
ಡಲ್ಲಾಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಹಲವು ದಾಖಲೆಗಳು ಸೃಷ್ಟಿಯಾಗಿದ್ದು, ಕೆನಡಾ vs ಯುಎಸ್ಎ ಪಂದ್ಯ ಟಿ20 ವಿಶ್ವಕಪ್ ಟೂರ್ನಿ ಹಲವು ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದೆ.
ಹೌದು.. ಡಲ್ಲಾಸ್ ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ತಂಡ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿತು. ಕೆನಡಾ ಪರ ಆರನ್ ಜೋನ್ಸ್ 23 ರನ್, ನವನೀತ್ ಧಲಿವಾಲ್ 61 ರನ್, ನಿಕೋಲಸ್ ಕಿರ್ಟನ್ 51 ರನ್, ಕನ್ನಡಿಗ ಕರ್ನಾಟಕದ ದಾವಣಗೆರೆ ಮೂಲದ ಶ್ರೇಯಸ್ ಮೊವ್ವಾ 32 ರನ್ ಕಲೆ ಹಾಕಿದರು.
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಯುಎಸ್ಎ ತಂಡ 17.4 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ ಭರ್ಜರಿ ಜಯ ಗಳಿಸಿತು. ಯುಎಸ್ಎ ಪರ ಆರಂಭಿಕ ಆಟಗಾರ ಸ್ಟೀವೆನ್ ಟೈಲರ್ ಡಕೌಟ್ ಆಗಿ ಆರಂಭಿಕ ಆಘಾತ ನೀಡಿದರು. ಆದರೂ ದೃತಿಗೆಡದ ಯುಎಸ್ ಎ ತಂಡ ಆ್ಯಂಡ್ರಿಸ್ ಗಾಸ್ 65 ರನ್ ಮತ್ತು ಆ್ಯರನ್ ಜೋನ್ಸ್ ರ ಅಜೇಯ 94 ರನ್ ಗಳ ನೆರವಿನಿಂದ 17.4 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ ಭರ್ಜರಿ ಜಯ ಗಳಿಸಿತು.
ದಾಖಲೆಗಳ ಸರಮಾಲೆ
ಇನ್ನು ಈ ಪಂದ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿಯ ದಾಖಲೆಗಳ ಸರಮಾಲೆಯೇ ನಿರ್ಮಾಣವಾಗಿದ್ದು, ಈ ದಾಖಲೆಗಳ ಪಟ್ಟಿ ಇಂತಿದೆ.
ಟಿ20 ವಿಶ್ವಕಪ್ ನಲ್ಲಿ 3ನೇ ಗರಿಷ್ಠ ಚೇಸ್
ಯುಎಸ್ಎ ಚೇಸ್ ಮಾಡಿದ 195 ರನ್ ಗಳ ಗುರಿ ಟಿ20 ವಿಶ್ವಕಪ್ ನಲ್ಲಿ ದಾಖಲಾದ 3ನೇ ಗರಿಷ್ಠ ರನ್ ಗಳ ಯಶಸ್ವಿ ಚೇಸಿಂಗ್ ಆಗಿದೆ. ಈ ಹಿಂದೆ 2016ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಅಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 230 ರನ್ ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದಕ್ಕೂ ಮೊದಲು 2007ರಲ್ಲಿ ಜೋಹನ್ಸ್ ಬರ್ಗ್ ನಲ್ಲಿ ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 206ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದೀಗ 194ರನ್ ಗಳನ್ನು ಯುಎಸ್ಎ ಯಶಸ್ವಿಯಾಗಿ ಚೇಸ್ ಮಾಡಿದೆ.
Highest targets succesfully chased in T20 WCs
230 Eng vs SA Wankhede 2016
206 SA vs WI Joburg 2007
195 USA vs Can Dallas 2024 *
193 WI vs Ind Wankhede 2016
192 Aus vs Pak Gros Islet 2010
T20Iಯಲ್ಲಿ ಅಮೆರಿಕ ಯಶಸ್ವಿಯಾಗಿ ಬೆನ್ನಟ್ಟಿದ ಗರಿಷ್ಠ ಗುರಿ
ಅಂತೆಯೇ ಇದು ಅಮೆರಿಕ ತಂಡ ಅಂತಾರಾಷ್ಟ್ರೀಯ ಟಿ20ಯಲ್ಲಿ ಯಶಸ್ವಿಯಾಗಿ ಬೆನ್ನು ಹತ್ತಿದ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ಹ್ಯೂಸ್ಟನ್ ನಲ್ಲಿ ಇದೇ ಕೆನಡಾ ವಿರುದ್ಧ 169ರನ್ ಗಳನ್ನು ಅಮೆರಿಕ ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದು ಈ ವರೆಗಿನ ಅಮೆರಿಕ ಚೇಸ್ ಮಾಡಿದ ಗರಿಷ್ಠ ಗುರಿಯಾಗಿತ್ತು.
Highest targets succesfully chased by USA in T20Is
195 vs Can Dallas 2024 *
169 vs Can Houston 2024
155 vs Jersey Bulawayo 2022
154 vs Ban Houston 2024
ಟಿ20ಯಲ್ಲಿ ಗರಿಷ್ಠ ಜೊತೆಯಾಟ
ಇನ್ನು ಈ ಪಂದ್ಯದಲ್ಲಿ ಆ್ಯಂಡ್ರಿಸ್ ಗಾಸ್ ಮತ್ತು ಜೋನ್ಸ್ ಜೋಡಿ ಬರೊಬ್ಬರಿ 131 ರನ್ ಗಳ ಜೊತೆಯಾಟವಾಡಿದ್ದು, ಇದು ಅಮೆರಿಕ ಪರ ಟಿ20ಯಲ್ಲಿ ದಾಖಲಾದ ಗರಿಷ್ಟ ಜೊತೆಯಾಟವಾಗಿದೆ. ಇದಕ್ಕೂ ಮೊದಲು 2021ರಲ್ಲಿ ಮೊಡಾನಿ ಮತ್ತು ಗಜಾನಂದ ಸಿಂಗ್ ಜೋಡಿ 110ರನ್ ಕಲೆ ಹಾಕಿತ್ತು.
Highest parnership for USA in T20Is
131 A Gous - A Jones vs Can Dallas 2024
110 S Modani - Gajanand Singh vs Ire Lauderhill 2021
104 M Patel - S Taylor vs Can Houston 2024
104 N Kumar - C Anderson vs Can Houston 2024
ಟಿ20 ಪಂದ್ಯದಲ್ಲಿ ಬ್ಯಾಟರ್ ಸಿಡಿಸಿದ 2ನೇ ಗರಿಷ್ಠ ಸಿಕ್ಸರ್
ಈ ಪಂದ್ಯದಲ್ಲಿ ಅಮೆರಿಕದ ಜೋನ್ಸ್ ಒಟ್ಟು 10 ಸಿಕ್ಸರ್ ಗಳನ್ನು ಸಿಡಿಸಿದ್ದು, ಟಿ20 ಪಂದ್ಯವೊಂದರಲ್ಲಿ ಬ್ಯಾಟರ್ ಸಿಡಿಸಿದ ಜಂಟಿ 2ನೇ ಗರಿಷ್ಟ ಸಿಕ್ಸರ್ ಗಳಾಗಿದೆ. ಈ ಹಿಂದೆ 2016ರಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 11 ಸಿಕ್ಸರ್ ಗಳಿಸಿದ್ದು ಇದು ಟಿ20 ವಿಶ್ವಕಪ್ ಪಂದ್ಯದಲ್ಲಿ ಬ್ಯಾಟರ್ ಓರ್ವ ಸಿಡಿಸಿದ ಗರಿಷ್ಠ ಸಿಕ್ಸರ್ ಗಳಾಗಿವೆ.
Most sixes by a batter in an inngs in T20 WCs
11 C Gayle vs Eng Wankhede 2016
10 C Gayle vs SA Joburg 2007
10 A Jones vs Can Dallas 2024 *
8 R Rossouw vs Ban Sydney 2022
ಒಂದೇ ಓವರ್ ನಲ್ಲಿ ಗರಿಷ್ಠ ರನ್ 2ನೇ ಸ್ಥಾನಕ್ಕೆ ಜೆರೆಮಿ ಗೋರ್ಡನ್
ಇನ್ನು ಈ ಪಂದ್ಯದಲ್ಲಿ ಕೆನಡಾದ ಬೌಲರ್ ಜೆರೆಮಿ ಗೋರ್ಡನ್ ಒಂದೇ ಓವರ್ ನಲ್ಲಿ 33 ರನ್ ನೀಡಿ ಹೀನಾಯ ದಾಖಲೆಗೆ ಪಾತ್ರರಾಗಿದ್ದು, ಟಿ20 ವಿಶ್ವಕಪ್ ನಲ್ಲಿ ಒಂದೇ ಓವರ್ ನಲ್ಲಿ ಬೌಲರ್ ಓರ್ವ ನೀಡಿದ 2ನೇ ಗರಿಷ್ಠ ರನ್ ಗಳಾಗಿದೆ. ಈ ಹಿಂದೆ 2007ರಲ್ಲಿ ಇಂಗ್ಲೆಂಡ್ ನ ಸ್ಟುವರ್ಟ್ ಬ್ರಾಡ್ 36ರನ್ ಚಚ್ಚಿಸಿಕೊಂಡಿದ್ದರು. ಅಂದು ಭಾರತದ ಯುವರಾಜ್ ಸಿಂಗ್ ಆರು ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು.
Most runs conceded in an over in T20 WCs
36 S Broad vs Ind Durban 2007
33 Jeremy Gordon vs USA Dallas 2024 *
32 Izatullah Dawlatzai vs Eng Colombo RPS
30 Bilawal Bhatti vs Aus Mirpur 2014
Advertisement