BGT 2025: Virat Kohli ಗೆ ಬೇಕು ಇನ್ನೊಂದೇ ಶತಕ; Don Bradman 76 ವರ್ಷದ ದಾಖಲೆ ಸೇರಿ 9 ಆಟಗಾರರ ರೆಕಾರ್ಡ್ ಬ್ರೇಕ್!

ಅಡಿಲೇಡ್ ಓವಲ್​ ಮೈದಾನದಲ್ಲಿ ಅತೀ ಹೆಚ್ಚು ಟೆಸ್ಟ್​ ಶತಕಗಳನ್ನು ಬಾರಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಇದೀಗ ಕಿಂಗ್ ಕೊಹ್ಲಿ 10ನೇ ಸ್ಥಾನದಲ್ಲಿದ್ದಾರೆ.
Virat Kohli
ವಿರಾಟ್ ಕೊಹ್ಲಿ
Updated on

ಅಡಿಲೇಡ್ ಓವಲ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 2ನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಇನ್ನು ಒಂದೇ ಒಂದು ಶತಕ ಸಿಡಿಸಿದರೂ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಡಾನ್ ಬ್ರಾಡ್ಮನ್ ಮತ್ತು ವಿಂಡೀಸ್ ಬ್ಯಾಟಿಂಗ್ ದೈತ್ಯ ಬ್ರಿಯಾನ್ ಲಾರಾ ಸೇರಿದಂತೆ 9 ಕ್ರಿಕೆಟ್ ದಂತಕಥೆಗಳ ದಾಖಲೆಗಳು ಪತನವಾಗಲಿವೆ.

ಹೌದು.. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರದಿಂದ ಆರಂಭವಾಗಲಿರುವ ಈ ಪಂದ್ಯವು ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿದೆ.

ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಒಂದೇ ಒಂದು ಶತಕ ಸಿಡಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಕೊಹ್ಲಿ ಈ ಒಂದು ಶತಕದ ಮೂಲಕ 9 ಆಟಗಾರರ ದಾಖಲೆಗಳನ್ನು ಮುರಿಯಲಿದ್ದಾರೆ.

ಅಡಿಲೇಡ್ ಓವಲ್​ ಮೈದಾನದಲ್ಲಿ ಅತೀ ಹೆಚ್ಚು ಟೆಸ್ಟ್​ ಶತಕಗಳನ್ನು ಬಾರಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಇದೀಗ ಕಿಂಗ್ ಕೊಹ್ಲಿ 10ನೇ ಸ್ಥಾನದಲ್ಲಿದ್ದು, ಈ ಮೈದಾನದಲ್ಲಿ ಈವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಒಟ್ಟು 3 ಶತಕ ಗಳಿಸಿದ್ದಾರೆ.

ಇದೇ ಮೈದಾನದಲ್ಲಿ ಮಾರ್ನಸ್ ಲಾಬುಶೇನ್, ಜಾಕ್ ಹಾಬ್ಸ್, ಡಾನ್ ಬ್ರಾಡ್ಮನ್, ಡೀನ್ ಜೋನ್ಸ್, ಆರ್ಥರ್ ಮೋರಿಸ್, ಬಾಬ್ ಸಿಂಪ್ಸನ್, ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್ ಮತ್ತು ಸ್ಟೀವ್ ವಾ ಕೂಡ ಅಡಿಲೇಡ್ ಓವಲ್ ಮೈದಾನದಲ್ಲಿ ತಲಾ ಮೂರು ಶತಕಗಳನ್ನು ಬಾರಿಸಿದ್ದಾರೆ.

ಇದೀಗ ಅಡಿಲೇಡ್ ಸೆಂಚುರಿ ಸರದಾರರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಪಿಂಕ್ ಬಾಲ್ ಟೆಸ್ಟ್​​ನಲ್ಲಿ ಶತಕ ಸಿಡಿಸಿದರೆ ಅಗ್ರಸ್ಥಾನಕ್ಕೇರಬಹುದು. ಈ ಮೂಲಕ ಆಸ್ಟ್ರೇಲಿಯಾದ ಓವಲ್ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

Virat Kohli
ಅವ್ಯವಸ್ಥೆಯ ಆಗರವಾದ ಅಡಿಲೇಡ್‌ ನೆಟ್ ಸೆಷನ್: ಭಾರತೀಯ ಆಟಗಾರರ ಮೇಲೆ ಪ್ರೇಕ್ಷಕರ ವೈಯಕ್ತಿಕ ನಿಂದನೆ!

ಲಾರಾ ದಾಖಲೆಗೂ ಕುತ್ತು

ಹಾಗೆಯೇ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 102 ರನ್ ಬಾರಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಸದ್ಯ ಈ ರೆಕಾರ್ಡ್ ವೆಸ್ಟ್ ಇಂಡೀಸ್ ದಾಂಡಿಗ ಬ್ರಿಯಾನ್ ಲಾರಾ (610 ರನ್ಸ್) ಹೆಸರಿನಲ್ಲಿದೆ.

ಇದೀಗ ಬ್ರಿಯಾನ್ ಲಾರಾ ಅವರ ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ 102 ರನ್​​​ಗಳ ಅವಶ್ಯಕತೆಯಿದೆ. 2012-2020 ರ ನಡುವೆ ಅಡಿಲೇಡ್​​ನಲ್ಲಿ 8 ಟೆಸ್ಟ್ ಇನಿಂಗ್ಸ್ ಆಡಿರುವ ಕೊಹ್ಲಿ ಒಟ್ಟು 509 ರನ್ ಕಲೆಹಾಕಿದ್ದಾರೆ. ದ್ವಿತೀಯ ಟೆಸ್ಟ್​​ನಲ್ಲಿ ಕೊಹ್ಲಿ ಬ್ಯಾಟ್​​​ನಿಂದ 102 ರನ್ ಮೂಡಿಬಂದರೆ, ಅಡಿಲೇಡ್ ಮೈದಾನದಲ್ಲಿ ಅತ್ಯಧಿಕ ರನ್ ಗಳಿಸಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

Virat Kohli
10 ವರ್ಷಗಳಿಂದ ನಾನು ಧೋನಿ ಜೊತೆ ಮಾತಾಡಿಲ್ಲ, ಇನ್ನೂ ಮಾತನಾಡಿ ಏನು ಪ್ರಯೋಜನ: ಹರ್ಭಜನ್ ಸಿಂಗ್ ಶಾಕಿಂಗ್ ಹೇಳಿಕೆ!

ಬ್ರಾಡ್ಮನ್ ದಾಖಲೆ ಪತನದತ್ತ ಕೊಹ್ಲಿ

ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ತಮ್ಮ 10ನೇ ಶತಕ ಸಿಡಿಸಿರುವ ಕೊಹ್ಲಿ ಅಡಿಲೇಡ್ ಓವಲ್ ಮೈದಾನದಲ್ಲಿ ಒಂದು ಶತಕ ಸಿಡಿಸಿದರೆ, ಒಂದೇ ತಂಡದ ವಿರುದ್ಧ ಭಾರತದ ಪರ ಅತೀ ಹೆಚ್ಚು ಶತಕ ಸಿಡಿಸಿದ ಕೀರ್ತಿಗೆ ಭಾಜನರಾಗಲಿದ್ದಾರೆ.

ಈ ಕೀರ್ತಿ ಕಳೆದ 76 ವರ್ಷಗಳಿಂದ ಡಾನ್ ಬ್ರಾಡ್ಮನ್ ಹೆಸರಿನಲ್ಲಿದ್ದು, ಕೊಹ್ಲಿ ಈ ಅಪರೂಪದ ದಾಖಲೆ ಮುರಿಯುವ ಸಾಧ್ಯತೆ ಇದೆ. ಬ್ರಾಡ್ಮನ್ ಇಂಗ್ಲೆಂಡ್ ನಲ್ಲಿ ಒಟ್ಟು 11 ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾದಲ್ಲಿ 10 ಶತಕ ಸಿಡಿಸಿದ್ದು, ಜಾಕ್ ಹಾಬ್ಸ್ ಆಸ್ಟ್ರೇಲಿಯಾದಲ್ಲಿ ಮತ್ತು ಭಾರತದ ಸಚಿನ್ ತೆಂಡೂಲ್ಕರ್ ಶ್ರೀಲಂಕಾದಲ್ಲಿ ತಲಾ 9 ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com