BGT 2024 ಟೀಂ ಇಂಡಿಯಾ: ರವಿಚಂದ್ರನ್ ಅಶ್ವಿನ್ ಜಾಗಕ್ಕೆ 26ರ ಯುವ ಆಟಗಾರ ಎಂಟ್ರಿ!

ಕೋಟ್ಯಾನ್ ಮಂಗಳವಾರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆಫ್ ಸ್ಪಿನ್ ಬೌಲರ್ ಆಗಿರುವ ಕೋಟ್ಯಾನ್ ಬಲಗೈ ಬ್ಯಾಟರ್. ಅಹಮದಾಬಾದ್‌ನಲ್ಲಿ ಮುಂಬೈ ವಿಜಯ್ ಹಜಾರೆ ಟ್ರೋಫಿ ತಂಡದೊಂದಿಗೆ ಇದ್ದರು.
Tanush Kotian
ತನುಷ್ ಕೋಟ್ಯಾನ್
Updated on

ನವದೆಹಲಿ: ಬಾರ್ಡರ್ ಗವಾಸ್ಕರ್ ಟ್ರೋಫಿ ನಡುವೆ ಟೀಂ ಇಂಡಿಯಾ ಬದಲಾವಣೆಯ ಸುದ್ದಿ ಇದೆ. ಸ್ಪಿನ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಬದಲಿಗೆ ಮುಂಬೈನ ಬಲಿಷ್ಠ ಸ್ಪಿನ್ ಬೌಲಿಂಗ್ ಆಲ್ ರೌಂಡರ್ ತನುಷ್ ಕೋಟ್ಯಾನ್ ಅವರನ್ನು ಮೆಲ್ಬೋರ್ನ್‌ನಲ್ಲಿ ಭಾರತ ತಂಡಕ್ಕೆ ಸೇರಲು ಕರೆ ನೀಡಲಾಗಿದೆ. ಕೋಟ್ಯಾನ್ ಪ್ರಸ್ತುತ ವಿಜಯ್ ಹಜಾರೆ ಟ್ರೋಫಿ ODI ಪಂದ್ಯಾವಳಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮುಂಬೈ ಪರ ಆಡುತ್ತಿದ್ದರು.

ಕೋಟ್ಯಾನ್ ಮಂಗಳವಾರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆಫ್ ಸ್ಪಿನ್ ಬೌಲರ್ ಆಗಿರುವ ಕೋಟ್ಯಾನ್ ಬಲಗೈ ಬ್ಯಾಟರ್. ಅಹಮದಾಬಾದ್‌ನಲ್ಲಿ ಮುಂಬೈ ವಿಜಯ್ ಹಜಾರೆ ಟ್ರೋಫಿ ತಂಡದೊಂದಿಗೆ ಇದ್ದರು. ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಅವರ ಹಠಾತ್ ನಿವೃತ್ತಿಯಿಂದಾಗಿ ಭಾರತೀಯ ಪಾಳಯ ತಂಡದಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಅನಿವಾರ್ಯತೆ ಬಿಸಿಸಿಐ ಸಿಲುಕಿತ್ತು.

ಕಳೆದ ವಾರ ಗಬ್ಬಾ ಟೆಸ್ಟ್ ಡ್ರಾಗೊಂಡ ನಂತರ ನಿವೃತ್ತರಾದ ಆರ್ ಅಶ್ವಿನ್ ಬದಲಿಗೆ 26 ವರ್ಷದ ತನುಷ್ ಕೋಟ್ಯಾನ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕೋಟ್ಯಾನ್ ಭಾರತೀಯ ದೇಶೀಯ ಸರ್ಕ್ಯೂಟ್‌ನಲ್ಲಿ ಅತ್ಯುತ್ತಮ ಆಫ್ ಸ್ಪಿನ್ನಿಂಗ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರು ಈ ಹಿಂದೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಭಾರತ ಎ ತಂಡದ ಭಾಗವಾಗಿದ್ದರು.

ಮುಂಬೈನ ತನುಷ್ ಕೋಟ್ಯಾನ್ ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವು ಇಲ್ಲಿಯವರೆಗೆ ಅದ್ಭುತವಾಗಿದೆ. ಅವರು 33 ಪಂದ್ಯಗಳಲ್ಲಿ 101 ವಿಕೆಟ್ ಪಡೆದಿದ್ದಾರೆ. ಕೋಟ್ಯಾನ್ ಇದುವರೆಗೆ ಬ್ಯಾಟ್ ಮೂಲಕ ಉತ್ತಮ ಪ್ರದರ್ಶನ ತೋರಿದ್ದಾರೆ. 2 ಶತಕ ಮತ್ತು 13 ಅರ್ಧ ಶತಕಗಳೊಂದಿಗೆ 1525 ರನ್ ಗಳಿಸಿದ್ದಾರೆ. ತನುಷ್ ಆಡಿದ 20 ಲಿಸ್ಟ್ ಎ ಪಂದ್ಯಗಳಲ್ಲಿ 20 ವಿಕೆಟ್ ಮತ್ತು 90 ರನ್ ಗಳಿಸಿದ್ದಾರೆ. 33 ಟಿ20ಗಳಲ್ಲಿ 6.39 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು 33 ವಿಕೆಟ್ ಮತ್ತು 87 ರನ್ ಗಳಿಸಿದ್ದಾರೆ.

Tanush Kotian
BGT 2025: ಭಾರತ ತಂಡಕ್ಕೆ ಮತ್ತೊಂದು ಆಘಾತ, KL Rahul ಗೆ ಗಾಯ, Boxing Day Test ಪಂದ್ಯಕ್ಕೆ ಅಲಭ್ಯ? Video

ತನುಷ್ ಕೋಟ್ಯಾನ್ ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಆದಾಗ್ಯೂ, ಅವರು ಕೇವಲ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆದರು. ಅದರಲ್ಲಿ ಅವರು 24 ರನ್ ಗಳಿಸಿದರು. ಕೋಟ್ಯಾನ್ ಗೆ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದಾಗ್ಯೂ, ತನುಷ್ ಕೋಟ್ಯಾನ್ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com