
ಭಾನುವಾರ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಹಣಾಹಣಿಗಾಗಿ ಟೀಂ ಇಂಡಿಯಾ ಎದುರು ನೋಡುತ್ತಿದ್ದು, ಭಾರತ ತಂಡದ ಮಾಜಿ ಬ್ಯಾಟರ್ ವಾಸಿಂ ಜಾಫರ್ ಅವರು ಅಕ್ಷರ್ ಪಟೇಲ್ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ನ್ಯೂಯಾರ್ಕ್‌ನ ಪಿಚ್ ತೀವ್ರ ಟೀಕೆಗೆ ಗುರಿಯಾಗಿದ್ದು, ಇಲ್ಲಿಯವರೆಗೆ ಈ ಮೈದಾನದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಕಡಿಮೆ ರನ್ ದಾಖಲಿಸಲಾಗಿದೆ. ಈ ಪಿಚ್‌ನಲ್ಲಿ ವಿಕೆಟ್‌ಗಳನ್ನು ತೆಗೆದುಕೊಳ್ಳಲು ಹೆಣಗಾಡುವ ಕುಲ್‌ದೀಪ್ ಅಂತವರಿಗಿಂತ ಅಕ್ಷರ್ ಪಟೇಲ್ ತಂಡಕ್ಕೆ ನೆರವಾಗಬಹುದು ಎಂದು ಜಾಫರ್ ಹೇಳಿದ್ದಾರೆ.
'ಯಶಸ್ವಿ ಜೈಸ್ವಾಲ್ ಅವರು ಆರಂಭಿಕರಾಗಿ ಬರಬಹುದು ಎಂದು ನಾವು ಭಾವಿಸಿದ್ದೆವು. ಆದರೆ, ಆ ಕಾಂಬಿನೇಶನ್ ಅಷ್ಟು ಸೂಕ್ತವಲ್ಲ. ಅಕ್ಷರ್ ಬ್ಯಾಟಿಂಗ್‌ನಲ್ಲೂ ಬಲ ತುಂಬಬಹುದಾದ್ದರಿಂದ ಅವರು ಆಡಬೇಕೆಂದು ನಾವು ಬಯಸುತ್ತೇವೆ. ನ್ಯೂಯಾರ್ಕ್‌ನ ಈ ಪಿಚ್‌ನಲ್ಲಿ ಇಲ್ಲಿಯವರೆಗೆ ವೇಗಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಾಗಿ, ಕುಲದೀಪ್ ಅಷ್ಟೇನು ಪ್ರಭಾವಶಾಲಿಯಾಗಿರಲಾರರು. ಗ್ರೌಂಡ್ಸ್‌ಮನ್‌ಗಳು ಪಿಚ್ ಅನ್ನು ರೋಲ್ ಮಾಡುವುದನ್ನು ಮುಂದುವರಿಸಿದರೆ ಸ್ಪಿನ್ನರ್‌ಗಳಿಗೆ ಪಿಚ್ ಸುಧಾರಿಸುವ ಸಾಧ್ಯತೆಯಿದೆ. ಇಲ್ಲಿಯವರೆಗೆ, ತಂಡಗಳು ಈ ಸ್ಥಳದಲ್ಲಿ 100 ರನ್‌ಗಳನ್ನು ದಾಟಲು ಹೆಣಗಾಡುತ್ತಿವೆ. ಆದರೆ, ಭಾರತ-ಪಾಕಿಸ್ತಾನ ಪಂದ್ಯಕ್ಕೆ ಉತ್ತಮ ಪಿಚ್‌ನ ಪ್ರಸ್ತಾಪವಿದೆ ಮತ್ತು ನಾವು ಉತ್ತಮ ಕ್ರಿಕೆಟ್ ಅನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ. ಆದರೆ ಈ ಪಿಚ್‌ನಲ್ಲಿ ವೇಗಿಗಳು ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಾರೆ ಎಂದು ಅನ್ನಿಸುತ್ತಿದೆ' ಎಂದಿದ್ದಾರೆ.
ಅಕ್ಷರ್ ಪಟೇಲ್ ಬುಧವಾರ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದರು ಮತ್ತು ವಿಕೆಟ್‌ಗಳನ್ನು ಪಡೆದರು. ಶುಕ್ರವಾರ ಇದೇ ಮೈದಾನದಲ್ಲಿ ನಡೆದ ‘ಎ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ ಜಯ ಸಾಧಿಸಿತು. ಐರ್ಲೆಂಡ್ ತಂಡವನ್ನು ಕೇವಲ 96 ರನ್‌ಗಳಿಗೆ ಆಲೌಟ್ ಮಾಡಿದ ನಂತರ, ಭಾರತ ಎಂಟು ವಿಕೆಟ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ಬೆನ್ನಟ್ಟಿತು.
ಮತ್ತೊಂದೆಡೆ, ಪಾಕಿಸ್ತಾನವು ಡಲ್ಲಾಸ್‌ನಲ್ಲಿ ನಡೆದ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಯುಎಸ್‌ಎ ಎದುರು ಹೀನಾಯ ಸೋಲು ಕಂಡಿದೆ. ರೋಮಾಂಚಕ ಸೂಪರ್ ಓವರ್‌ನಲ್ಲಿ ಸೋಲನ್ನು ಒಪ್ಪಿಕೊಂಡಿದೆ.
ಭಾರತೀಯ ಬೌಲರ್‌ಗಳು ಐರ್ಲೆಂಡ್ ಅನ್ನು 96 ರನ್‌ಗಳಿಗೆ ಆಲೌಟ್ ಮಾಡಿದರು. ಆದರೆ, ರೋಹಿತ್ ಮತ್ತು ಹಿರಿಯ ಆಟಗಾರರಿಗೆ ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ, ಮೊಹಮ್ಮದ್ ಅಮೀರ್, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ವಿರುದ್ಧದ ಸವಾಲು ತುಂಬಾ ವಿಭಿನ್ನವಾಗಿರುತ್ತದೆ ಎಂಬುದು ತಿಳಿದಿದೆ.
ಭಾರತ ಟಿ20 ವಿಶ್ವಕಪ್ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಸಂಜು ಸ್ಯಾಮ್ಸನ್, ಶಿವಂ ದುಬೆ.
ಪಾಕಿಸ್ತಾನದ ಟಿ20 ವಿಶ್ವಕಪ್ ತಂಡ
ಬಾಬರ್ ಅಜಮ್ (ನಾಯಕ), ಸೈಮ್ ಅಯೂಬ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಅಜಮ್ ಖಾನ್, ಶಾದಾಬ್ ಖಾನ್, ಇಮಾದ್ ವಾಸಿಮ್, ಹಾರಿಸ್ ರೌಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಅಬ್ಬಾಸ್ ಅಫ್ರಿದಿ, ಉಸ್ಮಾನ್ ಖಾನ್, ಅಬ್ರಾರ್ ಅಹಮದ್.
Advertisement