ಅಭ್ಯಾಸದ ವೇಳೆ ತಲೆಗೆ ಗಂಭೀರ ಪೆಟ್ಟು: ಬಾಂಗ್ಲಾದೇಶ ವೇಗಿ ಮುಸ್ತಫಿಜುರ್ ಆಸ್ಪತ್ರೆಗೆ ದಾಖಲು

ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮುಸ್ತಾಫಿಜುರ್ ರೆಹಮಾನ್ ಅಭ್ಯಾಸದ ವೇಳೆ ಚೆಂಡು ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಂಗ್ಲಾದೇಶ ವೇಗಿ ಮುಸ್ತಫಿಜುರ್
ಬಾಂಗ್ಲಾದೇಶ ವೇಗಿ ಮುಸ್ತಫಿಜುರ್ PTI

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮುಸ್ತಾಫಿಜುರ್ ರೆಹಮಾನ್ ಅಭ್ಯಾಸದ ವೇಳೆ ಚೆಂಡು ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನುಭವಿ ಎಡಗೈ ವೇಗಿ ಮುಸ್ತಫಿಜುರ್ ರೆಹಮಾನ್ ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದ ಮೊದಲು ತರಬೇತಿ ಅವಧಿಯಲ್ಲಿ ಲಿಟ್ಟನ್ ದಾಸ್ ಅವರ ಬ್ಯಾಟ್ ನಿಂದ ಸಿಡಿದ ಚೆಂಡು ಮುಸ್ತಫಿಜುರ್ ತಲೆಗೆ ಬಿದ್ದು ಅವರಿಗೆ ಪೆಟ್ಟಾಗಿದೆ. ಕೂಡಲೇ ನೆಲಕ್ಕೆ ಬಿದ್ದ ಅವರನ್ನು ಭಾನುವಾರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಂಗ್ಲಾದೇಶ ವೇಗಿ ಮುಸ್ತಫಿಜುರ್
3ನೇ ಟೆಸ್ಟ್: ಜೈಸ್ವಾಲ್ ದಾಖಲೆಯ ದ್ವಿಶತಕ, ಹಲವು ದಾಖಲೆಗಳು ಧೂಳಿಪಟ

ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ನೆಟ್ಸ್‌ನಲ್ಲಿ ಭಾಗವಹಿಸುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಇಂಪೀರಿಯಲ್ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ರಕ್ತಸ್ರಾವದ ಸ್ಥಳದಲ್ಲಿ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ಆದಾಗ್ಯೂ, ನಂತರದ CT ಸ್ಕ್ಯಾನ್‌ ನಿಂದ 28 ವರ್ಷದ ರೆಹಮಾನ್‌ಗೆ ಯಾವುದೇ ಆಂತರಿಕ ಗಾಯಗಳಾಗಿಲ್ಲ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com