3ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 445 ರನ್ ಗೆ ಆಲೌಟ್, ದಾಖಲೆ ಬರೆದ ಧ್ರುವ್ ಜುರೆಲ್!

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 445 ರನ್ ಗಳಿಗೆ ಆಲೌಟ್ ಆಗಿದ್ದು, ಚೊಚ್ಚಲ ಪಂದ್ಯದಲ್ಲೇ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ದಾಖಲೆ ನಿರ್ಮಿಸಿದ್ದಾರೆ.
ಭಾರತ ತಂಡದ ಬ್ಯಾಟಿಂಗ್
ಭಾರತ ತಂಡದ ಬ್ಯಾಟಿಂಗ್BCCI

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 445 ರನ್ ಗಳಿಗೆ ಆಲೌಟ್ ಆಗಿದ್ದು, ಚೊಚ್ಚಲ ಪಂದ್ಯದಲ್ಲೇ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ದಾಖಲೆ ನಿರ್ಮಿಸಿದ್ದಾರೆ.

ರಾಜ್ ಕೋಟ್ ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ಭಾರತ ತಂಡ ಉತ್ತಮ ಬ್ಯಾಟಿಂಗ್ ನಡೆಸಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಗೆ ಆಲೌಟ್ ಆಗಿದೆ. ಭಾರತದ ಪರ ನಾಯಕ ರೋಹಿತ್ ಶರ್ಮಾ (131 ರನ್) ಮತ್ತು ರವೀಂದ್ರ ಜಡೇಜಾ (112 ರನ್) ಶತಕ ಸಿಡಿಸಿದರೆ, ಪದಾರ್ಪಣೆ ಪಂದ್ಯದಲ್ಲಿ ಸರ್ಫರಾಜ್ ಖಾನ್ (62 ರನ್)ಅರ್ಧಶತಕ ಸಿಡಿಸಿದರು. ಅಂತೆಯೇ ಚೊಚ್ಚಲ ಪಂದ್ಯದಲ್ಲೇ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ 46 ರನ್ ಗಳಿಸಿ ಗಮನ ಸೆಳೆದಿದ್ದು ಮಾತ್ರವಲ್ಲದೇ ಅಪರೂಪದ ದಾಖಲೆ ಬರೆದರು.

ಭಾರತ ತಂಡದ ಬ್ಯಾಟಿಂಗ್
3ನೇ ಟೆಸ್ಟ್: ಟೆಸ್ಟ್ ಕ್ರಿಕೆಟ್ ನಲ್ಲಿ 79ನೇ ಸಿಕ್ಸರ್ ಸಿಡಿಸಿದ ರೋ'ಹಿಟ್' ಶರ್ಮಾ; ಧೋನಿ ದಾಖಲೆ ಪತನ

ಉಳಿದಂತೆ ಅಶ್ವಿನ್ (37ರನ್) ಮತ್ತು ಬುಮ್ರಾ 26 ರನ್ ಗಳಿಸಿ ಭಾರತದ ಮೊತ್ತವನ್ನು ಅಂತಿಮ ಹಂತದಲ್ಲಿ ಹಿಗ್ಗಿಸಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ 4 ವಿಕೆಟ್ ಪಡೆದರೆ, ರೆಹಾನ್ ಅಹ್ಮದ್ 2 ಮತ್ತು ಜೋರೂಟ್, ಟಾಮ್ ಹಾರ್ಟ್ಲಿ, ಜೇಮ್ಸ್ ಆ್ಯಂಡರ್ಸನ್ ತಲಾ 1 ವಿಕೆಟ್ ಪಡೆದರು.

ಧ್ರುವ್ ಜುರೆಲ್ ದಾಖಲೆ

ಪದಾರ್ಪಣೆ ಪಂದ್ಯದಲ್ಲೇ ಗರಿಷ್ಠ ಸ್ಕೋರ್ ಮಾಡಿದ ಭಾರತದ 3ನೇ ಆಟಗಾರ ಎಂಬ ಕೀರ್ತಿಗೆ ಧ್ರುವ್ ಪಾತ್ರರಾದರು. ಈ ಹಿಂದೆ 2023ರಲ್ಲಿ ಭಾರತದ ಕೆಎಲ್ ರಾಹುಲ್ ಪದಾರ್ಪಣೆ ಪಂದ್ಯದಲ್ಲೇ 101 ರನ್ ಗಳಿಸಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನಿ ಆಟಗಾರ ದಿಲಾವರ್ ಹುಸ್ಸೇನ್ ಇಂಗ್ಲೆಂಡ್ ವಿರುದ್ಧ 1934ರಲ್ಲಿ 59 ರನ್ ಗಳಿಸಿದ್ದರು. ಅವರು 2ನೇ ಸ್ಥಾನದಲ್ಲಿದ್ದು, 1994ರಲ್ಲಿ ಭಾರತದ ನಯನ್ ಮೋಂಗಿಯಾ 44 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಇಂದು ಧ್ರುವ್ ಜುರೆಲ್ 46ರನ್ ಗಳಿಸಿ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Highest score in maiden Test innings as wicketkeeper (India)

  • 101 KL Rahul vs SA Centurion 2023

  • 59 Dilawar Hussain vs Eng Kolkata 1934

  • 46 Dhruv Jurel vs Eng Rajkot 2024

  • 44 Nayan Mongia vs SL Lucknow 1994

ಬ್ಯಾಟಿಂಗ್ ನಲ್ಲೂ ಬುಮ್ರಾ ದಾಖಲೆ

ಇದೇ ಪಂದ್ಯದಲ್ಲಿ 26 ರನ್ ಗಳಿಸಿದ ಬುಮ್ರಾ ಇಂಗ್ಲೆಂಡ್ ವಿರುದ್ಧ ತಮ್ಮ 4ನೇ ಗರಿಷ್ಠ ಸ್ಕೋರ್ ಕಲೆಹಾಕಿದರು. ಇದಕ್ಕೂ ಮೊದಲು ಬುಮ್ರಾ 2021ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇದೇ ಇಂಗ್ಲೆಂಡ್ ತಂಡದ ವಿರುದ್ಧ ಅಜೇಯ 34 ರನ್ ಗಳಿಸಿದ್ದರು.

Highest Test scores for Bumrah

  • 34*vs Eng Lord's 2021

  • 31*vs Eng Edgbaston 2022

  • 28 vs Eng Trent Bridge 2021

  • 26 vs Eng Rajkot 2024

  • 24 vs Eng The Oval 2021

  • - All five scores coming against England.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com