Travis Head- Mohammad Siraj ಸಂಘರ್ಷ: ಟ್ರಾವಿಸ್ ಹೆಡ್ ‘ಸುಳ್ಳು ಹೇಳುತ್ತಿದ್ದಾರೆ’.. ಸಿರಾಜ್ ಪ್ರತಿಕ್ರಿಯೆ

ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲು ಕಂಡಿದ್ದು, ಸರಣಿಯಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ.
Mohammed Siraj-Travis Head
ಮಹಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್
Updated on

ಅಡಿಲೇಡ್: ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದ ವೇಳೆ ಆಸಿಸ್ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತು ಭಾರತದ ಮಹಮದ್ ಸಿರಾಜ್ ನಡುವಿನ ಸಂಘರ್ಷ ಅಂತ್ಯಗೊಂಡಿದೆ ಎನ್ನುವಾಗಲೇ ಮೈದಾನದ ಜಗಳದ ಕುರಿತು ಪ್ರತಿಕ್ರಿಯೆ ಸಿರಾಜ್ ಟ್ರಾವಿಸ್ ಹೆಡ್ ಸುಳ್ಳು ಹೇಳುತ್ತಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲು ಕಂಡಿದ್ದು, ಸರಣಿಯಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ. ಆದರೆ ಈ ಸೋಲಿನ ಹೊರತಾಗಿಯೂ ಈ ಟೆಸ್ಟ್ ಪಂದ್ಯದಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ಅದು ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿ.

ವಾಸ್ತವವಾಗಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಹೆಡ್ ರನ್ನು ಔಟ್ ಮಾಡಿದ ನಂತರ, ಸಿರಾಜ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಇದರಿಂದಾಗಿ ಅಸಮಾಧಾನಗೊಂಡಿದ್ದ ಹೆಡ್, ದಿನದಾಟ ಮುಗಿದ ಬಳಿಕ ನಾನು ಸಿರಾಜ್​ಗೆ ಉತ್ತಮವಾಗಿ ಬೌಲ್ ಮಾಡಿದೆ ಎಂದು ಹೇಳಿದೆ. ಆದರೆ, ಸಿರಾಜ್ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಪೆವಿಲಿಯನ್​ಗೆ ಹೋಗುವಂತೆ ಕೈಸನ್ನೆ ಮಾಡಿದರು. ಇದರಿಂದ ನನಗೆ ಬೇಸರವಾಯಿತು ಎಂದಿದ್ದರು.

Mohammed Siraj-Travis Head
ಹೊಗಳಿದ್ರೂ ಮೈಮೇಲೇ ಬೀಳ್ತಾನೆ: 'DSP Siraj' ಜೊತೆಗಿನ ಸಂಘರ್ಷದ ಕುರಿತು ಆಸಿಸ್ ಬ್ಯಾಟರ್ Travis Head ಅಳಲು!

ಇದೀಗ ಹೆಡ್ ಹೇಳಿಕೆಯ ಬಗ್ಗೆ ಸಿರಾಜ್ ಪ್ರತಿಕ್ರಿಯೆ ನೀಡಿದ್ದು, ಟ್ರಾವಿಸ್ ಹೆಡ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಹರ್ಭಜನ್ ಜೊತೆ ಮಾತನಾಡಿದ ಸಿರಾಜ್, 'ಭಾರತ ತಂಡವು ಎದುರಾಳಿ ತಂಡದ ಪ್ರತಿಯೊಬ್ಬ ಆಟಗಾರನನ್ನು ಗೌರವಿಸುತ್ತದೆ. ಆದರೆ ಆ ಸಂದರ್ಭದಲ್ಲಿ ಹೆಡ್ ಅವರೇ ನನ್ನನ್ನು ನಿಂದಿಸಿದ್ದಾರೆ. ಆದ್ದರಿಂದಲೇ ನಾನು ಇಂತಹ ಆಕ್ರಮಣಕಾರಿ ಶೈಲಿಯಲ್ಲಿ ಪ್ರತಿಕ್ರಿಯಿಸಬೇಕಾಯಿತು. ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಹೆಡ್​ರನ್ನು ಔಟ್ ಮಾಡಿದರಿಂದ ನಾನು ಸಾಮಾನ್ಯವಾಗಿಯೇ ಸಂಭ್ರಮಿಸಿದೆ. ಆದರೆ ಹೆಡ್ ಅವರೇ ನನ್ನನ್ನು ಮೊದಲು ನಿಂದಿಸಿದರು. ಇದನ್ನು ನೀವು ಟಿವಿಯಲ್ಲೂ ವೀಕ್ಷಿಸಬಹುದು ಎಂದು ಹೇಳಿದ್ದಾರೆ.

ಅಂತೆಯೇ 'ಆರಂಭದಲ್ಲಿ ನಾನು ಸುಮ್ಮನೆ ಸಂಭ್ರಮಿಸುತ್ತಿದ್ದೆ. ನಾನು ಮೊದಲು ಹೆಡ್​ಗೆ ಏನನ್ನೂ ಹೇಳಲಿಲ್ಲ. ಆದರೆ ಹೆಡ್​ ಅವಾಚ್ಯ ಶಬ್ದವನ್ನು ಬಳಸಿದಕ್ಕಾಗಿಯೇ ನಾನು ಆ ರೀತಿಯಾಗಿ ಸಂಭ್ರಮಿಸಬೇಕಾಯಿತು. ಆದರೆ ಹೆಡ್ ಸುದ್ದಿಗೋಷ್ಠಿಯಲ್ಲಿ ಸುಳ್ಳು ಹೇಳಿದ್ದಾರೆ. ನಾವು ಎಲ್ಲರನ್ನೂ ಗೌರವಿಸುತ್ತೇವೆ. ನಾನು ಯಾವಾಗಲೂ ಎಲ್ಲರನ್ನು ಗೌರವಿಸುತ್ತೇನೆ. ಏಕೆಂದರೆ ಕ್ರಿಕೆಟ್ ಸಜ್ಜನರ ಆಟವಾಗಿದೆ ಎಂದು ಸಿರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com