ICC T20I Rankings: ಸೂರ್ಯಕುಮಾರ್ ಯಾದವ್ ಗೆ 2ನೇ ಸ್ಥಾನ, ಗಾಯಕ್ವಾಡ್ 7ಕ್ಕೆ ಏರಿಕೆ!

ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ 844 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ 821 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
ಸೂರ್ಯ ಕುಮಾರ್ ಯಾದವ್
ಸೂರ್ಯ ಕುಮಾರ್ ಯಾದವ್

ನವದೆಹಲಿ: ICC ಪುರುಷರ T20I ಬ್ಯಾಟಿಂಗ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ 2ನೇ ಸ್ಥಾನದಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಋತುರಾಜ್ ಗಾಯಕ್ವಾಡ್ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ 844 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ 821 ಪಾಯಿಂಟ್ ಗಳೊಂದಿಗೆ ದ್ವಿತೀಯ, ಇಂಗ್ಲೆಂಡ್ ನ ಪಿಲ್ ಸಾಲ್ಟ್ 797 ಪಾಯಿಂಟ್ ಗಳೊಂದಿಗೆ 3ನೇ ಸ್ಥಾನ, ಪಾಕಿಸ್ತಾನ ನಾಯಕ ಬಾಬರ್ ಅಜಂ 755 ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿದ್ದಾರೆ.

ಮೊಹಮ್ಮದ್ ರಿಜ್ವಾನ್ 746 ಪಾಯಿಂಟ್ ಗಳೊಂದಿಗೆ 5, ಜೋಸ್ ಬಟ್ಲರ್ 716 ಪಾಯಿಂಟ್ ಗಳೊಂದಿಗೆ 6ನೇ, ಗಾಯಕ್ವಾಡ್ 13 ಸ್ಥಾನ ಜಿಗಿತದೊಂದಿಗೆ 7 ನೇ ಸ್ಥಾನದಲ್ಲಿದ್ದಾರೆ. ಗಾಯಕ್ವಾಡ್ ಹೊರತುಪಡಿದರೆ ರಿಂಕು ಸಿಂಗ್, ಅಭಿಷೇಕ್ ಶರ್ಮಾ ಕೂಡಾ ಸ್ಠಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಿಂಕು ಸಿಂಗ್ 39 ನೇ ಸ್ಥಾನದಲ್ಲಿದ್ದರೆ, ಅಭಿಷೇಕ್ ಶರ್ಮಾ 75ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸೂರ್ಯ ಕುಮಾರ್ ಯಾದವ್
ICC T20I Rankings: ಹಾರ್ದಿಕ್ ಪಾಂಡ್ಯ ನಂಬರ್- 1 ಆಲ್ ರೌಂಡರ್!

ಇನ್ನೂ ಬೌಲರ್ ವಿಭಾಗದಲ್ಲಿ ಅಕ್ಸರ್ ಪಟೇಲ್ 644 ಪಾಯಿಂಟ್ ಗಳೊಂದಿಗೆ 9 ನೇ ಸ್ಥಾನ ಪಡೆದಿದ್ದು, ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 11ನೇ ಸ್ಥಾನದಲ್ಲಿದ್ದರೆ, ಜಸ್ಪ್ರೀತ್ ಬೂಮ್ರಾ 14ನೇ ಸ್ಥಾನ ಪಡೆದಿದ್ದಾರೆ. ಭಾರತದ ರವಿ ಬಿಷ್ಟೋಯ್ ಕೂಡಾ 8 ಸ್ಥಾನ ಜಿಗಿತದೊಂದಿಗೆ 14ನೇ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ಭಾರತದ ಉಪ ನಾಯಕ ಹಾರ್ದಿಕ್ ಪಾಂಡ್ಯ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಅಕ್ಸರ್ ಪಟೇಲ್ 12ನೇ ಸ್ಥಾನ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com