ಅಡಿಲೇಡ್: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಭಾವಿ ಬೌಲಿಂಗ್ ಪ್ರದರ್ಶನ ತೋರಿದ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್ ದಾಖಲೆ ನಿರ್ಮಿಸಿದ್ದಾರೆ.
ಹೌದು.. ಇಂದು ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಪ್ರಬಲ ಬೌಲಿಂಗ್ ಪ್ರದರ್ಶನ ನೀಡಿದ ಮಿಚೆಲ್ ಸ್ಟಾರ್ಕ್ ಕೇವಲ 48 ರನ್ ಗಳಿಗೆ 6 ಪ್ರಮುಖ ವಿಕೆಟ್ ಪಡೆದರು. ಅವರ ಈ ಅದ್ಭುತ ಬೌಲಿಂಗ್ ನಲ್ಲಿ 2 ಮೇಡಿನ್ ಕೂಡ ಸೇರಿತ್ತು. ಒಟ್ಟು 14.1 ಓವರ್ ಎಸೆದ ಸ್ಟಾರ್ಕ್ 3.40 ಸರಾಸರಿಯಲ್ಲಿ 48 ರನ್ ನೀಡಿ ಆರು ವಿಕೆಟ್ ಪಡೆದರು.
ಸ್ಟಾರ್ಕ್ ಭಾರತದ ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ನಿತೀಶ್ ರೆಡ್ಡಿ, ಆರ್ ಅಶ್ವಿನ್ ಮತ್ತು ಹರ್ಷಿತ್ ರಾಣಾರನ್ನು ಔಟ್ ಮಾಡಿದರು. ಅಂತೆಯೇ ಸ್ಟಾರ್ಕ್ ರ ಈ ಅದ್ಭುತ ಬೌಲಿಂಗ್ ಪ್ರದರ್ಶನ ಅವರ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎಂಬ ದಾಖಲೆಗೆ ಪಾತ್ರವಾಗಿದೆ.
ಈ ಹಿಂದೆ ಸ್ಟಾರ್ಕ್ 2016ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ 50ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದು ಅವರ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿತ್ತು. ಇಂದಿನ ಪ್ರದರ್ಶನ ಇದೀಗ ಈ ದಾಖಲೆಯನ್ನೂ ಹಿಂದಿಕ್ಕಿದೆ.
Best figures for Mitchell Starc in Tests
6/48 vs Ind Adelaide 2024
6/50 vs SL Galle 2016
6/66 vs Pak Adelaide 2019
6/111 vs Eng Nottingham 2015
6/154 vs SA Perth WACA 2012
Advertisement