3ನೇ ಟೆಸ್ಟ್: ಜೈಸ್ವಾಲ್ ದಾಖಲೆಯ ದ್ವಿಶತಕ, ಹಲವು ದಾಖಲೆಗಳು ಧೂಳಿಪಟ

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಹಲವು ದಾಖಲೆಗಳು ಪತನವಾಗಿದೆ.
ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್BCCI
ಯಶಸ್ವಿ ಜೈಸ್ವಾಲ್
3ನೇ ಟೆಸ್ಟ್: 430 ರನ್ ಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್, ಇಂಗ್ಲೆಂಡ್ ಗೆ 557 ರನ್ ಬೃಹತ್ ಗುರಿ

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಹಲವು ದಾಖಲೆಗಳು ಪತನವಾಗಿದೆ.

3ನೇ ದಿನದಾಟದ ಅಂತ್ಯಕ್ಕೆ 322 ರನ್‌ ಮುನ್ನಡೆಯೊಂದಿಗೆ ನಾಲ್ಕನೇ ದಿನದ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಇಂಗ್ಲೆಂಡ್ ಆರಂಭಿಕ ಆಘಾತ ನೀಡಿತು. ನಿನ್ನೆ ನೈಟ್ ವಾಚ್ ಮನ್ ಆಗಿ ಬ್ಯಾಟಿಂಗ್ ಗೆ ಇಳಿದಿದ್ದ ಕುಲದೀಪ್ ಯಾದವ್ 27 ರನ್ ಗಳಿಸಿ ಇಂದು ರೆಹಾನ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೈಸ್ವಾಲ್ ಜೊತೆಗೂಡಿದ ಸರ್ಫರಾಜ್ ಖಾನ್ ಎರಡನೇ ಇನ್ನಿಂಗ್ಸ್ ನಲ್ಲೂ ಅರ್ಧಶತಕ ಸಿಡಿಸಿ ಗಮನ ಸೆಳೆದರು. 72 ಎಸೆತಗಳನ್ನು ಎದುರಿಸಿದ ಸರ್ಫರಾಜ್ 3 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 68 ರನ್ ಗಳಿಸಿದ್ದರು.

ಯಶಸ್ವಿ ಜೈಸ್ವಾಲ್
3ನೇ ಟೆಸ್ಟ್: 430 ರನ್ ಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್, ಇಂಗ್ಲೆಂಡ್ ಗೆ 557 ರನ್ ಬೃಹತ್ ಗುರಿ

ಜೈಸ್ವಾಲ್ ದಾಖಲೆಯ ದ್ವಿಶತಕ

ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 236 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ 214 ರನ್ ಗಳಿಸಿ ಬ್ಯಾಟಿಂಗ್ ನಡೆಸಿದ್ದರು.

ಅತಿ ಹೆಚ್ಚು ಸಿಕ್ಸರ್‌; ಭಾರತ ದಾಖಲೆ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈ ವರೆಗೂ ಭಾರತ ತಂಡ 48 ಸಿಕ್ಸರ್ ಸಿಡಿಸಿದ್ದು, ಇದು ದಾಖಲೆಯ ಪಟ್ಟಿ ಸೇರಿದೆ. ಈ ಹಿಂದೆ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 47 ಸಿಕ್ಸರ್ ಸಿಡಿಸಿತ್ತು.

Most sixes by a team in a series

  • 48* Ind vs Eng in India 2024 (3* Tests)

  • 47 Ind vs SA in India 2019 (3 Tests)

  • 43 Eng vs Aus in England 2023 (5 Tests)

  • 40 Aus vs Eng in Australia 2013/14 (5 Tests)

ಯಶಸ್ವಿ ಜೈಸ್ವಾಲ್
3ನೇ ಟೆಸ್ಟ್: ಅಶ್ವಿನ್ ಎಡವಟ್ಟು; ಭಾರತಕ್ಕೆ 5 ರನ್ ದಂಡ, ಒಂದೂ ಎಸೆತ ಎದುರಿಸದೇ ಇಂಗ್ಲೆಂಡ್ ಗೆ 5 ರನ್!

ಎಡಗೈ ಬ್ಯಾಟರ್ ನಿಂದ ಅತೀ ಹೆಚ್ಚು ರನ್: ಜೈಸ್ವಾಲ್ ದಾಖಲೆ

ಇನ್ನು ಜೈಸ್ವಾಲ್ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ ಬಳಿಕ ಭರ್ಜರಿ ಫಾರ್ಮ್ ನಲ್ಲಿದ್ದು, ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಹಾಲಿ ಟೂರ್ನಿಯಲ್ಲಿ ಜೈಸ್ವಾಲ್ 545 ರನ್ ಗಳಿಸಿದ್ದಾರೆ. ಆ ಮೂಲಕ ಭಾರತದ ಪರ ಒಂದೇ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎಡಗೈ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಈ ಕೀರ್ತಿ ಸೌರವ್ ಗಂಗೂಲಿ ಹೆಸರಿನಲ್ಲಿತ್ತು. 2007ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಗಂಗೂಲಿ 534 ರನ್ ಗಳಿಸಿದ್ದರು. ಇದು ಭಾರತದ ಪರ ಎಡಗೈ ಬ್ಯಾಟರ್ ಗಳಿಸಿದ್ದ ಅತೀ ಹೆಚ್ಚು ರನ್ ಗಳಿಕೆಯಾಗಿತ್ತು.

Most runs by a left-handed batter in a Test series for India

  • 545 Yashasvi Jaiswal vs Eng 2024 (H)

  • 534 Sourav Ganguly vs Pak 2007 (H)

  • 463 Gautam Gambhir vs Aus 2008 (H)

  • 445 Gautam Gambhir vs NZ 2009 (A)

ಒಂದೇ ಟೆಸ್ಟ್ ನಲ್ಲಿ ಗರಿಷ್ಠ ಸಿಕ್ಸರ್: ಭಾರತ-ಇಂಗ್ಲೆಂಡ್ ಪಂದ್ಯ ದಾಖಲೆ

ಇನ್ನು 3ನೇ ಟೆಸ್ಟ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟು 28 ಸಿಕ್ಸರ್ ಗಳು ಸಿಡಿಸಿದ್ದು, ಇದು ಟೆಸ್ಟ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್ ಗಳಾಗಿವೆ. ಇದಕ್ಕೂ ಮೊದಲು 2019ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ 27 ಸಿಕ್ಸರ್ ಗಳು ದಾಖಲಾಗಿತ್ತು. ಇದು ಈ ವರೆಗಿನ ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಟ ಸಿಕ್ಸರ್ ಗಳು ದಾಖಲಾದ ಪಂದ್ಯವಾಗಿತ್ತು.

Most sixes by India in a Test

  • 28* vs Eng Rajkot 2024

  • 27 vs SA Vizag 2019

  • 18 vs NZ Mumbai BS 2021

  • 15 vs SL Mumbai BS 2009

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com