RCB vs UPW: ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಸಿಕ್ಸರ್ ಮೋಡಿಗೆ ಕಾರಿನ ಕಿಟಕಿ ಗಾಜು ಪುಡಿ ಪುಡಿ!

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ತಮ್ಮ ಅದ್ಭುತ ಪ್ರದರ್ಶನದಿಂದ ಈಗಾಗಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ.
ಸಿಕ್ಸರ್ ಸಿಡಿಸಿದ ಎಲ್ಲಿಸ್ ಪೆರ್ರಿ
ಸಿಕ್ಸರ್ ಸಿಡಿಸಿದ ಎಲ್ಲಿಸ್ ಪೆರ್ರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ತಮ್ಮ ಅದ್ಭುತ ಪ್ರದರ್ಶನದಿಂದ ಈಗಾಗಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ.

ಸೋಮವಾರ ಮಹಿಳಾ ಪ್ರೀಮಿಯರ್ ಲೀಗ್ (WPL) 2024 ರ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಪೆರ್ರಿ, ದೀಪ್ತಿ ಶರ್ಮಾ ಅವರ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಈ ವೇಳೆ ಚೆಂಡು ಬೌಂಡರಿ ಗೆರೆ ಬಳಿ ನಿಲ್ಲಿಸಿದ್ದ ಟಾಟಾ ಪಂಚ್ ಕಾರಿನ ಕಿಟಕಿಯ ಗಾಜಿಗೆ ಬಡಿಯಿತು.

ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ತಂಡ ಬೃಹತ್ ಮೊತ್ತ ಕಲೆಹಾಕಿತು. ಸ್ಮೃತಿ ಮಂಧಾನ ಜೊತೆ ಸೋಫಿ ಡಿವೈನ್ ಬದಲಾಗಿ ಎಸ್ ಮೇಘನಾ ಇನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್‌ ಪತನದ ವೇಳೆಗೆ ಈ ಜೋಡಿ 51 ರನ್ ಕಲೆಹಾಕಿತು. ಮೇಘನಾ 21 ಎಸೆತಗಳಲ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಮೇಘನಾ ಔಟಾದ ಬಳಿಕ ಜೊತೆಯಾದ ಮಂಧಾನ ಮತ್ತು ಎಲ್ಲಿಸ್ ಪೆರ್‍ರಿ ಜೋಡಿ 95 ರನ್‌ಗಳನ್ನು ಕಲೆಹಾಕಿದರು. ಸ್ಮೃತಿ ಮಂಧಾನ 50 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್ ಸಹಿತ 80 ರನ್ ಗಳಿಸಿದರು. ಎಲ್ಲಿಸ್ ಪೆರ್‍ರಿ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸುವ ಮೂಲಕ 58 ರನ್ ಗಳಿಸಿದರು.

ಸಿಕ್ಸರ್ ಸಿಡಿಸಿದ ಎಲ್ಲಿಸ್ ಪೆರ್ರಿ
WPL 2024: ಸೋಲಿನ ಸರಪಳಿ ಕಳಚಿದ RCB, ಯುಪಿ ವಿರುದ್ಧ ಭರ್ಜರಿ ಜಯ, ಒಂದು ಸ್ಥಾನ ಮೇಲಕ್ಕೆ

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಎಲ್ಲಿಸ್ ಪೆರ್ರಿ 18ನೇ ಓವರ್‌ನ 5ನೇ ಎಸೆತದಲ್ಲಿ ದೀಪ್ತಿ ಶರ್ಮಾ ಅವರಿಗೆ ಸಿಕ್ಸರ್ ಬಾರಿಸಿದರು. ಅವರು ಹೊಡೆದ ಚೆಂಡು ನೇರವಾಗಿ ಬೌಂಡರಿ ಗೆರೆ ಬಳಿ ನಿಲ್ಲಿಸಿದ್ದ ಟಾಟಾ ಪಂಚ್ ಕಾರಿನ ಗಾಜಿಗೆ ತಾಗಿ, ಅದು ಪುಡಿ ಪುಡಿಯಾಯಿತು. ಇದನ್ನು ಕಂಡ ಪೆರ್ರಿ ಕೂಡ ತಲೆ ಮೇಲೆ ಕೈ ಹೊತ್ತುಕೊಂಡರು.

ಡಗ್-ಔಟ್‌ನಲ್ಲಿದ್ದ ಆರ್‌ಸಿಬಿ ಆಟಗಾರರು ಪೆರ್ರಿ ಆ ಅದ್ಭುತ ಕಾರ್ಯ ಕಂಡ ಸಂತೋಷಗೊಂಡರು.

ಮಹಿಳಾ ಪ್ರೀಮಿಯರ್ ಲೀಗ್ 2024 ರ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯ ಇದಾಗಿದ್ದು, ಮುಂದಿನ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com