World Test Championship Final: ಭಾರತದ ಫೈನಲ್ ಆಸೆ ಕ್ಷೀಣ; ಪವಾಡವೇ ನಡೆಯಬೇಕು?

ಮೆಲ್ಬೋರ್ನ್‌ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 4ನೇ ಮಹತ್ವದ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ.
Indias World Test Championship Final Hopes
ಭಾರತ ತಂಡ
Updated on

ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲೂ ಭಾರತ ಹೀನಾಯ ಸೋಲು ಕಾಣುವ ಮೂಲಕ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಗೇರುವ ಕನಸು ಬಹುತೇಕ ಕಮರಿ ಹೋಗಿದ್ದು, ಪವಾಡವೇ ನಡೆಯಬೇಕಿದೆ.

ಹೌದು.. ಮೆಲ್ಬೋರ್ನ್‌ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 4ನೇ ಮಹತ್ವದ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ.

ಮೂಲಕ ಆಸೀಸ್ ಪ್ರವಾಸದಲ್ಲಿ 3ನೇ ಬಾರಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಎತ್ತುವ ಟೀಮ್​​ ಇಂಡಿಯಾಗೆ ಭಾರೀ ಹಿನ್ನಡೆ ಆಗಿದೆ. 4ನೇ ಟೆಸ್ಟ್‌ ಪಂದ್ಯ ಗೆದ್ದು ವಿಶ್ವ ಟೆಸ್ಟ್‌ ಚಾಂಪಿಯನ್​​ಶಿಪ್‌ ಫೈನಲ್​​​ ಪ್ರವೇಶ ಮಾಡುವ ಟೀಮ್​ ಇಂಡಿಯಾ ಕನಸಿಗೆ ಆಸ್ಟ್ರೇಲಿಯಾ ತಂಡ ಪೆಟ್ಟು ನೀಡಿದ್ದು, ಮೆಲ್ಬೋರ್ನ್‌ ಟೆಸ್ಟ್​ ಸೋಲುತ್ತಿದ್ದಂತೆ ಟೀಮ್​ ಇಂಡಿಯಾ ಪಾಯಿಂಟ್ಸ್​ ಟೇಬಲ್​​ನಲ್ಲಿ ಕುಸಿತ ಕಂಡಿದೆ.

Indias World Test Championship Final Hopes
'ತುಂಬಾ ಬೇಸರ ಆಗ್ತಿದೆ..': 4ನೇ ಟೆಸ್ಟ್ ಸೋಲಿನ ಬಳಿಕ Rohit Sharma ಮಹತ್ವದ ನಿರ್ಧಾರ?

ಸರಣಿ ಆರಂಭಕ್ಕೂ ಮುನ್ನ ಭಾರತ 2ನೇ ಸ್ಥಾನದಲ್ಲಿತ್ತು. 2ನೇ ಸೋಲು ಕಾಣುತ್ತಿದ್ದಂತೆ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ 16 ಪಂದ್ಯಗಳಲ್ಲಿ 10 ಜಯ ಸಾಧಿಸಿ ಶೇಕಡಾ 61.46ರೊಂದಿಗೆ 2ನೇ ಸ್ಥಾನದಲ್ಲಿದೆ.

ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಸಾಧಿಸಿದ್ದು, ಸಿಡ್ನಿಯಲ್ಲಿ ನಡೆಯಲಿರುವ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಈ ಸೋಲಿನಿಂದ ಭಾರತ 55.89 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 58.89 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ

ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಟೆಸ್ಟ್‌ ಚಾಂಪಿಯನ್​ಶಿಪ್‌ ಫೈನಲ್​​ಗೆ ದಕ್ಷಿಣ​ ಆಫ್ರಿಕಾ ಪ್ರವೇಶ ಪಡೆದಿದೆ. ಪಾಕಿಸ್ತಾನ ವಿರುದ್ಧ ಗೆದ್ದ ಆಫ್ರಿಕಾ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಆ ತಂಡ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ 11 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿ ಶೇಕಡಾ 66.67ರೊಂದಿಗೆ ಮೊದಲ ಸ್ಥಾನದಲ್ಲಿದೆ.

ಪವಾಡವೇ ನಡೆಯಬೇಕು

ಇನ್ನು ಈ ಬಾರಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೇರಲು ಭಾರತ ತಂಡದ ಪರ ಪವಾಡವೇ ನಡೆಯಬೇಕು. ಡಬ್ಲ್ಯೂಟಿಸಿ ಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ, ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯವನ್ನು ಗೆಲ್ಲಬೇಕು ಮತ್ತು ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಒಂದು ಪಂದ್ಯ ಸೋಲಬೇಕು. ಆದರೆ ಇದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.

ಅಂದಹಾಗೆ ಭಾನುವಾರ ಪಾಕಿಸ್ತಾನ ವಿರುದ್ಧದ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಈಗಾಗಲೇ ಡಬ್ಲ್ಯೂಟಿಸಿ ಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com