ಜೋ ರೂಟ್
ಜೋ ರೂಟ್

ಮೊದಲ ಟೆಸ್ಟ್: ಗಳಿಸಿದ್ದು ಅಲ್ಪ ಮೊತ್ತವೇ.. ಆದರೂ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಜೋ ರೂಟ್!

ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೊಟ್ ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.

ಹೈದರಾಬಾದ್: ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೊಟ್ ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.

ಹೌದು.. ಗುರುವಾರ ನಡೆಯುತ್ತಿರುವ ಹೈದರಾಬಾದ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ರೂಟ್​ 10 ರನ್ ಗಳಿಸುತ್ತಿದ್ದಂತೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು.

ಈ ಪಂದ್ಯದಲ್ಲಿ ರೂಟ್ ಮೊದಲ ಇನ್ನಿಂಗ್ಸ್ ನಲ್ಲಿ 60 ಎಸೆತಗಳಲ್ಲಿ 29 ರನ್ ಗಳಿಸಿ ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಔಟಾದರು.

ಸಚಿನ್ ತೆಂಡೂಲ್ಕರ್​ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ಗಳಲ್ಲಿ 32 ಪಂದ್ಯಗಳಲ್ಲಿ 51.73 ಸರಾಸರಿಯಲ್ಲಿ 2,535 ರನ್ ಗಳಿಸುವ ಮೂಲಕ ಪ್ರಮುಖ ರನ್ ಗಳಿಸಿ ಇದುವರೆಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರು. ಆದರೆ ರೂಟ್ ಇದೀಗ ಈ ದಾಖಲೆ ಮುರಿದಿದ್ದು ಅವರು ಈಗ ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ. ರೂಟ್‌ ಅವರು ಭಾರತದ ವಿರುದ್ಧ 25 ಪಂದ್ಯಗಳಿಂದ 63.15 ಸರಾಸರಿಯಲ್ಲಿ ಒಂಬತ್ತು ಶತಕಗಳು ಮತ್ತು 10 ಅರ್ಧ ಶತಕಗಳೊಂದಿಗೆ 2,536* ರನ್ ಗಳಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. 38 ಪಂದ್ಯಗಳಲ್ಲಿ, ಅವರು 38.20 ಸರಾಸರಿಯಲ್ಲಿ 2,483 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು 16 ಅರ್ಧಶತಕಗಳು ಸೇರಿವೆ.

ಭಾರತದ ವಿರುದ್ಧ 30 ಟೆಸ್ಟ್ ಪಂದ್ಯಗಳಲ್ಲಿ 47.66 ಸರಾಸರಿಯಲ್ಲಿ 2,431 ರನ್ ಗಳಿಸಿದ ಮಾಜಿ ಇಂಗ್ಲೆಂಡ್ ನಾಯಕ ಅಲಿಸ್ಟೈರ್ ಕುಕ್ ಅವರು ಗವಾಸ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಕುಕ್ ಭಾರತದ ವಿರುದ್ಧ ಏಳು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಬಾರಿಸಿದ್ದಾರೆ. 294 ರನ್ನುಗಳು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ. ವಿರಾಟ್ ಕೊಹ್ಲಿ ಈ ಸಾಧಕರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. 35 ವರ್ಷದ ಕೊಹ್ಲಿ 28 ಪಂದ್ಯಗಳಿಂದ 1,991 ರನ್ ಗಳಿಸಿದ್ದಾರೆ. ಈ ಪೈಕಿ ಐದು ಶತಕ ಮತ್ತು ಒಂಬತ್ತು ಅರ್ಧಶತ ದಾಖಲಾಗಿದೆ. ವೈಯಕ್ತಿಕ ಕಾರಣಗಳಿಂದ ಮೊದಲ ಎರಡು ಟೆಸ್ಟ್‌ಗಳಿಂದ ಕೊಹ್ಲಿ ಹೊರಗುಳಿದಿದ್ದಾರೆ.

Most runs in India-England Tests
2555 Joe Root
2535 S Tendulkar
2483 S Gavaskar
2431 A Cook
1991 V Kohli

ಭಾರತದ ವಿರುದ್ಧ ಗರಿಷ್ಠ ಟೆಸ್ಟ್ ರನ್ ರಿಕ್ಕಿ ಪಾಂಟಿಂಗ್ ಅಗ್ರ ಸ್ಥಾನದಲ್ಲಿ
ಅಂತೆಯೇ ಭಾರತದ ವಿರುದ್ಧ ಗರಿಷ್ಠ ಟೆಸ್ಟ್ ರನ್ ಗಳಿಸಿರುವ ಬ್ಯಾಟರ್ ಗಳ ಪಟ್ಟಿಯಲ್ಲಿ ಆಸ್ಚ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದು, ಅವರು 2555 ರನ್ ಗಳಿಸಿದ್ದಾರೆ. ಅಷ್ಟೇ ರನ್ ಗಳಿಸಿರುವ ಇಂಗ್ಲೆಂಡ್ ತಂಡದ ಜೋ ರೂಟ್ 2ನೇ ಸ್ಥಾನದಲ್ಲಿದ್ದು, ಆಲಿಸ್ಟರ್ ಕುಕ್ 2431 ರನ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Most runs vs India in Test cricket
2555 R Ponting
2555 Joe Root
2431 A Cook
2344 C Lloyd
2228 Javed Miandad

 

Related Stories

No stories found.

Advertisement

X
Kannada Prabha
www.kannadaprabha.com