ಭಾರತದ ಸ್ಟಾರ್ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರು ಭಾರತದ ಪ್ರಮುಖ ವಿಕೆಟ್ ಟೇಕರ್ ಮಾತ್ರವಲ್ಲ, 2024 ರಲ್ಲಿ ಯಾವುದೇ ಇತರ ಆಟಗಾರನಿಗಿಂತಲೂ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು ಎಲ್ಲ ಮಾದರಿಯ 20 ಪಂದ್ಯಗಳಲ್ಲಿ ಒಟ್ಟಾರೆ 77 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
ಇತ್ತೀಚೆಗೆ ನಿವೃತ್ತಿ ಘೋಷಿಸಿರುವ ಆಫ್-ಸ್ಪಿನ್ನರ್ 2024 ರಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ. 11 ಪಂದ್ಯಗಳಲ್ಲಿ, ಅಶ್ವಿನ್ 47 ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದರು.
ಭಾರತದ ಅನುಭವಿ ಆಲ್ ರೌಂಡರ್ ಎಲ್ಲ ಮಾದರಿಯಲ್ಲಿ ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ. ರನ್ ಕಲೆಹಾಕುವ ಜೊತೆಗೆ 19 ಪಂದ್ಯಗಳಲ್ಲಿ ಜಡೇಜಾ 25.80 ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ.
ಜಡೇಜಾ ನಂತರದ ಸ್ಥಾನವನ್ನು ಸ್ಪಿನ್-ಬೌಲಿಂಗ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಪಡೆದಿದ್ದಾರೆ. ಹಲವು ವರ್ಷಗಳ ಬಳಿಕ ಮತ್ತೆ ಟೀಂ ಇಂಡಿಯಾಗೆ ವಾಪಸಾತಿ ಮಾಡಿರುವ ವಾಷಿಂಗ್ಟನ್ ಸುಂದರ್, 18 ಪಂದ್ಯಗಳಲ್ಲಿ 14.97 ಸರಾಸರಿಯಲ್ಲಿ 39 ವಿಕೆಟ್‌ಗಳನ್ನು ಪಡೆದಿದ್ದಾರೆ.
2024 ರಲ್ಲಿ ಭಾರತಕ್ಕೆ T20I ಮಾದರಿಯಲ್ಲಿ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಎಡಗೈ ವೇಗಿ ಅರ್ಷದೀಪ್ ಸಿಂಗ್. ಈ ವರ್ಷ ಆಡಿರುವ 20 ಪಂದ್ಯಗಳಲ್ಲಿ 15.55 ಸರಾಸರಿಯಲ್ಲಿ 38 ವಿಕೆಟ್ ಪಡೆದಿದ್ದಾರೆ.
Advertisement