MI vs UPW: ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಮೊದಲ ಗೆಲುವು ದಾಖಲಿಸಿದ ಯುಪಿ ವಾರಿಯರ್ಸ್

ತಮ್ಮ ಹಿಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದ ಮುಂಬೈ ಇಂಡಿಯನ್ಸ್ ತಂಡವು ಬುಧವಾರ ನಡೆದ ಆಕ್ಷನ್-ಪ್ಯಾಕ್ಡ್ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024ರ 6ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೋಲು ಅನುಭವಿಸಿದೆ.
ಯುಪಿ ವಾರಿಯರ್ಸ್ ತಂಡದ ಕಿರಣ್ ನವ್ಗಿರೆ
ಯುಪಿ ವಾರಿಯರ್ಸ್ ತಂಡದ ಕಿರಣ್ ನವ್ಗಿರೆ

ಬೆಂಗಳೂರು: ತಮ್ಮ ಹಿಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದ ಮುಂಬೈ ಇಂಡಿಯನ್ಸ್ ತಂಡವು ಬುಧವಾರ ನಡೆದ ಆಕ್ಷನ್-ಪ್ಯಾಕ್ಡ್ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024ರ 6ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೋಲು ಅನುಭವಿಸಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್ ಇಲ್ಲದೆಯೇ ಕಣಕ್ಕಿಳಿದಿತ್ತು. ಪಂದ್ಯಾವಳಿಯಲ್ಲಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ, ಸೋಲಿಲ್ಲದೆ ಮುನ್ನುಗ್ಗುತ್ತಿದ್ದ ಮುಂಬೈ ತಂಡ ಮೊದಲ ಬಾರಿಗೆ ಮುಗ್ಗರಿಸಿದೆ. ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಯುಪಿ ವಾರಿಯರ್ಸ್ ತಂಡವು ಅತ್ಯುತ್ತಮ ಆಟದಿಂದ 7 ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಗಳಿಸಿದೆ.

ಗ್ರೇಸ್ ಹ್ಯಾರಿಸ್
ಗ್ರೇಸ್ ಹ್ಯಾರಿಸ್

ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಬ್ಯಾಟರ್‌ಗಳಾದ ಹೇಲಿ ಮ್ಯಾಥ್ಯೂಸ್ ಅವರ ಅರ್ಧಶತಕ, ಯಾಸ್ತಿಕಾ ಭಾಟಿಯಾ (26) ಮತ್ತು ಅಮೆಲಿಯಾ ಕೆರ್ (23) ಅವರ ರನ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.

ಯುಪಿ ವಾರಿಯರ್ಸ್ ತಂಡದ ಕಿರಣ್ ನವ್ಗಿರೆ
UP Warriorz vs Delhi Capitals: 9 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್

ಮುಂಬೈ ತಂಡ ನೀಡಿದ 162 ರನ್ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್‌ನ ಅಲಿಸ್ಸಾ ಹೀಲಿ (33) ಮತ್ತು ಕಿರಣ್ ನವ್ಗಿರೆ (57) ಅವರ 94 ರನ್ ಜೊತೆಯಾಟದಿಂದ ತಂಡಕ್ಕೆ ಬಲ ಸಿಕ್ಕಿತು. ನಂತರ ಬಂದ ಗ್ರೇಸ್ ಹ್ಯಾರಿಸ್ (38*) ಮತ್ತು ದೀಪ್ತಿ ಶರ್ಮಾ (27*) ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್ ಏಳು ವಿಕೆಟ್‌ಗಳ ಜಯ ಸಾಧಿಸಲು ನೆರವಾದರು.

ವಿಕೆಟ್ ಪಡೆದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಸಂಭ್ರಮಾಚರಣೆ
ವಿಕೆಟ್ ಪಡೆದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಸಂಭ್ರಮಾಚರಣೆ

ಕಳೆದ ವಾರ ನಡೆದ ಡಬ್ಲ್ಯುಪಿಎಲ್ 2024 ರ ಆರಂಭಿಕ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೇವಲ 2 ರನ್‌ಗಳಿಂದ ಸೋಲು ಕಂಡಿತ್ತು. ಪಂದ್ಯಾವಳಿಯ 4ನೇ ದಿನದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಸೋಲಿಸಿತ್ತು. ಲೀಗ್ ಹಂತದಲ್ಲಿ ಬ್ಯಾಕ್-ಟು-ಬ್ಯಾಕ್ ಸೋಲುಗಳನ್ನು ಕಂಡಿದ್ದ ಯುಪಿ ವಾರಿಯರ್ಜ್ ಇದೀಗ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಜಯ ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com