ರಿಷಬ್ ಪಂತ್​ ಎಂಬ ಒಬ್ಬ ಆಟಗಾರನಿದ್ದಾನೆ...: Bazball​ ಕ್ರಿಕೆಟ್​ ಕುರಿತ ಇಂಗ್ಲೆಂಡ್ ಆಟಗಾರನ ಹೇಳಿಕೆಗೆ Rohit Sharma ತಿರುಗೇಟು!

ಟೆಸ್ಟ್ ಕ್ರಿಕೆಟ್​ನಲ್ಲಿ ಆಕ್ರಮಣಕಾರಿಯಾಗಿ ಆಡುವ ಬಾಜ್​ ಬಾಲ್(Bazball) ಕ್ರಿಕೆಟ್ ಕುರಿತ ಇಂಗ್ಲೆಂಡ್ ಆಟಗಾರ ಬೆನ್​ ಡಕ್ಕೆಟ್(Ben Duckett)​ಹೇಳಿಕೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಡಕ್ ತಿರುಗೇಟು ನೀಡಿದ್ದಾರೆ.
ರೋಹಿತ್ ಶರ್ಮಾ-ರಿಷಬ್ ಪಂತ್
ರೋಹಿತ್ ಶರ್ಮಾ-ರಿಷಬ್ ಪಂತ್
Updated on

ಧರ್ಮಶಾಲಾ: ಟೆಸ್ಟ್ ಕ್ರಿಕೆಟ್​ನಲ್ಲಿ ಆಕ್ರಮಣಕಾರಿಯಾಗಿ ಆಡುವ ಬಾಜ್​ ಬಾಲ್(Bazball) ಕ್ರಿಕೆಟ್ ಕುರಿತ ಇಂಗ್ಲೆಂಡ್ ಆಟಗಾರ ಬೆನ್​ ಡಕ್ಕೆಟ್ (Ben Duckett)​ಹೇಳಿಕೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಡಕ್ ತಿರುಗೇಟು ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಆಕ್ರಮಣಕಾರಿಯಾಗಿ ಆಡುವ ಬಾಜ್​ ಬಾಲ್(Bazball) ಮಾದರಿಯಿಂದ ಯಶಸ್ವಿ ಜೈಸ್ವಾಲ್ (Yashasvi Jaiswal)​ ಬ್ಯಾಟಿಂಗ್​ ಕಲಿತರು ಎಂದು ಹೇಳಿದ್ದ ಇಂಗ್ಲೆಂಡ್​​ ತಂಡದ ಬ್ಯಾಟರ್​ ಬೆನ್​ ಡಕ್ಕೆಟ್(Ben Duckett)ಗೆ​ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ(Rohit Sharma) ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ರೋಹಿತ್ ಶರ್ಮಾ-ರಿಷಬ್ ಪಂತ್
''ಕರೆ ಕಟ್ ಮಾಡ್ತಾನೆ.. ಇದೇನಾ ಹಿರಿಯರಿಗೆ ನೀಡುವ ಗೌರವ'': ಅಶ್ವಿನ್ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಆಕ್ರೋಶ

ಇಂಗ್ಲೆಂಡ್​ ವಿರುದ್ಧ ನಾಳೆ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಟೆಸ್ಟ್​ ಪಂದ್ಯದ ಭಾಗವಾಗಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​, ‘ನನಗೆ ಈಗಲೂ ಬಾಜ್​ ಬಾಲ್​ ಕ್ರಿಕೆಟ್​ ಎಂದರೆ ಏನು ಎಂದು ಗೊತ್ತಿಲ್ಲ. ಆ ರೀತಿ ಆಕ್ರಮಣಕಾರಿ ಆಟ ಆಡುವವರನ್ನು ಕೂಡ ನಾನು ನೋಡಿಲ್ಲ. ನೈಜ ಟೆಸ್ಟ್​ ಆಡುವುದು ಮಾತ್ರ ನನಗೆ ತಿಳಿದಿದೆ. ಬೆನ್ ಡಕೆಟ್​​ ಬಹುಶಃ ರಿಷಭ್​ ಪಂತ್(Rishabh Pant)​ ಆಟ ನೋಡಿಲ್ಲ ಎನಿಸುತ್ತೆ. ನಮ್ಮ ಟೀಮ್​​ನಲ್ಲಿ ರಿಷಬ್ ಪಂತ್​ ಎಂಬ ಒಬ್ಬ ಆಟಗಾರನಿದ್ದಾನೆ, ಅವನ ಆಟವನ್ನು ಡಕೆಟ್​ ನೋಡಬೇಕಿತ್ತು’ ಎಂದು ಹೇಳುವ ಮೂಲಕ ಆಂಗ್ಲ ದಾಂಡಿಗನ ದರ್ಪದ ಮಾತುಗಳಿ​ಗೆ ಖಡಕ್ ತಿರುಗೇಟು ನೀಡಿದ್ದಾರೆ.

ಏಷ್ಟಕ್ಕೂ ಏನಿದು ಬಾಜ್ ಬಾಲ್ ಕ್ರಿಕೆಟ್?

ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್ ಅವರ ನೇತೃತ್ವದಲ್ಲಿ ಟೆಸ್ಟ್ ಪಂದ್ಯಗಳಿಗಾಗಿ ಇಂಗ್ಲೆಂಡ್‌ನ ಹೊಸ ತಂತ್ರವನ್ನು ಉಲ್ಲೇಖಿಸುವ "ಬಾಜ್‌ಬಾಲ್" ಪದವು ಕ್ರಿಕೆಟ್ ಭ್ರಾತೃತ್ವದಲ್ಲಿ ಗಮನಾರ್ಹ ಗಮನವನ್ನು ಪಡೆದುಕೊಂಡಿದೆ. ಬ್ರೆಂಡನ್ ಮೆಕಲಮ್ ಮತ್ತು ಬೆನ್ ಸ್ಟೋಕ್ಸ್ ತಮ್ಮ ಆಟದ ಶೈಲಿಯನ್ನು ಟೆಸ್ಟ್ ಸ್ವರೂಪದಲ್ಲಿ ಮಾರ್ಪಡಿಸಲು "ಬಾಜ್‌ಬಾಲ್" ಕ್ರಮವನ್ನು ಬಳಸುವುದರೊಂದಿಗೆ, ಇಂಗ್ಲೆಂಡ್ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಶೈಲಿ ಮೂಲಕ ತನ್ನನ್ನು ತಾನೇ ಮರು ವ್ಯಾಖ್ಯಾನಿಸಿಕೊಂಡಿದೆ. "ಬಾಜ್‌ಬಾಲ್" ಎಂಬುದು ಯಾವುದೇ-ಹಿಡಿತ-ತಡೆಯಿಲ್ಲದ ಕಾರ್ಯತಂತ್ರವಾಗಿದ್ದು ಅದು ವಾಕ್ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುತ್ತದೆ. ಯಾವುದೇ ಕಾರಣದಿಂದ ಪಂದ್ಯ ಗೆಲ್ಲುವ ತಂತ್ರಗಾರಿಕೆಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಇಂಗ್ಲಿಷ್ ಕ್ರಿಕೆಟಿಗರು ಆಕ್ರಮಣಕಾರಿ ಶೈಲಿಯನ್ನು ಅಳವಡಿಸಿಕೊಂಡಿದೆ.

ಇದೇ ಬಾಜ್ ಬಾಲ್ ಹೇಳಿಕೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ, 'ಬಾಜ್​ ಬಾಲ್​ಗಿಂತಲೂ ಪಂತ್ ಅಪಾಯಕಾರಿ' ಎಂದು ಹೇಳುವ ಮೂಲಕ ಬಾಜ್​ ಬಾಲ್ ಕುರಿತು ಜಂಬ ಕೊಚ್ಚಿಕೊಂಡ ಡಕೆಟ್​ಗೆ ಮುಟ್ಟಿ ನೋಡುವ ಹಾಗೆ ಟಾಂಗ್​ ಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com