USA qualifying for Super 8
ಅಮೆರಿಕ ಕ್ರಿಕೆಟ್ ತಂಡ

ICC T20 WorldCup 2024: ಮಳೆಯಿಂದ ಪಂದ್ಯ ರದ್ದಾದರೂ ಸೂಪರ್ 8 ಗೆ USA ಲಗ್ಗೆ, ಇತಿಹಾಸದಲ್ಲಿ 7ನೇ ನಿದರ್ಶನ

ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್‌ಎ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯ ರದ್ದಾಗಿ ಅಂಕಗಳ ಆಧಾರದ ಮೇಲೆ ಯುಎಸ್ಎ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದ್ದು, ಆ ಮೂಲಕ ಅಪರೂಪದ ದಾಖಲೆಗೆ ಪಾತ್ರವಾಗಿದೆ.

ಪ್ಲೋರಿಡಾ: ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್‌ಎ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯ ರದ್ದಾಗಿ ಅಂಕಗಳ ಆಧಾರದ ಮೇಲೆ ಯುಎಸ್ಎ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದ್ದು, ಆ ಮೂಲಕ ಅಪರೂಪದ ದಾಖಲೆಗೆ ಪಾತ್ರವಾಗಿದೆ.

ಹೌದು.. ಅಮೆರಿಕದ ಲೌಡರ್‌ಹಿಲ್‌ನಲ್ಲಿ ಶುಕ್ರವಾರ ನಡೆಯಬೇಕಾಗಿದ್ದ ಯುಎಸ್‌ಎ ಹಾಗೂ ಐರ್ಲೆಂಡ್‌ ನಡುವಿನ ಟಿ-20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯ ಮಳೆಯಿಂದಾಗಿ ರದ್ದಾಯಿತು.

ಇದರಿಂದಾಗಿ ಎರಡೂ ತಂಡಗಳು ತಲಾ ಒಂದು ಪಾಯಿಂಟ್‌ ಗಳನ್ನು ಹಂಚಲಾಗಿದ್ದು, ಇದರೊಂದಿಗೆ ಒಟ್ಟು 5 ಅಂಕ ಗಳಿಸಿದ ಅಮೆರಿಕ ತಂಡವು ಸೂಪರ್‌ 8ಕ್ಕೆ ಲಗ್ಗೆ ಇಟ್ಟಿತು. ಆ ಮೂಲಕ ಸೂಪರ್ 8ರ ಕನಸು ಕಾಣುತ್ತಿದ್ದ ಪಾಕಿಸ್ತಾನ ತಂಡಕ್ಕೆ ಭಾರಿ ಆಘಾತ ಎದುರಾಗಿದ್ದು, ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ.

USA qualifying for Super 8
T20 World Cup: ಯುಎಸ್ v/s ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದು, ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ

ಕಳೆದ ಬಾರಿ ರನ್ನರ್ ಅಪ್ ಪಾಕಿಸ್ತಾನ ಈ ಬಾರಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದು, ಭಾರಿ ಮುಖಭಂಗ ಅನುಭವಿಸಿದೆ. ಮೊದಲ ಬಾರಿಗೆ ಟಿ-20 ವಿಶ್ವಕಪ್‌ನಲ್ಲಿ ಆಡುತ್ತಿರುವ ಅಮೆರಿಕ ತಂಡವು ಮೊದಲ ಪ್ರಯತ್ನದಲ್ಲಿಯೇ ಸೂಪರ್‌ 8 ಪ್ರವೇಶಿಸಿದೆ.

ಇತಿಹಾಸ ಬರೆದ ಅಮೆರಿಕ

ಈ ಮೂಲಕ ಕ್ರಿಕೆಟ್ ಶಿಶು ಅಮೆರಿಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇತಿಹಾಸ ಬರೆದಿದ್ದು, ತಾನಾಡಿದ ಮೊಟ್ಟ ಮೊದಲ ವಿಶ್ವಕಪ್ ಟೂರ್ನಿಯಲ್ಲೇ ಸೂಪರ್ 8 ಪ್ರವೇಶ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ಈ ಸಾಧನೆ ಮಾಡಿದ ಜಗತ್ತಿನ 6ನೇ ತಂಡ ಎಂಬ ಕೀರ್ತಿಗೆ ಯುಎಸ್ಎ ಭಾಜನವಾಗಿದ್ದು, ಟಿ20 ವಿಶ್ವಕಪ್ ಟೂರ್ನಿಯ 7ನೇ ನಿದರ್ಶನವಾಗಿದೆ. ಈ ಹಿಂದೆ 2009ರಲ್ಲಿ ಐರ್ಲೆಂಡ್, 2014ರಲ್ಲಿ ನೆದರ್ಲೆಂಡ್, 2016ರಲ್ಲಿ ಅಫ್ಘಾನಿಸ್ತಾನ, 2021ರಲ್ಲಿ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಈ ಸಾಧನೆ ಮಾಡಿದ್ದವು. ನೆದರ್ಲೆಂಡ್ 2022ರಲ್ಲೂ ಈ ಸಾಧನೆ ಮಾಡಿತ್ತು. ಇದೀಗ ಈ ಪಟ್ಟಿಗೆ ಅಮೆರಿಕ ಸೇರ್ಪಡೆಯಾಗಿದೆ.

X

Advertisement

X
Kannada Prabha
www.kannadaprabha.com