
ಡಂಬುಲ್ಲಾ: ಮಹಿಳೆಯರ ಏಷ್ಯಾ ಕಪ್ 2024ರ ಟೂರ್ನಿಯ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ್ದು 108 ರನ್ ಗಳಿಗೆ ಆಲೌಟ್ ಆಯಿತು.
ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಗುಲ್ ಫಿರೋಜಾ 5 ರನ್ ಗಳಿಸಿ ಔಟಾದರೆ ಮೌನೀಬಾ ಅಲಿ 11 ರನ್ ಬಾರಿಸಿ ಔಟಾದರು. ನಂತರ ಬಂದ ಸಿರ್ದಾ ಅಮಿನ್ 25, ಟುಬಾ ಹಸನ್ 22 ಮತ್ತು ಫಾತಿಮಾ ಸನಾ ಅಜೇಯ 22 ರನ್ ಬಿಟ್ಟರೆ ಮತ್ಯಾರು ಎರಡಂಕಿ ದಾಟಲಿಲ್ಲ.
ಭಾರತದ ಪರ ಬೌಲಿಂಗ್ ನಲ್ಲಿ ದೀಪ್ತಿ ಶರ್ಮಾ 3, ರೇಣುಕಾ ಶರ್ಮಾ, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕ ಪಾಟೀಲ್ ತಲಾ 2 ವಿಕೆಟ್ ಪಡೆದಿದ್ದಾರೆ.
ಇನ್ನು ಪಾಕಿಸ್ತಾನ ನೀಡಿದ 109 ರನ್ ಗುರಿ ಬೆನ್ನಟ್ಟಿದ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. 5 ಓವರ್ ಗಳ ಮುಕ್ತಾಯಕ್ಕೆ 42 ರನ್ ಬಾರಿಸಿದೆ. ಭಾರತದ ಶಫಾಲಿ ವರ್ಮಾ ಅಜೇಯ 29 ಮತ್ತು ಸ್ಮೃತಿ ಮಂದಾನ ಅಜೇಯ 13 ರನ್ ಬಾರಿಸಿ ಆಡುತ್ತಿದ್ದಾರೆ.
Advertisement