WPL 2024: ಸರಣಿ ಸೋಲಿಗಳಿಂದ ಹೊರಬಂದ RCB, ಯುಪಿ ವಿರುದ್ಧ ಭರ್ಜರಿ ಜಯ, ಒಂದು ಸ್ಥಾನ ಮೇಲಕ್ಕೆ!

ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ 2 ಸೋಲುಗಳ ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಕೊನೆಗೂ ಜಯ ಸಾಧಿಸಿದ್ದು, ಯುಪಿ ವಾರಿಯರ್ಸ್ ಮಹಿಳಾ ತಂಡದ ವಿರುದ್ಧ 23 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
RCBಗೆ ಭರ್ಜರಿ ಜಯ
RCBಗೆ ಭರ್ಜರಿ ಜಯ

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ 2 ಸೋಲುಗಳ ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಕೊನೆಗೂ ಜಯ ಸಾಧಿಸಿದ್ದು, ಯುಪಿ ವಾರಿಯರ್ಸ್ ಮಹಿಳಾ ತಂಡದ ವಿರುದ್ಧ 23 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಆರ್ ಸಿಬಿ ನೀಡಿದ 199 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಯುಪಿ ವಾರಿಯರ್ಸ್ ಮಹಿಳಾ ತಂಡ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ 23 ರನ್ ಗಳ ಅಂತರಗಲ್ಲಿ ಸೋಲುಕಂಡಿತು. ಯುಪಿ ಪರ ನಾಯಕಿ ಅಲಿಸ್ಸಾ ಹೀಲಿ (55 ರನ್), ದೀಪ್ತಿ ಶರ್ಮಾ (33ರನ್), ಪೂನಂ ಖೆಮ್ನಾರ್ (31 ರನ್) ಗೆಲುವಿಗಾಗಿ ಸೆಣಸಾಡಿದರಾದರೂ, ಅಂತಿಮ ಹಂತದಲ್ಲಿ ಆರ್ ಸಿಬಿಯ ಪ್ರಬಲ ಬೌಲಿಂಗ್ ನಿಂದಾಗಿ ಗೆಲುವಿನ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.

RCBಗೆ ಭರ್ಜರಿ ಜಯ
WPL: ಆರ್ ಸಿಬಿ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ನೇಮಕ

ಆರ್ ಸಿಬಿ ಪರ ಸೋಫಿ ಡಿವೈನ್, ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್ ಮತ್ತು ಆಶಾ ಶೋಭಾನ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ನಾಯಕಿ ಸ್ಮೃತಿ ಮಂದಾನ (80 ರನ್) ಮತ್ತು ಎಲಿಸ್ ಪೆರ್ರಿ (58 ರನ್)ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ 198 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಕೇವಲ 50 ಎಸೆತಗಳನ್ನು ಎದುರಿಸಿದ ಮಂದಾನಾ 3 ಭರ್ಜರಿ ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 80 ರನ್ ಗಳಿಸಿದರೆ, ಎಲಿಸ್ ಪೆರ್ರಿ 37 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 58 ರನ್ ಗಳಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಒಂದು ಸ್ಥಾನ ಮೇಲಕ್ಕೆ

ಇನ್ನು ಇಂದಿನ ಪಂದ್ಯದ ಗೆಲುವಿನ ಮೂಲಕ ಆರ್ ಸಿಬಿ ಅಂಕ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೆರಿದ್ದು, 5ನೇ ಸ್ಥಾನದಲ್ಲಿದ್ದ ಆರ್ ಸಿಬಿ ಇದೀಗ 4ನೇ ಸ್ಥಾನಕ್ಕೇರಿದೆ. 4ರಲ್ಲಿದ್ದ ಯುಪಿ 5ನೇ ಸ್ಥಾನಕ್ಕೆ ಕುಸಿದಿದೆ.

wpl ಅಂಕ ಪಟ್ಟಿ
wpl ಅಂಕ ಪಟ್ಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com