'ಗಲ್ಲಿ ಕ್ರಿಕೆಟ್ ಆಡ್ತಿದೀಯಾ': ರೋಹಿತ್ ಉಗ್ರಾವತಾರ ಕಂಡು ಪೆಚ್ಚಾದ ಜೈಸ್ವಾಲ್; 3 ಸುಲಭದ ಕ್ಯಾಚ್‌ ಬಿಟ್ಟ ಆಟಗಾರ

ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಹಿತ್, ಜೈಸ್ವಾಲ್​ರನ್ನು ಸಿಲ್ಲಿ ಪಾಯಿಂಟ್ ಹಾಗೂ ಸಿಲ್ಲಿ ಮಿಡ್ ಆಫ್ ನಡುವೆ ಫಿಲ್ಡಿಂಗ್​ಗೆ ನಿಯೋಜಿಸಿದ್ದರು.
Rohit Sharma-Yashasvi Jaiswal
ರೋಹಿತ್ ಶರ್ಮಾ-ಯಶಸ್ವಿ ಜೈಸ್ವಾಲ್
Updated on

ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ನಾಯಕ ರೋಹಿತ್ ಶರ್ಮಾ ಅವರ ಕೋಪಕ್ಕೆ ಗುರಿಯಾಗಬೇಕಾಯಿತು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಇದಾದ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೈದಾನದ ಮಧ್ಯದಲ್ಲಿಯೇ ಸಿಟ್ಟಿಗೆದ್ದಿದ್ದು ಕಂಡುಬಂತು. ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನ 40ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಯಶಸ್ವಿ ಜೈಸ್ವಾಲ್ ಅವರು 40ನೇ ಓವರ್‌ನಲ್ಲಿ ಆಕಾಶದೀಪ್ ಅವರ ಎರಡನೇ ಎಸೆತದಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್ ಅನ್ನು ಬಿಟ್ಟಿದ್ದರು.

ಮಾರ್ನಸ್ ಲ್ಯಾಬುಸ್ಚಾಗ್ನೆ ಜೀವದಾನ ಸಿಕ್ಕಾಗ 46 ರನ್‌ಗಳೊಂದಿಗೆ ಬ್ಯಾಟಿಂಗ್‌ ಮಾಡುತ್ತಿದ್ದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಈ ಜೀವದಾನದ ಲಾಭ ಪಡೆದು 70 ರನ್ಗಳ ಇನ್ನಿಂಗ್ಸ್ ಆಡಿದರು. ಭಾರತೀಯ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಸಾಮಾನ್ಯವಾಗಿ ಶಾಂತವಾಗಿ ವರ್ತಿಸುತ್ತಾರೆ. ಆದರೆ ಯಶಸ್ವಿ ಜೈಸ್ವಾಲ್ ಅವರು ಮಾರ್ನಸ್ ಲ್ಯಾಬುಸ್ಚಾಗ್ನೆ ಅವರಂತಹ ಅಪಾಯಕಾರಿ ಬ್ಯಾಟ್ಸ್‌ಮನ್‌ನ ಕ್ಯಾಚ್ ಅನ್ನು ಕೈಬಿಟ್ಟಾಗ, ಅವರು ತಮ್ಮ ಕೋಪವನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.

ಕ್ಯಾಚ್ ಡ್ರಾಪ್ ಆದ ನಂತರ ರೋಹಿತ್ ಶರ್ಮಾ ಕೋಪದಿಂದ ಗಾಳಿಯನ್ನು ಪಂಚ್ ಮಾಡಲು ಪ್ರಾರಂಭಿಸಿದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್ ಕೈಚೆಲ್ಲಿದಾಗ ಆಸ್ಟ್ರೇಲಿಯದ ಸ್ಕೋರ್ 99ಕ್ಕೆ 6 ವಿಕೆಟ್ ಆಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದಲ್ಲದೆ, ಯಶಸ್ವಿ ಜೈಸ್ವಾಲ್ ಅವರು ಉಸ್ಮಾನ್ ಖವಾಜಾ ಮತ್ತು ಪ್ಯಾಟ್ ಕಮಿನ್ಸ್ ಕ್ಯಾಚ್ ಅನ್ನು ಕೈಬಿಟ್ಟಿದ್ದರಿಂದ ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿದೆ.

Rohit Sharma-Yashasvi Jaiswal
Ind vs Aus: ಜಸ್ಪ್ರೀತ್ ಬುಮ್ರಾ ಮತ್ತೊಂದು ದಾಖಲೆ

ಭಾರತದ ಮೊದಲ ಇನ್ನಿಂಗ್ಸ್ ಅನ್ನು 369 ರನ್‌ಗಳಿಗೆ ಕೊನೆಗೊಳಿಸಿತು. ನಿತೀಶ್ ರೆಡ್ಡಿ ಭಾರತದ ಪರ ಗರಿಷ್ಠ 114 ರನ್ ಗಳಿಸಿದರು. ಇದಲ್ಲದೇ ಯಶಸ್ವಿ ಜೈಸ್ವಾಲ್ 82 ರನ್‌ಗಳ ಇನಿಂಗ್ಸ್ ಆಡಿದರು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್, ಸ್ಕಾಟ್ ಬೋಲ್ಯಾಂಡ್ ಮತ್ತು ನಾಥನ್ ಲಿಯಾನ್ ತಲಾ 3 ವಿಕೆಟ್ ಪಡೆದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 474 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 105 ರನ್‌ಗಳ ಮುನ್ನಡೆ ಸಾಧಿಸಿತ್ತು.

ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಹಿತ್, ಜೈಸ್ವಾಲ್​ರನ್ನು ಸಿಲ್ಲಿ ಪಾಯಿಂಟ್ ಹಾಗೂ ಸಿಲ್ಲಿ ಮಿಡ್ ಆಫ್ ನಡುವೆ ಫಿಲ್ಡಿಂಗ್​ಗೆ ನಿಯೋಜಿಸಿದ್ದರು. ಆದರೆ ಈ ವೇಳೆ ಕೊಂಚ ಎಚ್ಚರ ತಪ್ಪಿದ್ದ ಜೈಸ್ವಾಲ್, ಚೆಂಡು ಅವರ ಬಳಿ ಬರುವ ಮೊದಲೇ ಮೇಲಕ್ಕೆ ಜಿಗಿದರು. ಇದನ್ನು ನೋಡಿದ ರೋಹಿತ್ ಶರ್ಮಾ ಜೈಸ್ವಾಲ್‌ಗೆ, ‘ಹೇ ಜಸ್ಸು, ನೀನು ಗಲ್ಲಿ ಕ್ರಿಕೆಟ್ ಆಡುತ್ತಿದ್ದೀಯಾ? ಬ್ಯಾಟ್ಸ್‌ಮನ್ ಆಡುವವರೆಗೆ ಮೇಲೆ ಎದ್ದೇಳಬೇಡ ಎಂದು ಹೇಳಿದ್ದರು. ರೋಹಿತ್ ಈ ರೀತಿಯಾಗಿ ಹೇಳಿರುವುದು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದ್ದು, ಇದೀಗ ಸಾಕಷ್ಟು ವೈರಲ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com