ಬೆನೋನಿ: ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 2 ವಿಕೆಟ್ ಗಳಿಂದ ಅದ್ಭುತ ಗೆಲುವು ಸಾಧಿಸಿದ್ದು ಫೈನಲ್ ಪ್ರವೇಶಿಸಿದೆ.
ಐಸಿಸಿ ಅಂಡರ್-19 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಪೇರಿಸಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ಟೀಂ ಇಂಡಿಯಾ ಇನ್ನು 7 ಎಸೆತಗಳು ಇರುವಂತೆ ಭಾರತ 248 ರನ್ ಬಾರಿಸುವ ಮೂಲಕ ಗೆಲುವಿನ ದಡ ಸೇರಿತು.
ಭಾರತ ಪರ ಸಚಿನ್ ದಾಸ್ 96 ಮತ್ತು ಉದಯ್ ಸಹರನ್ 81 ರನ್ ಗಳ ನೆರವಿನೊಂದಿಗೆ ಭಾರತ ಗೆಲುವಿನ ದಡ ಸೇರಿತು. ಇನ್ನುಳಿದಂತೆ ಅರ್ಶಿನ್ ಕುಲಕರ್ಣಿ 12, ಮುಶೀರ್ ಖಾನ್ 4, ಮೊಲಿಯಾ 5, ಮತ್ತು ಅವನಿಶ್ 10 ರನ್ ಬಾರಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಲುವಾನ್-ಡ್ರೆ ಪ್ರಿಟೋರಿಯಸ್ ಅತ್ಯಧಿಕ ಸ್ಕೋರ್ 76 ರನ್ ಗಳಿಸಿದರೆ, ರಿಚರ್ಡ್ ಸೆಲೆಟ್ಸ್ವಾನೆ 64 ರನ್ ಗಳಿಸಿದರು. ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್ ಪಡೆದರು. ಇದಲ್ಲದೇ ಮುಶೀರ್ ಖಾನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಐದು ಬಾರಿ ಅಂಡರ್-19 ಪ್ರಶಸ್ತಿ ಗೆದ್ದಿರುವ ಭಾರತ ತಂಡ ಇಂದಿನ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಇಡುವ ಆಸೆಯಲ್ಲಿದೆ.
Advertisement