IPL 2025 ಹರಾಜಿಗೂ ಮುನ್ನ CSK ಗೆ ಆರ್ ಅಶ್ವಿನ್ ವಾಪಸ್; ಹೊಸ ಜವಾಬ್ದಾರಿ ನೀಡಿದ ಫ್ರಾಂಚೈಸಿ

ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 2008 ರಿಂದ 2015ರವರೆಗೆ ತಾವು ಆಡಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಗೆ ಮರಳಿದ್ದು, ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಶ್ವಿನ್ ಐಪಿಎಲ್‌ 2024ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿ ಆಡಿದ್ದರು. ಈ ಹೊಸ ಜವಾಬ್ದಾರಿಯನ್ನು ಅವರಿಗೆ ಸಿಎಸ್‌ಕೆ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್ ನೀಡಿದೆ.
ಆರ್ ಅಶ್ವಿನ್
ಆರ್ ಅಶ್ವಿನ್
Updated on

ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 2008 ರಿಂದ 2015ರವರೆಗೆ ತಾವು ಆಡಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಗೆ ಮರಳಿದ್ದು, ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಶ್ವಿನ್ ಐಪಿಎಲ್‌ 2024ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿ ಆಡಿದ್ದರು. ಅಶ್ವಿನ್ ಇನ್ನೂ ಆರ‌್‌ಆರ್‌ ತಂಡದ ಸಕ್ರಿಯ ಆಟಗಾರನಾಗಿದ್ದರೂ ಸಹ, ಸಿಎಸ್‌ಕೆಯ ಹೈ-ಪರ್ಫಾರ್ಮೆನ್ಸ್ ಸೆಂಟರ್‌ ಕೇಂದ್ರದಲ್ಲಿ ಆಟಗಾರರ ಅಭಿವೃದ್ಧಿ ಮತ್ತು ಕಾರ್ಯಕ್ಷಮತೆಯ ಸುಧಾರಣೆಗೆ ಕೊಡುಗೆ ನೀಡಲು ಅವರು ಈ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಹೊಸ ಜವಾಬ್ದಾರಿಯನ್ನು ಅವರಿಗೆ ಸಿಎಸ್‌ಕೆ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್ ನೀಡಿದೆ.

ಐಪಿಎಲ್ 2025ರ ಆರಂಭದ ವೇಳೆಗೆ ಕೇಂದ್ರವು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, ಅದರ ಅಭಿವೃದ್ಧಿಯಲ್ಲಿ ವಿಶೇಷವಾಗಿ ಸಿಎಸ್‌ಕೆಯ ಅಕಾಡೆಮಿಗಳಿಗೆ ಸಂಬಂಧಿಸಿದಂತೆ ಅಶ್ವಿನ್ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ.

'ಕ್ರಿಕೆಟ್ ಅನ್ನು ಬೆಳೆಸುವುದು ಮತ್ತು ಕ್ರಿಕೆಟ್ ಬಳಗಕ್ಕೆ ಕೊಡುಗೆ ನೀಡುವುದು ನನ್ನ ಮುಖ್ಯ ಗುರಿಯಾಗಿದೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಸಂಸ್ಥೆಗೆ ಇದೀಗ ಮರಳಿರುವುದು ಸಂತೋಷವಾಗಿದೆ.' ಎಂದು ಇಂಡಿಯಾ ಸಿಮೆಂಟ್ಸ್‌ಗೆ ಹಿಂದಿರುಗಿದ ಬಗ್ಗೆ ಅಶ್ವಿನ್ ಹೇಳಿದರು.

ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಮಾತನಾಡಿ, 'ಅಶ್ವಿನ್ ನಮ್ಮ ಫ್ರಾಂಚೈಸಿಗೆ ಮರಳುತ್ತಿರುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಅವರು ಸೂಪರ್‌ಕಿಂಗ್ಸ್ ವೆಂಚರ್ಸ್ ಮತ್ತು ನಮ್ಮ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದ್ದಾರೆ. ಅವರು ತಮಿಳುನಾಡಿನ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಅವರ ಬದ್ಧತೆ ಮತ್ತು ಅವರ ಅತ್ಯುತ್ತಮ ಆಟವು ಭಾರತ, ತಮಿಳುನಾಡು ಅಥವಾ ಕ್ಲಬ್‌ಗೆ ಚಿರಪರಿಚಿತವಾಗಿದೆ. ಅವರು ಕೇಂದ್ರಕ್ಕೆ ಮಾರ್ಗದರ್ಶನ ನೀಡಲು ಮತ್ತು ಬರುವ ಯುವ ಪ್ರತಿಭೆಗಳನ್ನು ಪೋಷಿಸಲು ಉತ್ತಮ ವ್ಯಕ್ತಿಯಾಗಿರುತ್ತಾರೆ' ಎಂದು ಅವರು ಹೇಳಿದರು.

ರವಿಚಂದ್ರನ್ ಅಶ್ವಿನ್ ಅವರು ಸಿಎಸ್‌ಕೆ ತಂಡಕ್ಕೆ ಮರಳಿರುವುದು ಹೊಸ ಜವಾಬ್ದಾರಿಯ ಸಲುವಾಗಿ ಆಗಿದ್ದರೂ, ಮುಂದಿನ ದಿನಗಳಲ್ಲಿ ಅವರು ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಬಹುದು ಎಂಬ ವದಂತಿಗಳಿಗೆ ಕಾರಣವಾಗಿದೆ.

ಐಪಿಎಲ್ 2025ನೇ ಆವೃತ್ತಿಗೆ ಮುಂಚಿತವಾಗಿ ಮೆಗಾ ಹರಾಜು ನಡೆಯಲಿದೆ. ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ನಿರ್ಧಾರವಾಗದಿದ್ದರೂ, ಫ್ರಾಂಚೈಸಿಗಳು ಗರಿಷ್ಠ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅನುಮತಿ ನೀಡಬಹುದು ಎಂದು ಹೇಳಲಾಗಿದೆ. ಹಾಗೊಂದು ವೇಳೆ ಆದರೆ ಅಶ್ವಿನ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಉಳಿಸಿಕೊಳ್ಳದೇ ಇರಬಹುದು.

ಎಂಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡವು 2010 ಮತ್ತು 2011 ರಲ್ಲಿ ಸತತ ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲಲು ಅಶ್ವಿನ್ ಸಹಾಯ ಮಾಡಿದರು. ಮುಂದಿನ ನಾಲ್ಕು ಆವೃತ್ತಿಗಳಲ್ಲಿ ಸಹ ಅಶ್ವಿನ್ ಸಿಎಸ್‌ಕೆ ಪ್ರತಿ ಬಾರಿ ಪ್ಲೇಆಫ್ ತಲುಪಲು ಸಹಾಯ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com