ICC T20 WorldCup 2024: ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತ ಭರ್ಜರಿ ಬ್ಯಾಟಿಂಗ್, ದಾಖಲೆ ನಿರ್ಮಾಣ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತ ತಂಡ ದಾಖಲೆ ನಿರ್ಮಿಸಿದೆ.
3rd Highest totals for India in T20 World Cups
ಭಾರತ ತಂಡದ ಭರ್ಜರಿ ಬ್ಯಾಟಿಂಗ್

ಸೆಂಟ್ ಲೂಸಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತ ತಂಡ ದಾಖಲೆ ನಿರ್ಮಿಸಿದೆ.

ಇಂದು ಸೆಂಟ್ ಲೂಸಿಯಾದ ಡರೆನ್ ಸಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಾಯಕ ರೋಹಿತ್ ಶರ್ಮಾರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿದೆ. ಆ ಮೂಲಕ ಟಿ20 ವಿಶ್ವಕಪ್ ನಲ್ಲಿ ತನ್ನ 3ನೇ ಗರಿಷ್ಠ ಮೊತ್ತ ಪೇರಿಸಿದೆ.

3rd Highest totals for India in T20 World Cups
ICC T20 WorldCup 2024: ಕೊಹ್ಲಿ ಡಕೌಟ್, ರೋಹಿತ್ ಭರ್ಜರಿ ಬ್ಯಾಟಿಂಗ್, ಪ್ರಬಲ ಆಸ್ಟ್ರೇಲಿಯಾಗೆ ಬೃಹತ್ ಗುರಿ ನೀಡಿದ ಭಾರತ

ಈ ಹಿಂದೆ 2007ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 218ರನ್ ಕಲೆಹಾಕಿತ್ತು. ಇದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗಳಿಸಿದ ಗರಿಷ್ಟ ಮೊತ್ತವಾಗಿದೆ. ಬಳಿಕ 2021ರಲ್ಲಿ ಅಫ್ಘಾನಿಸ್ತಾನ ವಿರುದ್ಧ 210 ರನ್ ಗಳಿಸಿತ್ತು. ಇಂದು ಆಸ್ಟ್ರೇಲಿಯಾ ವಿರುದ್ಧ 205ರನ್ ಕಲೆಹಾಕಿದೆ.

Highest totals for India in T20 World Cups

  • 218/4 vs Eng Durban 2007

  • 210/2 vs Afg Abu Dhabi 2021

  • 205/5 vs Aus Gros Islet 2024

  • 196/5 vs Ban North Sound 2024

ಗರಿಷ್ಠ ಸಿಕ್ಸರ್ ಗಳು, ತನ್ನದೇ ದಾಖಲೆ ಮುರಿದ ಭಾರತ

ಇಂದಿನ ಪಂದ್ಯದಲ್ಲಿ ಭಾರತ ತಂಡದ ಪರ ಒಟ್ಟು 15 ಸಿಕ್ಸರ್ ಗಳು ಹರಿದುಬಂದಿದ್ದು, ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಗಳಿಸಿದ ಗರಿಷ್ಠ ಸಿಕ್ಸರ್ ಗಳ ಸಂಖ್ಯೆ ಇದಾಗಿದೆ.

ಇದಕ್ಕೂ ಮೊದಲು ಹಾಲಿ ಟೂರ್ನಿಯಲ್ಲೇ ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಒಟ್ಟು 13 ಸಿಕ್ಸರ್ ಗಳನ್ನು ಸಿಡಿಸಿತ್ತು. ಆ ಮೂಲಕ ಆ ದಾಖಲೆಯನ್ನು ಹಿಂದಿಕ್ಕಿದೆ. ಅಲ್ಲದೆ ಹಾಲಿ ವರ್ಷದಲ್ಲಿ ಟಿ20 ಪಂದ್ಯವೊಂದರಲ್ಲಿ ಭಾರತ ತಂಡ ಸಿಡಿಸಿದ ಗರಿಷ್ಠ ಸಿಕ್ಸರ್ ಗಳ ಸಂಖ್ಯೆ ಕೂಡ ಇದಾಗಿದೆ.

15 maximums for India today - the most sixes by them in an inngs in T20 World Cups surpassing 13 they hit in the previous game against Bangladesh in North Sound. It is also the most by a team in this year's T20 World Cup.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com