ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ: ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಹೇಳಿದಿಷ್ಟು...

ಯುವ ಪಡೆಯ ಘರ್ಜನೆಗೆ ಬಲಿಷ್ಠ ಇಂಗ್ಲೆಂಡ್ ತಂಡ ಮಂಕಾಗಿದ್ದು, ಆಂಗ್ಲರ ವಿರುದ್ಧ ರೋಹಿತ್ ಶರ್ಮಾ ಪಡೆ ಐತಿಹಾಸಿಕ ಸರಣಿ ಗೆಲುವಿನ ನಂತರ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ - ಸಚಿನ್ ತೆಂಡುಲ್ಕರ್
ವಿರಾಟ್ ಕೊಹ್ಲಿ - ಸಚಿನ್ ತೆಂಡುಲ್ಕರ್

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ, ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 3-1 ಅಂತರದಲ್ಲಿ ಸರಣಿಯನ್ನು ಕೈವಶಮಾಡಿಕೊಂಡಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ತಮ್ಮ ಚೊಚ್ಚಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಲ್ಲದೆ, ಟೀಂ ಇಂಡಿಯಾದ ಗೆಲುವಿಗೂ ಕೊಡುಗೆ ನೀಡಿದ್ದಾರೆ.

ಯುವ ಪಡೆಯ ಘರ್ಜನೆಗೆ ಬಲಿಷ್ಠ ಇಂಗ್ಲೆಂಡ್ ತಂಡ ಮಂಕಾಗಿದ್ದು, ಆಂಗ್ಲರ ವಿರುದ್ಧ ರೋಹಿತ್ ಶರ್ಮಾ ಪಡೆ ಐತಿಹಾಸಿಕ ಸರಣಿ ಗೆಲುವಿನ ನಂತರ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಐದು ವಿಕೆಟ್‌ ಅಂತರದಲ್ಲಿ ಜಯಗಳಿಸಿದೆ. ವೈಯಕ್ತಿಕ ಕಾರಣಗಳಿಂದ ಸದ್ಯ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಕೊಹ್ಲಿ, ಸರಣಿ ಗೆದ್ದ ಕೆಲವೇ ನಿಮಿಷಗಳಲ್ಲಿ ತಂಡಕ್ಕೆ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ - ಸಚಿನ್ ತೆಂಡುಲ್ಕರ್
4ನೇ ಟೆಸ್ಟ್: ಐದು ವಿಕೆಟ್ ಗಳಿಂದ ಇಂಗ್ಲೆಂಡ್ ಮಣಿಸಿ, ಸರಣಿ ಗೆದ್ದ ಭಾರತ!

'ಹೌದು!!! ನಮ್ಮ ಯುವ ತಂಡದ ಶ್ರಮದಿಂದ ಅದ್ಭುತ ಸರಣಿ ಗೆಲುವು ನಮ್ಮದಾಗಿದೆ. ಇದು ಸ್ಥೈರ್ಯ, ಧೈರ್ಯ ಮತ್ತು ದೃಢತೆಯನ್ನು ತೋರಿಸಿದೆ' ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟೀಂ ಇಂಡಿಯಾಗೆ ಸಚಿನ್ ತೆಂಡುಲ್ಕರ್ ಮೆಚ್ಚುಗೆ

ಭಾರತ ಸರಣಿ ಗೆಲ್ಲುತ್ತಿದ್ದಂತೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಟೀಂ ಇಂಡಿಯಾದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಭಾರತ ಮತ್ತೊಮ್ಮೆ ಒತ್ತಡದ ಪರಿಸ್ಥಿತಿಯಿಂದ ಹಿಂದಿರುಗಿತು ಮತ್ತು ಪಂದ್ಯವನ್ನು ಗೆಲ್ಲಲು ಹೋರಾಡಿತು. ಇದು ನಮ್ಮ ಆಟಗಾರರ ಗುಣ ಮತ್ತು ಮಾನಸಿಕ ಶಕ್ತಿಯನ್ನು ತೋರಿಸುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.

'ಟೆಸ್ಟ್ ಕ್ರಿಕೆಟ್‌ನಲ್ಲಿ ಆಕಾಶ್‌ ದೀಪ್‌ ಅವರ ಸ್ಪೆಲ್ ಅತ್ಯುತ್ತಮವಾಗಿತ್ತು. ಧ್ರುವ್ ಜುರೆಲ್ ಎರಡೂ ಇನಿಂಗಳಲ್ಲಿ ಅದ್ಭುತವಾಗಿದ್ದರು ಮತ್ತು ಅವರ ಫುಟ್‌ವರ್ಕ್ ನಿಖರವಾಗಿತ್ತು. ಕುಲದೀಪ್ ಯಾದವ್ ಜೊತೆಗಿನ ಅವರ ಜೊತೆಯಾಟವು 1ನೇ ಇನಿಂಗ್ಸ್‌ನಲ್ಲಿ ತಂಡ ಆಟದಲ್ಲಿರುವಂತೆ ಮಾಡಿತು ಮತ್ತು 2 ನೇ ಇನಿಂಗ್ಸ್‌ನಲ್ಲಿ ಅವರ ನಾಕ್ ನಮಗೆ ಗೆಲುವಿನತ್ತ ಸಾಗಲು ಸಹಾಯ ಮಾಡಿತು. 2ನೇ ಇನಿಂಗ್ಸ್‌ನಲ್ಲಿ ಕುಲ್‌ದೀಪ್‌ ಅವರ ಸ್ಪೆಲ್‌ ಬಹುಮುಖ್ಯವಾಗಿತ್ತು' ಎಂದು ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ.

ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವು ಮುಕ್ತಾಯವಾಗಿದೆ. ಇಂಗ್ಲೆಂಡ್ ನೀಡಿದ 192 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಗೆದ್ದು ಬೀಗಿತು. ನಾಯಕ ರೋಹಿತ್ ಶರ್ಮಾ (81 ಎಸೆತಗಳಲ್ಲಿ 55) ಮತ್ತು ಯಶಸ್ವಿ ಜೈಸ್ವಾಲ್ (44 ಎಸೆತಗಳಲ್ಲಿ 37) ಅವರ 84 ರನ್‌ಗಳ ಜೊತೆಯಾಟ ಟೀಂ ಇಂಡಿಯಾಗೆ ಆರಂಭಿಕ ಆಸರೆಯನ್ನು ಒದಗಿಸಿತು.

ಬಳಿಕ ರಜತ್ ಪಾಟಿದಾರ್, ರವೀಂದ್ರ ಜಡೇಜಾ ಮತ್ತು ಸರ್ಫರಾಜ್ ಖಾನ್ ಔಟಾದ ನಂತರ ಶುಭಮನ್ ಗಿಲ್ (ಔಟಾಗದೆ 52) ಮತ್ತು ಧ್ರುವ್ ಜುರೆಲ್ (39*) ಅಜೇಯ 72 ರನ್ ಜೊತೆಯಾಟದೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com