
ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಿದ್ದತೆ ನಡೆಸುತ್ತಿರುವಂತೆಯೇ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ.
ಭಾನುವಾರ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಅಭ್ಯಾಸ ನಡೆಸುತ್ತಿದ್ದ ವೇಳೆ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಥ್ರೋ ಡೌನ್ ಸ್ಪೆಷಲಿಸ್ಟ್ ಅವರ ಎಸೆತಗಳನ್ನು ಎದುರಿಸುವ ವೇಳೆ ಚೆಂಡು ರೋಹಿತ್ ಶರ್ಮಾ ಬೆರಳಿಗೆ ರೋಹಿತ್ ಶರ್ಮಾ ಕೈಗೆ ಪೆಟ್ಟಾಗಿದೆ.
ಭಾರತೀಯ ಫಿಸಿಯೋಗಳು ಕೂಡಲೇ ರೋಹಿತ್ ಶರ್ಮಾ ಅವರನ್ನು ಪರೀಕ್ಷಿಸಿದ್ದು, ಈ ವೇಳೆ ಕೆಲ ನಿಮಿಷಗಳ ಕಾಲ ರೋಹಿತ್ ಅಭ್ಯಾಸ ಸ್ಥಗಿತಗೊಳಿಸಿದರು. ಈ ವೇಳೆ ಕೊಂಚ ಆತಂಕ ಎದುರಾಗಿತ್ತು.
ಆದರೆ ಬಳಿಕ ಸಾವರಿಸಿಕೊಂಡ ರೋಹಿತ್ ಶರ್ಮಾ ಬ್ಯಾಟಿಂಗ್ ಅಭ್ಯಾಸ ಮುಂದುವರೆಸಿದರು. ಇದು ತಂಡಕ್ಕೆ ಕೊಂಚ ಸಮಾಧಾನ ತಂದಿದೆ.
ಐರ್ಲೆಂಡ್ ವಿರುದ್ಧದ ಪಂದ್ಯದ ಸಂದರ್ಭದಲ್ಲೂ ರೋಹಿತ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ರೋಹಿತ್ ಅವರ ರಟ್ಟೆಗೆ ಚೆಂಡು ಬಡಿದಿತ್ತು. ಬಳಿಕ ಅವರು ಕ್ರೀಸ್ ತೊರೆದು ವಿಶ್ರಾಂತಿ ಪಡೆದಿದ್ದರು. ಪಂದ್ಯದ ಬಳಿಕ ಮಾತನಾಡಿದ್ದಅವರು ರಟ್ಟೆ ಸ್ವಲ್ಪ ನೋವುತ್ತಿದೆ ಎಂದಿದ್ದರು.
ಅಂದಹಾಗೆ ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ.
Advertisement