2ನೇ T20 ಪಂದ್ಯ: 100 ರನ್ ಗಳಿಂದ ಜಿಂಬಾಬ್ವೆ ಸೋಲಿಸಿದ ಭಾರತ!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಕಲೆಹಾಕಿತು. ಅಭಿಷೇಕ್ ಶರ್ಮಾ 45 ಎಸೆತಗಳಲ್ಲಿ 8 ಸಿಕ್ಸರ್, 7 ಬೌಂಡರಿಗಳೊಂದಿಗೆ ಶತಕ ಬಾರಿಸಿದರು.
ಭಾರತದ ಆಟಗಾರರು
ಭಾರತದ ಆಟಗಾರರು

ಹರಾರೆ: ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಭಾನುವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆಯನ್ನು 100 ರನ್ ಗಳ ಅಂತರದಿಂದ ಭಾರತ ಸೋಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಕಲೆಹಾಕಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ಶುಭ್ ಮನ್ ಗಿಲ್ ಕೇವಲ 2 ರನ್ ಗಳಿಸಿ ಬ್ರಿಯಾನ್ ಬೆನೆಟ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅಭಿಷೇಕ್ ಶರ್ಮಾ 45 ಎಸೆತಗಳಲ್ಲಿ 8 ಸಿಕ್ಸರ್, 7 ಬೌಂಡರಿಗಳೊಂದಿಗೆ ಶತಕ ಬಾರಿಸಿದರು.

ಇನ್ನು ಉಳಿದಂತೆ ಋತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಗಳೊಂದಿಗೆ ಅಜೇಯ 77 ರನ್ ಗಳಿಸಿದರು. ರಿಂಕ್ ಸಿಂಗ್ 22 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಗಳೊಂದಿಗೆ ಅಜೇಯ 48 ರನ್ ಗಳಿಸಿದರು.

ಭಾರತ ನೀಡಿದ ಬೃಹತ್ 234 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 43, ಬ್ರಿಯಾನ್ ಬೆನೆಟ್ 26, ಲ್ಯೂಕ್ ಜೊಂಗ್ವೆ 33, ಜೊನಾಥನ್ ಕ್ಯಾಂಪ್‌ಬೆಲ್ 10 ರನ್ ಗಳಿಸಿದ್ದು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು 4ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಇದರಿಂದಾಗಿ ಜಿಂಬಾಬ್ವೆ 18.4 ಓವರ್ ಗಳಲ್ಲಿ 134 ರನ್ ಗಳಿಸಿ ಆಲೌಟ್ ಆಯಿತು.

ಭಾರತದ ಆಟಗಾರರು
ಜಿಂಬಾಬ್ವೆ ವಿರುದ್ಧ ಭಾರತದ ಹೀನಾಯ ಸೋಲಿಗೆ ಬಿಸಿಸಿಐನ 'ಅಹಂಕಾರ' ಕಾರಣ: ಸಂಸದ ಶಶಿತರೂರ್

ಭಾರತ ಪರ ಮುಕೇಶ್ ಕುಮಾರ್, ಅವೇಶ್ ಖಾನ್ ತಲಾ ಮೂರು ವಿಕೆಟ್ ಪಡೆದರೆ, ರವಿ ಬಿಷ್ಟೋಯ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು. ಈ ಮೂಲಕ ಭಾರತ 100 ರನ್ ಗಳಿಂದ ಜಯಭೇರಿ ಬಾರಿಸಿತು. ಐದು ಪಂದ್ಯಗಳಲ್ಲಿ ಸರಣಿಯಲ್ಲಿ 1-1 ಅಂಕಗಳೊಂದಿಗೆ ಉಭಯ ತಂಡಗಳು ಸಮಬಲ ಸಾಧಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com