3ನೇ ಟೆಸ್ಟ್: ರೋಹಿತ್, ಜಡೇಜಾ ಶತಕ; ಮೊದಲ ದಿನದಾಟಕ್ಕೆ ಭಾರತ 5 ವಿಕೆಟ್ ಗೆ 326 ರನ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದ್ದು ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಭರ್ಜರಿ ಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಪೇರಿಸಿದೆ.
3ನೇ ಟೆಸ್ಟ್: ರೋಹಿತ್, ಜಡೇಜಾ ಶತಕ; ಮೊದಲ ದಿನದಾಟಕ್ಕೆ ಭಾರತ 5 ವಿಕೆಟ್ ಗೆ 326 ರನ್!

ರಾಜ್‌ಕೋಟ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದ್ದು ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಭರ್ಜರಿ ಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಪೇರಿಸಿದೆ.

ಭಾರತವು ಐದು ಪಂದ್ಯಗಳ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ. IND vs ENG ಮೂರನೇ ಟೆಸ್ಟ್ ಪಂದ್ಯವು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಿದ್ದರು. ನಾಲ್ಕು ಬದಲಾವಣೆಗಳೊಂದಿಗೆ ಟೀಂ ಇಂಡಿಯಾ ಅಖಾಡಕ್ಕೆ ಇಳಿದಿದ್ದು ಇಂದು ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಪದಾರ್ಪಣೆ ಮಾಡಿದ್ದಾರೆ.

3ನೇ ಟೆಸ್ಟ್: ರೋಹಿತ್, ಜಡೇಜಾ ಶತಕ; ಮೊದಲ ದಿನದಾಟಕ್ಕೆ ಭಾರತ 5 ವಿಕೆಟ್ ಗೆ 326 ರನ್!
3ನೇ ಟೆಸ್ಟ್: ಟೆಸ್ಟ್ ಕ್ರಿಕೆಟ್ ನಲ್ಲಿ 79ನೇ ಸಿಕ್ಸರ್ ಸಿಡಿಸಿದ ರೋ'ಹಿಟ್' ಶರ್ಮಾ; ಧೋನಿ ದಾಖಲೆ ಪತನ

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. ಭಾರತ ಯಶಸ್ವಿ ಜೈಸ್ವಾಲ್ (10), ರಜತ್ ಪಾಟಿದಾರ್ (05), ಶುಭಮನ್ ಗಿಲ್ (0) ಅವರ ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಮೂರು ಹಿನ್ನಡೆ ಅನುಭವಿಸಿದರೂ ರೋಹಿತ್ ಶರ್ಮಾ (131) ಹಾಗೂ ಜಡೇಜಾ ದ್ವಿಶತಕದ ಜೊತೆಯಾಟ ನಡೆಸಿ ಇನ್ನಿಂಗ್ಸ್ ನಿಭಾಯಿಸಿದರು. ಇದರಲ್ಲಿ ಇಬ್ಬರೂ ಶತಕಗಳನ್ನು ಬಾರಿಸಿದರು. ನಂತರ ಚೊಚ್ಚಲ ಆಟಗಾರ ಸರ್ಫರಾಜ್ ಖಾನ್ ಅರ್ಧಶತಕವನ್ನು ಗಳಿಸಿ ಔಟಾದರು.

ಇಂಗ್ಲೆಂಡ್ ಪರ ಮಾರ್ಕ್ ವುಡ್ 3 ಮತ್ತು ಟಾಮ್ ಹಾರ್ಟ್ಲಿ 1 ವಿಕೆಟ್ ಪಡೆದರು. ಎರಡನೇ ದಿನದಾಟವನ್ನು ನಾಳೆ ಜಡೇಜಾ (110) ಮತ್ತು ಕುಲದೀಪ್ (0) ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com