ICC T20 World Cup 2024: ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ, ಹಲವು ದಾಖಲೆ ಬರೆದ ಭಾರತ

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿ ಫೈನಲ್ ಗೇರಿದ್ದು, ಈ ಮೂಲಕ ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳ ಪುನರ್ ನಿರ್ಮಾಣ ಮಾಡಿದೆ.
India creates many Records by beating England
ಟೀಂ ಇಂಡಿಯಾ

ಗಯಾನ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿ ಫೈನಲ್ ಗೇರಿದ್ದು, ಈ ಮೂಲಕ ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳ ಪುನರ್ ನಿರ್ಮಾಣ ಮಾಡಿದೆ.

ಹೌದು.. ಗಯಾನದ ಪ್ರಾವಿಡೆಂಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 68 ರನ್ ಗಳ ಜಯಭೇರಿ ಬಾರಿಸಿದ್ದು ಮಾತ್ರವಲ್ಲದೇ ಹಾಲಿ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇರಿಸಿದೆ.

ಈ ಪಂದ್ಯದ ಗೆಲುವಿನ ಮೂಲಕ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಲವು ದಾಖಲೆಗಳು ಪುನರ್ ನಿರ್ಮಾಣವಾಗಿದೆ.

India creates many Records by beating England
ಭಾರತ ತಂಡಕ್ಕಾಗಿಯೇ ICC T20 World Cup 2024 ಆಯೋಜನೆ: ಮೈಕೆಲ್ ವಾನ್ ಆರೋಪ, ವಿಚಿತ್ರ ತಿರುಗೇಟು ಕೊಟ್ಟ ಆರ್ ಅಶ್ವಿನ್

ಟಿ20 ವಿಶ್ವಕಪ್ ನಲ್ಲಿ ಭಾರತಕ್ಕೆ 4ನೇ ಅತಿ ದೊಡ್ಡ ಜಯ

ನಿನ್ನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗಳಿಸಿದ 68 ರನ್ ಗಳ ಜಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತಕ್ಕೆ ಸಿಕ್ಕ 4ನೇ ಅತಿ ದೊಡ್ಡ ಜಯವಾಗಿದೆ. ಈ ಹಿಂದೆ 2012ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಭಾರತ 90 ರನ್ ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಇದು ಭಾರತಕ್ಕೆ ಟಿ20 ಕ್ರಿಕೆಟ್ ವಿಶ್ವಕಪ್ ನಲ್ಲಿ ರನ್ ಲೆಕ್ಕಾಚಾರದಲ್ಲಿ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ.

Biggest win margins for India in T20 WC

  • 90 runs vs ENG, Colombo RPS, 2012

  • 73 runs vs AUS, Mirpur, 2014

  • 71 runs vs ZIM, Melbourne, 2022

  • 68 runs vs ENG, Providence, 2024 SF

  • 66 runs vs AFG, Abu Dhabi, 2021

ಟಿ20 ವಿಶ್ವಕಪ್ ನಾಕೌಟ್ ನಲ್ಲಿ 2ನೇ ಅತೀ ದೊಡ್ಡ ಜಯ

ಅಂತೆಯೇ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ನಾಕೌಟ್ ಹಂತದಲ್ಲಿ ತಂಡವೊಂದು ಗಳಿಸಿದ 2ನೇ ಅತೀ ದೊಡ್ಡ (ರನ್ ಲೆಕ್ಕಾಚಾರದಲ್ಲಿ) ಗೆಲುವಾಗಿದೆ. ಈ ಹಿಂದೆ 2012ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊಲಂಬೋದಲ್ಲಿ ನಡೆದ ಸೆಮಿ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾವನ್ನು 74ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ದಾಖಲಾಗಿರುವ ಅತೀ ದೊಡ್ಡ ಜಯವೆಂದು ದಾಖಲಾಗಿದೆ.

Biggest win-margins in T20 WC knockouts (by runs)

  • 74 runs - WI vs AUS, Colombo RPS, 2012 SF

  • 68 runs - IND vs ENG, Providence, 2024 SF

  • 57 runs - SL vs WI, The Oval, 2009 SF

  • 36 runs - WI vs SL, Colombo RPS, 2012 final

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com