Video: ಔಟಾದ ಆಕ್ರೋಶದಲ್ಲಿ ಹೆಲ್ಮೆಟ್ ಅನ್ನೇ ಬೌಂಡರಿಗೆ ಬಾರಿಸಿದ Carlos Brathwaite

ಅಂತಿಮ ಓವರ್​ನಲ್ಲಿ ಸತತ 4 ಸಿಕ್ಸರ್​ ಬಾರಿಸಿ ವೆಸ್ಟ್​ ಇಂಡೀಸ್​ ತಂಡವನ್ನು ಚಾಂಪಿಯನ್​ ಪಟ್ಟಕೇರಿಸಿದ್ದ ಕಾರ್ಲೊಸ್ ಬ್ರಾಥ್ ವೇಟ್(Carlos Brathwaite), ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
Carlos Brathwaite
ಕಾರ್ಲೊಸ್ ಬ್ರಾಥ್ ವೇಟ್
Updated on

ಗಯಾನ: ಕೆರಿಬಿಯನ್​ ಪ್ರೀಮಿಯರ್​ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವಿಂಡೀಸ್ ಸ್ಫೋಟಕ ಬ್ಯಾಟರ್ ಕಾರ್ಲೊಸ್ ಬ್ರಾಥ್ ವೇಟ್ ಔಟಾದ ಆಕ್ರೋಶಕ್ಕೆ ತನ್ನ ಹೆಲ್ಮೆಟ್ ಅನ್ನೇ ಬೌಂಡರಿಗೆ ಬಾರಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಹೌದು.. ಈ ಹಿಂದೆ 2016ರಲ್ಲಿ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಅಂತಿಮ ಓವರ್​ನಲ್ಲಿ ಸತತ 4 ಸಿಕ್ಸರ್​ ಬಾರಿಸಿ ವೆಸ್ಟ್​ ಇಂಡೀಸ್​ ತಂಡವನ್ನು ಚಾಂಪಿಯನ್​ ಪಟ್ಟಕೇರಿಸಿದ್ದ ಕಾರ್ಲೊಸ್ ಬ್ರಾಥ್ ವೇಟ್(Carlos Brathwaite), ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ತಾಳ್ಮೆ ಕಳೆದುಕೊಂಡು ತನ್ನ ಹೆಲ್ಮೆಟ್ ಅನ್ನು ಬ್ಯಾಟ್​ನಿಂದ ಹೊಡೆದು ಸಿಕ್ಸರ್​ಗಟ್ಟಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ. ಗ್ರ್ಯಾಂಡ್ ಕೇಮನ್ ಜಾಗ್ವಾರ್ ತಂಡದ ಜೋಶ್ ಲಿಟಲ್ ಎಸೆತದ ಬ್ರಾಥ್ ವೇಟ್ ಅವರ ಭುಜಕ್ಕೆ ತಾಗಿ ವಿಕೆಟ್​ ಕೀಪರ್​ ಕೈ ಸೇರಿತು. ಚೆಂಡಿಗೆ ಬ್ಯಾಟ್​ ತಾಗಿರಬಹುದು ಎಂದು ಕೀಪರ್​ ಔಟ್​ಗಾಗಿ ಮನವಿ ಮಾಡಿದರು.

Carlos Brathwaite
ಲಾಸ್ಟ್ ಓವರ್ ರಹಸ್ಯ ಬಿಚ್ಚಿಟ್ಟ ಬ್ರಾಥ್ ವೇಟ್..!

ಫೀಲ್ಡ್​ ಅಂಪೈರ್​ ಔಟೆಂದು ತೀರ್ಪು ನೀಡಿದರು. ಅಂಪೈರ್ ಅವರ ತಪ್ಪು ನಿರ್ಣಯದಿಂದ ತಾಳ್ಮೆ ಕಳೆದುಕೊಂಡ ಬ್ರಾಥ್‌ವೈಟ್, ಡಗೌಟ್​ ಕಡೆಗೆ ಹೋಗುವಾಗ ಸಿಟ್ಟಿನಿಂದ ಹೆಲ್ಮೆಟ್‌ ಮೇಲಕ್ಕೆ ಎಸೆದು ಬ್ಯಾಟ್​ನಿಂದ ಜೋರಾಗಿ ಜೋರಾಗಿ ಹೊಡೆದರು. ಹೊಡೆದ ರಭಸಕ್ಕೆ ಹೆಲ್ಮೆಟ್‌ ಪುಡಿ ಪುಡಿಯಾಗಿ ಸಿಕ್ಸರ್ ಲೈನ್​ನಿಂದ ಹೊರಕ್ಕೆ ಸಿಡಿಯಿತು. ಬಳಿಕ ಬ್ಯಾಟ್​ ಕೂಡ ಎಸೆದು ಅಂಪೈರ್​ ವಿರುದ್ಧ ಆಕ್ರೋಶ ಹೊರಹಾಕಿದರು.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾರ್ಲೊಸ್ ಬ್ರಾಥ್ ವೇಟ್ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com