ICC T20 World Cup 2024 ಟೂರ್ನಿಯಲ್ಲಿ ಭಾರತೀಯ ಬೌಲರ್ ಗಳ ಅಮೋಘ ದಾಖಲೆ, ಗರಿಷ್ಠ ವಿಕೆಟ್ ಸಾಧನೆ

ಈ ಟೂರ್ನಿಯಲ್ಲಿ ಒಟ್ಟು 17 ವಿಕೆಟ್ ಪಡೆದ ಭಾರತದ ಅರ್ಶ್ ದೀಪ್ ಸಿಂಗ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
Indian Bowlers Create huge record in T20 World Cup
ಭಾರತ ತಂಡದ ಬೌಲರ್ ಗಳು
Updated on

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಬೌಲರ್ ಗಳು ಅಮೋಘ ಪ್ರದರ್ಶನ ನೀಡಿದ್ದು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದಾರೆ.

ಹೌದು.. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಯಶಸ್ಸಿನ ಪಯಣದಲ್ಲಿ ಬ್ಯಾಟರ್ ಗಳಷ್ಟೇ ಪರಿಣಾಮಕಾರಿಯಾಗಿದ್ದು ಬೌಲರ್ ಗಳ ಪ್ರದರ್ಶನ ಕೂಡ.

ನಿರ್ಣಾಯಕ ಘಟ್ಟದಲ್ಲಿ ಭಾರತೀಯ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಇದೀಗ ತಮ್ಮ ಈ ಅಮೋಘ ಪ್ರದರ್ಶನದ ಮೂಲಕವೇ ದಾಖಲೆ ನಿರ್ಮಿಸಿದ್ದಾರೆ.

Indian Bowlers Create huge record in T20 World Cup
ICC T20 World Cup 2024: ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ದಾಖಲೆ; Virat Kohli ಇರುವ ಎಲೈಟ್ ಗ್ರೂಪ್ ಗೆ Jasprit Bumrah ಸೇರ್ಪಡೆ!

ಗರಿಷ್ಠ ವಿಕೆಟ್: ಅರ್ಶದೀಪ್ ಸಿಂಗ್ ವಿಶೇಷ ದಾಖಲೆ

ಇನ್ನು ಈ ಟೂರ್ನಿಯಲ್ಲಿ ಒಟ್ಟು 17 ವಿಕೆಟ್ ಪಡೆದ ಭಾರತದ ಅರ್ಶ್ ದೀಪ್ ಸಿಂಗ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇದೇ ಟೂರ್ನಿಯಲ್ಲಿ ಆಫ್ಘಾನಿಸ್ತಾನದ ಫಜಲಾಕ್ ಫರೂಕಿ ಕೂಡ 17 ವಿಕೆಟ್ ಪಡೆದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮತ್ತೋರ್ವ ಬೌಲರ್ ಜಸ್ ಪ್ರೀತ್ ಬುಮ್ರಾ ಜಂಟಿ 3ನೇ ಸ್ಥಾನದಲ್ಲಿದ್ದು, ಒಟ್ಟು 15 ವಿಕೆಟ್ ಪಡೆದಿದ್ದಾರೆ.

Most wickets in a T20 WC edition

  • 17 - Fazalhaq Farooqi (AFG, 2024)

  • 17 - Arshdeep Singh (IND, 2024)

  • 16 - Wanindu Hasaranga (SL, 2021)

  • 15 - Ajantha Mendis (SL, 2012)

  • 15 - Wanindu Hasaranga (SL, 2022)

  • 15 - Anrich Nortje (SA, 2024)

  • 15 - Jasprit Bumrah (IND, 2024)

ವಿಶ್ವಕಪ್ ಫೈನಲ್ ನಲ್ಲಿ ಉತ್ತಮ ಪ್ರದರ್ಶನ; ಬುಮ್ರಾ ದಾಖಲೆ

ಇನ್ನು ಈ ಟೂರ್ನಿಯ ಫೈನಲ್ ನಲ್ಲಿ ಮ್ಯಾಜಿಕಲ್ ಓವರ್ ಮಾಡಿದ ಹಾರ್ದಿಕ್ ಪಾಂಡ್ಯ ಕೇವಲ 20 ರನ್ ನೀಡಿ 3 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಆ ಮೂಲಕ ವಿಶ್ವಕಪ್ ಫೈನಲ್ ಇತಿಹಾಸದಲ್ಲಿ 4ನೇ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು 2012ರಲ್ಲಿ ಕೊಲಂಬೋದಲ್ಲಿ ವಿಂಡೀಸ್ ವಿರುದ್ಧ ಅಜಂತಾ ಮೆಂಡಿಸ್ 12 ರನ್ ಗೆ 4 ವಿಕೆಟ್ ಪಡೆದಿದ್ದರು.

Best bowling figures in T20 World Cup finals

  • 4/12 - Ajantha Mendis vs WI, Colombo 2012

  • 3/9 - Sunil Narine vs SL, Colombo 2012

  • 3/12 - Sam Curran vs PAK, Melbourne 2022

  • 3/20 - Hardik Pandya vs SA, Bridgetown 2024

Indian Bowlers Create huge record in T20 World Cup
T20 World Cup 2024: 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಒನ್ ಅಂಡ್ ಓನ್ಲಿ ಬುಮ್ರಾ!

Lowest Economy Rate ಬುಮ್ರಾ ದಾಖಲೆ

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಅತ್ಯಂತ ಕಡಿಮೆ Economy Rate ಹೊಂದಿದ ಬೌಲರ್ ಗಳ ಪಟ್ಟಿಯಲ್ಲಿ ಭಾರತದ ಜಸ್ ಪ್ರೀತ್ ಬುಮ್ರಾ ಅಗ್ರಸ್ಥಾನಕ್ಕೇರಿದ್ದು, ಹಾಲಿ ಟೂರ್ನಿಯಲ್ಲಿ ಬುಮ್ರಾ ಕೇವಲ 4.17Economy Rate ಹೊಂದುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. 2014ರಲ್ಲಿ ವೆಸ್ಟ್ ಇಂಡೀಸ್ ನ ಸುನಿಲ್ ನರೇನ್ 4.60 Economy Rate ನಲ್ಲಿ ಬೌಲಿಂಗ್ ಮಾಡಿದ್ದರು. ಇದು ಈ ವರೆಗಿನ Lowest Economy Rate ಬೌಲಿಂಗ್ ಪ್ರದರ್ಶನವಾಗಿತ್ತು.

Lowest ER in a T20 WC edition

  • 4.17 - Jasprit Bumrah (2024)

  • 4.60 - Sunil Narine (2014)

  • 5.20 - W Hasarnaga (2021)

  • 5.32 - Shahid Afridi (2009)

  • 5.33 - D Vettori (2007)

2ನೇ ಬಾರಿಗೆ ಸ್ಕೋರ್ ಡಿಫೆಂಡ್ ಮಾಡಿ ಗೆದ್ದ ಭಾರತ

ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಸ್ಕೋರ್ ಡಿಫೆಂಡ್ ಮಾಡಿ ವಿಶ್ವಕಪ್ ಜಯಿಸಿದ ಮೂರನೇ ನಿದರ್ಶನ ಇದಾಗಿದೆ. ಈ ಹಿಂದೆ 2007ರಲ್ಲಿ ಇದೇ ಭಾರತ ತಂಡ ಹಾಗೂ 2012ರಲ್ಲಿ ವೆಸ್ಟ್ ಇಂಡೀಸ್ ತಂಡ ಸ್ಕೋರ್ ಡಿಫೆಂಡ್ ಮಾಡಿ ಫೈನಲ್ ಜಯಿಸಿದ್ದವು. ಉಳಿದೆಲ್ಲಾ ಫೈನಲ್ ಪಂದ್ಯಗಳಲ್ಲಿ ಗೆದ್ದ ತಂಡಗಳು ಚೇಸಿಂಗ್ ಮಾಡಿ ಪ್ರಶಸ್ತಿ ಜಯಿಸಿದ್ದವು.

Only the 3rd time a team won the T20 WC final while defending the target after India in 2007 and West Indies in 2012.

ಅಜೇಯವಾಗಿ ಪ್ರಶಸ್ತಿ ಗೆದ್ದ ಮೊದಲ ತಂಡ ಭಾರತ

ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲೇ ಟೂರ್ನಿಯ ಯಾವುದೇ ಪಂದ್ಯ ಸೋಲದೇ ಅಜೇಯವಾಗಿ ಪ್ರಶಸ್ತಿ ಗೆದ್ದ ಮೊದಲ ತಂಡ ಕೀರ್ತಿಗೆ ಭಾರತ ಭಾಜನವಾಗಿದೆ. ಈ ಟೂರ್ನಿಯಲ್ಲಿ ಫೈನಲ್ ಸೇರಿದಂತೆ ಭಾರತ ಒಟ್ಟು 8 ಪಂದ್ಯಗಳಲ್ಲಿ ಜಯಿಸಿದೆ.

India became the first team to win a T20 World Cup by being unbeaten through the tournament.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com