1st T20I: ಭಾರತ ಭರ್ಜರಿ ಬ್ಯಾಟಿಂಗ್, ಶ್ರೀಲಂಕಾಗೆ ಗೆಲ್ಲಲು 214 ರನ್ ಬೃಹತ್ ಗುರಿ

ನಾಯಕ ಸೂರ್ಯ ಕುಮಾರ್ ಯಾದವ್ ಅರ್ಧಶತಕ ಸಿಡಿಸಿದರೆ ರಿಷಬ್ ಪಂತ್ 49 ರನ್ ಭಾರತದ ಇನ್ನಿಂಗ್ಸ್ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸಿ ಅರ್ಧಶತಕ ಮಿಸ್ ಮಾಡಿಕೊಂಡರು.
SriLanka To chase huge score against India
ಭಾರತ ಭರ್ಜರಿ ಬ್ಯಾಟಿಂಗ್
Updated on

ಪಳ್ಳೆಕೆಲೆ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಭಾರತ ತಂಡ ಲಂಕನ್ನರಿಗೆ ಗೆಲ್ಲಲು 214 ರನ್ ಬೃಹತ್ ಗುರಿ ನೀಡಿದೆ.

ಪಳ್ಳೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಭಾರತದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ (40 ರನ್), ಶುಭ್ ಮನ್ ಗಿಲ್ (34 ರನ್) ಉತ್ತಮ ಆರಂಭ ನೀಡಿದರು.

SriLanka To chase huge score against India
Womens Asia Cup 2024: ಪಾಕಿಸ್ತಾನ ವಿರುದ್ಧ ಶ್ರೀಲಂಕಾಗೆ ವಿರೋಚಿತ ಜಯ, ಫೈನಲ್ ಗೆ ಲಗ್ಗೆ!

ಬಳಿಕ ನಾಯಕ ಸೂರ್ಯ ಕುಮಾರ್ ಯಾದವ್ ಅರ್ಧಶತಕ ಸಿಡಿಸಿದರೆ ರಿಷಬ್ ಪಂತ್ 49 ರನ್ ಭಾರತದ ಇನ್ನಿಂಗ್ಸ್ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸಿ ಅರ್ಧಶತಕ ಮಿಸ್ ಮಾಡಿಕೊಂಡರು. ಹಾರ್ದಿಕ್ ಪಾಂಡ್ಯ 9 ರನ್ ಗಳಿಸಿ ಮತ್ತೆ ನಿರಾಶೆ ಮೂಡಿಸಿದರೆ, ಉದಯೋನ್ಮುಖ ಆಟಗಾರ ರಿಯಾನ್ ಪರಾಗ್ 7 ರನ್ ಗಳಿಸಿ ಪತಿರಾಣಾ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಅಂತಿಮ ಓವರ್ ನಲ್ಲಿ 1 ರನ್ ಗಳಿಸಿದ್ದ ರಿಂಕು ಸಿಂಗ್ ಫರ್ನಾಂಡೋ ಗೆ ವಿಕೆಟ್ ಒಪ್ಪಿಸಿದರು.

ಅಂತಿಮವಾಗಿ ಭಾರತ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿ ಲಂಕಾಗೆ ಗೆಲ್ಲಲು 214 ರನ್ ಗಳ ಬೃಹತ್ ಗುರಿ ನೀಡಿದೆ. ಶ್ರೀಲಂಕಾ ಪರ ಮತೀಶಾ ಪತಿರಾಣಾ 4 ವಿಕೆಟ್ ಪಡೆದರೆ, ಮಧುಶಂಕಾ, ಅಸಿತ ಫರ್ನಾಂಡೋ ಮತ್ತು ಹಸರಂಗ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com