
ಸೆಂಟ್ ಲೂಸಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಇಂದಿನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.
ಇಂದು ಸೆಂಟ್ ಲೂಸಿಯಾದ ಡರೆನ್ ಸಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ ಭಾರತ ನೀಡಿದ್ದ 206ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ನಲ್ಲಿ 180 ರನ್ ಗಳಿಸಿ 25 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಈ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ ಅಧಿಕೃತವಾಗಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಹಂತಕ್ಕೇರಿದ್ದು, ಗಯಾನಾದಲ್ಲಿ ಜೂನ್ 27ರಂದು ಸೆಮಿ ಫೈನಲ್ ನಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
2022ರಲ್ಲೂ ಭಾರತ ತಂಡ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಅಂದಿನ ಪಂದ್ಯದಲ್ಲಿ 10 ವಿಕೆಟ್ ಗಳ ಹೀನಾಯ ಸೋಲು ಕಂಡಿತ್ತು.
ಹಲವು ದಾಖಲೆಗಳ ನಿರ್ಮಾಣ
ಇಂದಿನ ಮಹತ್ವದ ಪಂದ್ಯದಲ್ಲಿ ಹಲವು ಪ್ರಮುಖ ದಾಖಲೆಗಳು ನಿರ್ಮಾಣವಾಗಿದ್ದು, ಟಿ20 ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಟ ಸಿಕ್ಸರ್ ಗಳ ಪಟ್ಟಿಯಲ್ಲಿ ಇಂದಿನ ಪಂದ್ಯ ಜಂಟಿ 2ನೇ ಸ್ಥಾನಕ್ಕೇರಿದೆ.
2014ರಲ್ಲಿ ಐರ್ಲೆಂಡ್ vs ನೆದರ್ಲೆಂಡ್ ಪಂದ್ಯದಲ್ಲಿ 30 ಸಿಕ್ಸರ್ ಗಳು ದಾಖಲಾಗಿದ್ದವು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ 2010ರಲ್ಲಿ ನಡೆದ ಭಾರತ vs ಆಸ್ಟ್ರೇಲಿಯಾ ಪಂದ್ಯವಿದ್ದು ಈ ಪಂದ್ಯದಲ್ಲಿ 24 ಸಿಕ್ಸರ್ ದಾಖಲಾಗಿತ್ತು. ಇಂದಿನ ಪಂದ್ಯದಲ್ಲೂ 24 ಸಿಕ್ಸರ್ ಗಳು ದಾಖಲಾಗಿದ್ದು ಆ ಮೂಲಕ ಈ ಪಂದ್ಯ ಕೂಡ ಗರಿಷ್ಠ ಸಿಕ್ಸರ್ ದಾಖಲಾದ ಪಂದ್ಯಗಳ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನಕ್ಕೇರಿದೆ.
Most sixes in a match in T20 World Cups
30 Ire vs Net Sylhet 2014
24 Aus vs Ind Bridgetown 2010
24 Aus vs Ind Gros Islet 2024
22 Aus vs Pak Gros Islet 2010
22 Eng vs SA Wankhede 2016
ಅತ್ಯಧಿಕ ಟಿ20 ಪಂದ್ಯ ಗೆದ್ದ ನಾಯಕರ ಪಟ್ಟಿ: ಬಾಬರ್ ಅಜಂ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ
ಇನ್ನು ಇಂದಿನ ಪಂದ್ಯದ ಗೆಲುವಿನ ಮೂಲಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅತೀ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಅಲ್ಲದೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ದಾಖಲೆ ಸರಿಗಟ್ಟಿದ್ದಾರೆ. ನಾಯಕ ರೋಹಿತ್ ಶರ್ಮಾಗಿದು 48ನೇ ಜಯವಾಗಿದ್ದು. ಆ ಮೂಲಕ ಅಷ್ಟೇ ಪಂದ್ಯ ಗೆದ್ದ ಬಾಬರ್ ಅಜಂ ಜೊತೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.
Most wins as captain in T20Is (including Super Over wins)
48 Rohit Sharma (60 mat)
48 Babar Azam (85)
45 Brian Masaba (60)
44 Eoin Morgan (72)
ಭಾರತಕ್ಕೆ ಸತತ ಟಿ20 ಜಯ
ಇಂದಿನ ಪಂದ್ಯದ ಗೆಲುವು ಸೇರಿದಂತೆ ಭಾರತ ತಂಡ 2ನೇ ಅತಿ ಹೆಚ್ಚು ಸತತ ಟಿ20 ಜಯ ಸಾಧಿಸಿದೆ. ಭಾರತ ತಂಡ ಡಿಸೆಂಬರ್ 2023ರಿಂದ ಜೂನ್ (ಇಂದಿನ ಪಂದ್ಯವೂ ಸೇರಿ) 2024ರವರೆಗೂ ಸತತ 10 ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ ನವೆಂಬರ್ 2021ರಿಂದ ಫೆಬ್ರವರಿ 2022ರವರೆಗೆ ಸತತ 12 ಟಿ20 ಪಂದ್ಯಗಳನ್ನು ಗೆದ್ದಿತ್ತು.
Most consecutive wins for India in T20Is
12 bw Nov 2021 & Feb 2022
10 bw Dec 2023 & June 2024 *
9 bw Jan 2020 & Dec 2020
Advertisement