರೆಕಾಲಿಕ ವಿಕೆಟ್ ಕೀಪರ್ ಅನ್ನು ಇಟ್ಟುಕೊಂಡಿದ್ದೇನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಾಸ್ತವದಲ್ಲಿ ನಾನು ರಾಹುಲ್ ದ್ರಾವಿಡ್ (Rahul Dravid) ಅವರನ್ನು ಕೀಪರ್ ಆಗಿ ಇರಿಸಲಿಲ್ಲ. ಸ್ವತಃ ವಿಕೆಟ್ ಕೀಪರ್ ನಾನು ವಿಕೆಟ್ ಕೀಪರ್ ಅನ್ನು ಉಳಿಸಿಕೊಳ್ಳಲು ಮರೆತಿದ್ದೇನೆ. ಇದು ದೊಡ್ಡ ತಪ್ಪು ಎಂದು ಟ್ವೀಟ್ ಮಾಡಿದ್ದಾರೆ.

ಎಂಎಸ್ ಧೋನಿಯನ್ನು ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಕಾರ್ತಿಕ್ ಕರೆದಿದ್ದಾರೆ. ಇದಲ್ಲದೆ, ಧೋನಿ ಎಲ್ಲಾ ಸ್ವರೂಪಗಳಲ್ಲಿ ತಮ್ಮ ತಂಡಕ್ಕಾಗಿ 7ನೇ ಸ್ಥಾನದಲ್ಲಿ ಉಳಿಯುತ್ತಾರೆ ಎಂದು ಕಾರ್ತಿಕ್ ಹೇಳಿದರು.

ದಿನೇಶ್ ಕಾರ್ತಿಕ್-ಎಂಎಸ್ ಧೋನಿ
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕನ್ನಡಿಗ KL Rahul ನಿವೃತ್ತಿ?; ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿಯ ಅಸಲಿಯತ್ತೇನು?

ದಿನೇಶ್ ಕಾರ್ತಿಕ್ ಸಾರ್ವಕಾಲಿಕ XI ತಂಡ

ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ, ಜಸ್ಪ್ರೀತ್ ಬುಮ್ರಾ, ಜಹೀರ್ ಖಾನ್. 12ನೇ ಆಟಗಾರ: ಹರ್ಭಜನ್ ಸಿಂಗ್.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com