ಭಾರತ ತಂಡ
ಭಾರತ ತಂಡ

IND Vs ENG 2ನೇ ಟೆಸ್ಟ್: ಶುಭಮನ್ ಗಿಲ್ ಶತಕ, ಭಾರತ ಸುಭದ್ರ; ಇಂಗ್ಲೆಂಡ್‌ಗೆ ಗೆಲ್ಲಲು 332 ರನ್‌ ಅಗತ್ಯ!

ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರ ಶತಕದ ಇನಿಂಗ್ಸ್ ಆಧಾರದ ಮೇಲೆ ಭಾರತ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 399 ರನ್‌ಗಳ ದೊಡ್ಡ ಗುರಿಯನ್ನು ನೀಡಿದೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ಭಾರತ 255 ರನ್‌ಗಳಿಗೆ ಆಲೌಟ್ ಆಗಿತ್ತು. 

ವಿಶಾಖಪಟ್ಟಣಂ: ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರ ಶತಕದ ಇನಿಂಗ್ಸ್ ಆಧಾರದ ಮೇಲೆ ಭಾರತ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 399 ರನ್‌ಗಳ ದೊಡ್ಡ ಗುರಿಯನ್ನು ನೀಡಿದೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ಭಾರತ 255 ರನ್‌ಗಳಿಗೆ ಆಲೌಟ್ ಆಗಿತ್ತು. 

ಇಂಗ್ಲೆಂಡ್ ಪರ ಆರಂಭಿಕರಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅವರ ಅರ್ಧಶತಕದ ಜೊತೆಯಾಟದ ನೆರವಿನಿಂದ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 67/1 ಸ್ಕೋರ್ ಮಾಡಿದೆ. ಇನ್ನು ಪ್ರವಾಸಿ ತಂಡ ಗೆಲುವಿಗಾಗಿ 332 ರನ್‌ ಸೇರಿಸಬೇಕಿದೆ. ಇನ್ನು ಭಾರತ ಗೆಲ್ಲಲು 9 ವಿಕೆಟ್ ಗಳನ್ನು ಪಡೆಯಬೇಕಿದೆ.

27 ಎಸೆತಗಳಲ್ಲಿ ಆರು ಬೌಂಡರಿಗಳ ನೆರವಿನಿಂದ 28 ರನ್ ಗಳಿಸಿದ್ದ ಬೆನ್ ಡಕೆಟ್ ಅಶ್ವಿನ್ ಎಸೆತದಲ್ಲಿ ವಿಕೆಟ್ ಕೀಪರ್ ಶ್ರೀಕರ್ ಭರತ್ ಗೆ ಕ್ಯಾಚಿತ್ತು ಔಟಾದರು. ದಿನದಾಟ ಅಂತ್ಯದ ವೇಳೆಗೆ 50 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 29 ರನ್ ಗಳಿಸಿ ಝಾಕ್ ಕ್ರಾಲಿ ಕ್ರೀಸ್‌ನಲ್ಲಿದ್ದರೆ, ಸ್ಪಿನ್ ಬೌಲರ್ ರೆಹಾನ್ ಅಹ್ಮದ್ ಒಂಬತ್ತು ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ದಿನದ ಕೊನೆಯ ಓವರ್‌ನಲ್ಲಿ ಅಕ್ಷರ್ ಪಟೇಲ್ ಅವರ ಎಸೆತಗಳಲ್ಲಿ ರೆಹಾನ್ ಎರಡು ಬೌಂಡರಿಗಳನ್ನು ಸಿಡಿಸಿದರು.

ಭಾರತದ ಪರ ಶುಭಮನ್ ಗಿಲ್ 147 ಎಸೆತಗಳಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 104 ರನ್ ಗಳಿಸಿದರು. ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದರು. ಶ್ರೇಯಸ್ ಅಯ್ಯರ್ ಜೊತೆಗಿನ 81 ರನ್ ಜೊತೆಯಾಟ ಮತ್ತು ನಂತರ ಪಟೇಲ್ (45) ಜೊತೆ 89 ರನ್ ಜೊತೆಯಾಟ, ನಂತರ ಅಶ್ವಿನ್ ಅವರ 29 ರನ್ ಇನ್ನಿಂಗ್ಸ್ ಭಾರತವನ್ನು ಸ್ಪರ್ಧಾತ್ಮಕ ಸ್ಕೋರ್ ತಲುಪಲು ಸಹಾಯ ಮಾಡಿತು.

ಇಂಗ್ಲೆಂಡ್ ಪರ, ಸ್ಪಿನ್ನರ್‌ಗಳಾದ ಟಾಮ್ ಹಾರ್ಟ್ಲಿ ಮತ್ತು ರೆಹಾನ್ ಅಹ್ಮದ್ ಏಳು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಕೆಳ ಕ್ರಮಾಂಕ ಕುಸಿಯುವಂತೆ ಮಾಡಿದರು. ಭಾರತ 44 ರನ್ ಸೇರಿಸುವಷ್ಟರಲ್ಲಿ ಕೊನೆಯ ಆರು ವಿಕೆಟ್ ಕಳೆದುಕೊಂಡಿತು.

Related Stories

No stories found.

Advertisement

X
Kannada Prabha
www.kannadaprabha.com