ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ಗಂಡು ಮಗು ಜನನ: ವಿಭಿನ್ನ ಹೆಸರಿಟ್ಟ ವಿರುಷ್ಕಾ ದಂಪತಿ!

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 15ರಂದೇ ಗಂಡು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದು ಈ ಸಂತಸದ ಸುದ್ದಿಯನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ವಿರುಷ್ಕಾ ದಂಪತಿ
ವಿರುಷ್ಕಾ ದಂಪತಿ

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 15ರಂದೇ ಗಂಡು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದು ಈ ಸಂತಸದ ಸುದ್ದಿಯನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮಗುವಿಗೆ ಅಕಾಯ್ ಎಂದು ವಿಭಿನ್ನ ಹೆಸರಿಟ್ಟಿದ್ದಾರೆ. ವಾಮಿಕಾಳ ಕಿರಿಯ ಸಹೋದರನನ್ನು ಜಗತ್ತಿಗೆ ಸ್ವಾಗತ ಎಂದು ಅನುಷ್ಕಾ ಬರೆದಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ವಿರುಷ್ಕಾ ದಂಪತಿ
ಸುಳ್ಳು ಮಾಹಿತಿ ನೀಡಿ ದೊಡ್ಡ ತಪ್ಪು ಮಾಡಿದೆ: ವಿರಾಟ್ ಕೊಹ್ಲಿ ವಿಷಯದಲ್ಲಿ ಡಿವಿಲಿಯರ್ಸ್ ಹೀಗೆಂದು ಕ್ಷಮೆ ಕೇಳಿದ್ದೇಕೆ?

ಅನುಷ್ಕಾ ಪೋಸ್ಟ್‌ನಲ್ಲಿ 'ನಮ್ಮ ಹೃದಯದಲ್ಲಿ ಬಹಳ ಸಂತೋಷ ಮತ್ತು ಪ್ರೀತಿಯಿಂದ, ಫೆಬ್ರವರಿ 15ರಂದು ನಾವು ಅಕಾಯ್ ಮತ್ತು ವಾಮಿಕಾ ಅವರ ಚಿಕ್ಕ ಸಹೋದರನನ್ನು ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ನಿಮಗೆ ತಿಳಿಸಲು ನಾವು ಸಂತೋಷಪಡುತ್ತೇವೆ ಎಂದು ಬರೆದಿದ್ದಾರೆ.

ನಿಮ್ಮ ಆಶೀರ್ವಾದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಅನುಷ್ಕಾ ಹೇಳಿದ್ದಾರೆ. ಈ ಸಮಯದಲ್ಲಿ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ಪ್ರೀತಿ ಮತ್ತು ಕೃತಜ್ಞತೆ ನಿಮ್ಮ ಪ್ರೀತಿಯ ವಿರಾಟ್ ಮತ್ತು ಅನುಷ್ಕಾ ಎಂದು ಬರೆದಿದ್ದಾರೆ.

ವಿರುಷ್ಕಾ ದಂಪತಿ ಯಾವಾಗ ಎರಡನೇ ಮಗುವಿಗೆ ಪೋಷಕರಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟುಹಾಕಿತ್ತು.2023ರ ಸೆಪ್ಟೆಂಬರ್ ನಲ್ಲಿ ನಟಿ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹೊರಬಂದಿತು. ಈ ಕಾರಣದಿಂದಲೇ ಆಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ ಮತ್ತು ವಿರಾಟ್ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲೂ ಭಾಗವಹಿಸಲಿಲ್ಲ.

2021ರಲ್ಲಿ ಹೆಣ್ಣು ಮಗು ಜನನ

ಅನುಷ್ಕಾ ಮತ್ತು ವಿರಾಟ್ 2017ರಲ್ಲಿ ಇಟಲಿಯಲ್ಲಿ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. 2021ರ ಜನವರಿಯಲ್ಲಿ ಅನುಷ್ಕಾ ಮಗಳು ವಾಮಿಕಾಗೆ ಜನ್ಮ ನೀಡಿದರು. ಮದುವೆಯ ನಂತರ ಅನುಷ್ಕಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಅವರ ಕೊನೆಯ ಚಿತ್ರ 2018ರಲ್ಲಿ ಬಿಡುಗಡೆಯಾಗಿದ್ದ ಝೀರೋ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com