ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್: ಭಾರತ ಸ್ಪಿನ್ನರ್ ಗಳ ಮಾರಕ ದಾಳಿ, 246 ರನ್ ಗೆ ಇಂಗ್ಲೆಂಡ್ ಆಲೌಟ್

ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 246ರನ್ ಗೆ ಆಲೌಟ್ ಆಗಿದೆ.
ಭಾರತೀಯ ಬೌಲರ್ ಗಳ ಅಬ್ಬರ
ಭಾರತೀಯ ಬೌಲರ್ ಗಳ ಅಬ್ಬರ

ಹೈದರಾಬಾದ್: ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 246ರನ್ ಗೆ ಆಲೌಟ್ ಆಗಿದೆ.

ಭಾರತೀಯ ಸ್ಪಿನ್ನರ್ ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ 246ರನ್ ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ಆಲ್ ರೌಂಡರ್ ಬೆನ್ ಸ್ಟೋಕ್ಸ್ 70 ರನ್ ಗಳಿಸಿದರೆ, ಡಕೆಟ್ 35 ರನ್, ಝ್ಯಾಕ್ ಕ್ರಾಲಿ 20, ಜಾನಿ ಬೇರ್ ಸ್ಟೋ 37, ಜೋ ರೂಟ್ 29, ಟಾಮ್ ಹಾರ್ಟ್ಲೇ 23 ರನ್ ಗಳಿಸಿದರು.

ಪಂದ್ಯದ ಆರಂಭದಿಂದಲೂ ಕರಾರುವಕ್ಕಾದ ದಾಳಿ ಮಾಡಿದ ಭಾರತೀಯ ಬೌಲರ್ ಗಳು 128 ರನ್ ಗಳಿಗೆ 5 ವಿಕೆಟ್ ಕಬಳಿಸಿದ್ದರು. ಈ ಹೊತ್ತಿನಲ್ಲಿ ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಲ್ರೌಂಡರ್ ಬೆನ್ ಸ್ಟೋಕ್ಸ್ ನೆರವಾದರು. 88 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ ಸ್ಟೋಕ್ಸ್ 70ರನ್ ಸಿಡಿಸಿದರು. ಅವರಿಗೆ ತಂಡದ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ. ಸ್ಟೋಕ್ಸ್ ಕೂಡ 70 ರನ್ ಗಳಿಸಿ ಬುಮ್ರಾಗೆ ಕ್ಲೀನ್ ಬೋಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.

ಆ ಮೂಲಕ ಇಂಗ್ಲೆಂಡ್ ತಂಡ 246ರನ್ ಗೆ ಆಲೌಟ್ ಆಯಿತು. ಭಾರತ ತಂಡದ ಪರ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ತಲಾ 3 ವಿಕೆಟ್ ಪಡೆದರೆ, ಬುಮ್ರಾ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.

ಇತ್ತೀಚಿನ ವರದಿ ಬಂದಾಗ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ವಿಕೆಟ್ ನಷ್ಟವಿಲ್ಲದೇ 38 ರನ್ ಗಳಿಸಿದ್ದು, 27 ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್ ಮತ್ತು 8 ರನ್ ಗಳಿಸಿರುವ ನಾಯಕ ರೋಹಿತ್ ಶರ್ಮಾ ಕ್ರೀಸ್ ಕಾಯ್ದುಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com