3ನೇ ಟೆಸ್ಟ್: ಅಶ್ವಿನ್ ಎಡವಟ್ಟು; ಭಾರತಕ್ಕೆ 5 ರನ್ ದಂಡ, ಒಂದೂ ಎಸೆತ ಎದುರಿಸದೇ ಇಂಗ್ಲೆಂಡ್ ಗೆ 5 ರನ್!

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ ವೇಳೆ ಅಶ್ವಿನ್ ಮಾಡಿದ ತಪ್ಪಿನಿಂದಾಗಿ ಅಂಪೈರ್ ಗಳು 5 ರನ್ ದಂಡ ಹೇರಿದ್ದಾರೆ.
3ನೇ ಟೆಸ್ಟ್: ಅಶ್ವಿನ್ ಎಡವಟ್ಟು; ಭಾರತಕ್ಕೆ 5 ರನ್ ದಂಡ, ಒಂದೂ ಎಸೆತ ಎದುರಿಸದೇ ಇಂಗ್ಲೆಂಡ್ ಗೆ 5 ರನ್!

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ ವೇಳೆ ಅಶ್ವಿನ್ ಮಾಡಿದ ತಪ್ಪಿನಿಂದಾಗಿ ಅಂಪೈರ್ ಗಳು 5 ರನ್ ದಂಡ ಹೇರಿದ್ದಾರೆ.

ಇಂಗ್ಲೆಂಡ್‌ನ ಬೌಲರ್‌ಗಳು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಿ ಭಾರತವನ್ನು ಬೇಗನೆ ಆಲೌಟ್ ಮಾಡಿದರು. ಆದರೆ ಒಂದು ಹಂತದಲ್ಲಿ ಇಂಗ್ಲೆಂಡ್ ಗೆ ಅಶ್ವಿನ್ ಮತ್ತು ಬುಮ್ರಾ ಕಾಡಿದರು. ಅಶ್ವಿನ್ (37ರನ್) ಮತ್ತು ಬುಮ್ರಾ 26 ರನ್ ಗಳಿಸಿ ಭಾರತದ ಮೊತ್ತವನ್ನು ಅಂತಿಮ ಹಂತದಲ್ಲಿ ಹಿಗ್ಗಿಸಿದರು. ಭಾರತ ತಂಡ 331 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಚೊಚ್ಚಲ ಟೆಸ್ಟ್ ಆಡುತ್ತಿರುವ ಉದಯೋನ್ಮುಖ ಆಟಗಾರ ಧ್ರುವ್ ಜುರೆಲ್ ಮತ್ತು ರವಿಚಂದ್ರನ್ ಅಶ್ವಿನ್ ಉತ್ತಮ ಜೊತೆಯಾಟವಾಡುತ್ತಿದ್ದ ವೇಳೆ ಅಶ್ವಿನ್ ಎಸಗಿದೆ ತಪ್ಪು ಎದುರಾಳಿ ತಂಡಕ್ಕೆ 5 ರನ್ ಪೆನಾಲ್ಟಿ ಲಭಿಸುವಂತೆ ಮಾಡಿತು.

3ನೇ ಟೆಸ್ಟ್: ಅಶ್ವಿನ್ ಎಡವಟ್ಟು; ಭಾರತಕ್ಕೆ 5 ರನ್ ದಂಡ, ಒಂದೂ ಎಸೆತ ಎದುರಿಸದೇ ಇಂಗ್ಲೆಂಡ್ ಗೆ 5 ರನ್!
3ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 445 ರನ್ ಗೆ ಆಲೌಟ್, ದಾಖಲೆ ಬರೆದ ಧ್ರುವ್ ಜುರೆಲ್!

ರೆಹಾನ್ ಅಹ್ಮದ್ ಎಸೆದ 102ನೇ ಓವರ್ ನ 4ನೇ ಎಸೆತದಲ್ಲಿ ಅಶ್ವಿನ್ ರನ್ ಗಳಿಸಲು ಯತ್ನಿಸಿ ಮಿಡ್ ಪಿಚ್ ನಲ್ಲಿ ಓಡಿದರು. ಇದನ್ನು ಗಮನಿಸಿದ ಅಂಪೈರ್ ವಿಲ್ಸನ್ ತಕ್ಷಣವೇ ಭಾರತ ತಂಡಕ್ಕೆ 5 ರನ್ ದಂಡ ವಿಧಿಸಿದರು. ಈ ವೇಳೆ ಅಶ್ವಿನ್ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿ ನಾನು ನಿಯಮ ಅನುಮತಿಸಿದ 5 ಮೀಟರ್ ಒಳಗೆ ಓಡಿದೆ ಎಂದು ಹೇಳಿದರಾದರೂ, ಅಶ್ವಿನ್ ಮಾತನ್ನು ಒಪ್ಪದ ಅಂಪೈರ್ ಗಳು 5 ರನ್ ಗಳಿಗೆ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆರಂಭಿಸಲಿದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಇದನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದ ನಾಯಕ ರೋಹಿತ್ ಶರ್ಮಾ ಕೂಡ ತಮ್ಮದೇ ಧಾಟಿಯಲ್ಲಿ, ಕೋಪ ಹೊರ ಹಾಕಿದ್ದು, ಕ್ಯಾಮೆರಾದಲ್ಲಿ ದಾಖಲಾಗಿದೆ.

ಅಶ್ವಿನ್ ಮಾತ್ರವಲ್ಲ.. ತಂಡದ ಇತರೆ ಆಟಗಾರರಿಂದಲೂ ಪ್ರಮಾದ

ಇನ್ನು ಮೂಲಗಳ ಪ್ರಕಾರ ಭಾರತ ತಂಡಕ್ಕೆ ಅಂಪೈರ್ ಗಳು ಹೇರಿರುವ 5 ರನ್ ಪೆನಾಲ್ಟಿಗೆ ಅಶ್ವಿನ್ ಮಾತ್ರ ಹೊಣೆಯಲ್ಲ. ಮೊದಲ ದಿನ ಭಾರತ ತಂಡದ ಕೆಲವು ಬ್ಯಾಟ್ಸ್‌ಮನ್‌ಗಳು ಕೂಡ ಪಿಚ್‌ನ ಮಧ್ಯದಲ್ಲಿ ಓಡಿದ್ದಕ್ಕಾಗಿ ಅಂಪೈರ್‌ನಿಂದ ಎಚ್ಚರಿಕೆ ನೀಡಿದ್ದರು. ನಿರಂತರ ಚಟುವಟಿಕೆಯಿಂದಾಗಿ 5 ರನ್ ಗಳ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ನ್ಯೂಜಿಲೆಂಡ್ ತಂಡದ ವಿರುದ್ಧ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಅವರು ಪಿಚ್‌ನ ಮಧ್ಯದಲ್ಲಿ ಓಡಿದಾಗ ಭಾರತ ತಂಡಕ್ಕೆ 5 ರನ್ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com